• Home
  • »
  • News
  • »
  • state
  • »
  • Crime News: ಪತ್ನಿಯನ್ನ ಕೊಂದು, ಬೆಡ್​ಶೀಟ್​​ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ

Crime News: ಪತ್ನಿಯನ್ನ ಕೊಂದು, ಬೆಡ್​ಶೀಟ್​​ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

ನಾಲ್ಕೈದು ದಿನಗಳ ಹಿಂದೆ ಕೊಲೆ ಮಾಡಿರೋದರಿಂದ ಶವ ಗುರುತು ಸಿಗದ ಸ್ಥಿತಿಯಲ್ಲಿ ಕೊಳೆತು ಹೋಗಿತ್ತು. ಕೊಲೆ ನಡೆದ ದಿನವೂ ಪತಿ-ಪತ್ನಿ ನಡುವೆ ಜಗಳ ಉಂಟಾಗಿ, ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

  • Share this:

ಬೆಡ್ಶೀಟ್ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಹಿಳೆಯ ಶವ (Woman Dead body) ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರ ಭಾಗದ ಹೆಬ್ಬಗೋಡಿ (Hebbagodi, Bengaluru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಿರುಪಾಳ್ಯದ ವಿನಾಯಕ ನಗರದ ಬಿಲ್ಡಿಂಗ್ ಒಂದರ ಮೂರನೇ ಮಹಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. 24 ವರ್ಷದ ಶೃತಿ ಅಲಿಯಾಸ್ ಪವಿತ್ರಾ ಬಿರಾದಾರ ಸಾವನ್ನಪ್ಪಿದ ಮಹಿಳೆ. ಶೃತಿ ಮೂಲತಃ ವಿಜಯಪುರ ಜಿಲ್ಲೆಯ ಮೂಲದವರಾಗಿದ್ದು, ಅರವಿಂದ್ ಎಂಬಾತನನ್ನ ಪ್ರೀತಿಸಿ (Love Marriage) ಮದುವೆಯಾಗಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ತಿರುಪಾಳ್ಯದ ವಿನಾಯಕ ನಗರದಲ್ಲಿ ವಾಸವಾಗಿದ್ದರು.


ಆದ್ರೆ ಇಬ್ಬರ ಮಧ್ಯೆ ಹೊಂದಾಣಿಕೆ ಸರಿ ಇರಲಿಲ್ಲ. ಪದೇ ಪದೇ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಶೃತಿ ಕೊಲೆಯ ಬಳಿಕ ಪತಿ ಅರವಿಂದ್ ನಾಪತ್ತೆಯಾಗಿದ್ದು, ಆತನೇ ಹತ್ಯೆಗೈದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.


ಕಳೆದ ಮೂರ್ನಾಲ್ಕು ದಿನಗಳಿಂದ ಅರವಿಂದ್ ಮತ್ತು ಶೃತಿ ಮನೆಯ ಹೊರಗೆ ಕಾಣಿಸಿಕೊಂಡಿರಲಿಲ್ಲ. ಮಂಗಳವಾರ ಸಂಜೆಯಿಂದಲೇ ಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬಂದಿದೆ. ಮನೆಯಲ್ಲಿ ಇಲಿ ಅಥವಾ ಹೆಗ್ಗಣ ಸತ್ತಿರಬಹುದು ಎಂದು ತಿಳಿದಿದ್ದರು.


ಕೊಳೆತ ಸ್ಥಿತಿಯಲ್ಲಿ ಶೃತಿ ಶವ ಪತ್ತೆ


ಕೆಟ್ಟ ವಾಸನೆ ಹೆಚ್ಚಾದಾಗ ಶೃತಿ ಮನೆ ಹತ್ತಿರ ಬಂದಿದ್ದಾರೆ. ಚಿಲಕ ಮಾತ್ರ ಹಾಕಿದ್ದರಿಂದ ಬಾಗಿಲು ತೆಗೆದು ನೋಡಿದಾಗ ಬೆಡ್ಶೀಟ್ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಶೃತಿ ಶವ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


man killed wife and escaped in hebbagodi cank mrq
ಪೊಲೀಸರ ಪರಿಶೀಲನೆ


ಪತಿಯ ಫೋನ್ ಸ್ವಿಚ್ಛ್ ಆಫ್


ನಾಲ್ಕೈದು ದಿನಗಳ ಹಿಂದೆ ಕೊಲೆ ಮಾಡಿರೋದರಿಂದ ಶವ ಗುರುತು ಸಿಗದ ಸ್ಥಿತಿಯಲ್ಲಿ ಕೊಳೆತು ಹೋಗಿತ್ತು. ಕೊಲೆ ನಡೆದ ದಿನವೂ ಪತಿ-ಪತ್ನಿ ನಡುವೆ ಜಗಳ ಉಂಟಾಗಿ, ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇತ್ತ ಅರವಿಂದ್ ಫೋನ್ ಸ್ವಿಚ್ಛ್ ಆಫ್ ಆಗಿರೋದು ಸಹ ಹಲವು ಅನುಮಾನಗಳಿಗೆ ಕಾರಣವಾಗಿದೆ.


ಅರವಿಂದ್ ಬಂಧನಕ್ಕಾಗಿ ಪೊಲೀಸರ ಬಲೆ


ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಅರವಿಂದ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.


ಕೊಡಗಿನಲ್ಲಿ ಆಫ್ರಿಕನ್ ಹಂದಿ ಜ್ವರ


ಕೊಡಗಿನಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ. 2 ತಿಂಗಳ ಅವಧಿಯಲ್ಲಿ 30ಕ್ಕೂ ಹೆಚ್ಚು ಹಂದಿಗಳ ಸಾವನ್ನಪ್ಪಿವೆ. ಈ ಹಿನ್ನೆಲೆ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ. ಹೈದರಾಬಾದ್ ಲ್ಯಾಬ್ನಲ್ಲಿ ಸತ್ತ ಹಂದಿಗಳ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಆಫ್ರಿಕನ್ ಹಂದಿಜ್ವರ ಎಂಬುದು ಗೊತ್ತಾಗಿದೆ.


ಇದನ್ನೂ ಓದಿ:  Karnataka Weather Report: 10 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲು; ಇಂದಿನ ಹವಾಮಾನ ವರದಿ


ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ


ಜೂಜಾಡುತ್ತಿದ್ದ ಗ್ಯಾಂಗಿನ ಮೇಲೆ ಪೊಲೀಸರು ದಾಳಿ ಮಾಡಿ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ, ಕೊಪ್ಪಳ ಪೊಲೀಸರು. ಜಿನ್ನಾಪುರ ತಾಂಡದಲ್ಲಿ ಜೂಜಾಡುತ್ತಿದ್ದ ಗುಂಪಿನ ಮೇಲೆ ಪೊಲೀಸ್ರು ದಾಳಿ ಮಾಡಿದ್ದರು. ಈ ವೇಳೆ ನಾಲ್ಕು ಜನ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪೊಲೀಸರನ್ನೇ ತಳ್ಳಾಟ ಮಾಡಿದ್ದಾರೆ. ಈ ವೇಳೆ ಗ್ರಾಮದ ಸಣ್ಣೆಪ್ಪ, ಶಂಕರ, ನಾಗರಾಜ್ ಹಾಗು ಕೃಷ್ಣಪ್ಪ ಎಂಬವರನ್ನ ಬಂಧನ ಮಾಡಲಾಗಿದೆ.


man killed wife and escaped in hebbagodi cank mrq
ಪೊಲೀಸರ ಪರಿಶೀಲನೆ


ಇದನ್ನೂ ಓದಿ:  Bengaluru: ಪಟಾಕಿ ಹಚ್ಚಿ ಜನರ ಮೇಲೆಸೆದು ಪುಂಡಾಟ; ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಮೂಳೆ ಮುರಿಯೋ ಹಾಗೆ ಹೊಡೆದ್ರು


ಹೈಟೆನ್ಷನ್ ವೈಯರ್ ತಗುಲಿ ಸಾವು


ಕೆ.ಆರ್ ಪುರಂ ಬಳಿ ಮನೆಗೆ ಹೈಟೆನ್ಷನ್ ವೈಯರ್ ತಗುಲಿ ಬೆಂಕಿ ಅವಘಡ ಸಂಭವಿಸಿದೆ. ಹೈ ಟೆನ್ಷನ್ ವೈಯರ್ ತಗುಲಿ ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ವೇಳೆ ನೆರೆಮನೆಯ ವ್ಯಕ್ತಿ ಭಾಸ್ಕರ್ ಸೇರಿ ಮೂವರಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಚಂದನ್ ಸಾವನ್ನಪ್ಪಿದ್ದಾರೆ.. ಕೆಳಭಾಗದಲ್ಲೇ ವೈರ್ ಅನ್ನು ಅಳವಡಿಸಿದ್ದಾರೆ ಅಂತ ಮನೆ ಮಾಲೀಕ ಭಾಸ್ಕರ್ ವಿರುದ್ಧ FIR ದಾಖಲಾಗಿದೆ.

Published by:Mahmadrafik K
First published: