• Home
  • »
  • News
  • »
  • state
  • »
  • Davanagere: ಗರ್ಭಿಣಿ ಪತ್ನಿಯನ್ನ ಕೊಲೆಗೈದ ಗಂಡ; ತಿಂಗಳ ಮುಂಚೆಯೇ ಗುಂಡಿ ತೋಡಿದ್ದ ನೀಚ

Davanagere: ಗರ್ಭಿಣಿ ಪತ್ನಿಯನ್ನ ಕೊಲೆಗೈದ ಗಂಡ; ತಿಂಗಳ ಮುಂಚೆಯೇ ಗುಂಡಿ ತೋಡಿದ್ದ ನೀಚ

ಪತ್ನಿಯ ಕೊಲೆ

ಪತ್ನಿಯ ಕೊಲೆ

ಅಕ್ಟೋಬರ್ 8ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಶ್ಮಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ರಾತ್ರಿಯೇ ಕಾರ್​ನಲ್ಲಿ ಶವ ಸಾಗಿಸಿ ಗುರುತಿಸಿದ ಜಾಗದಲ್ಲಿ ಹೂತು ಹಾಕಿ ಬಂದಿದ್ದನು.

  • News18 Kannada
  • Last Updated :
  • Davanagere, India
  • Share this:

ಮದುವೆಯಾಗಿ (Marriage) ಇನ್ನೂ ಆರು ತಿಂಗಳು ಅಗಿತ್ತು, ಹೊಸ ಹೊಸ ಕನಸುಗಳ ಜೊತೆ ಪತಿಯ ಮನೆಗೆ (Husband House) ಬಂದಿದ್ದ 20 ವರ್ಷದ ಯುವತಿ ಗಂಡನ ಅನುಮಾನಕ್ಕೆ ಬಲಿಯಾಗಿದ್ದಾಳೆ. ರಶ್ಮಿ ಅಲಿಯಾಸ್ ರೇಷ್ಮಾ ಕೊಲೆಯಾದ ನವ ವಿವಾಹಿತೆ. ಮದುವೆಯಾದ ಒಂದು ತಿಂಗಳ ನಂತರ ರಶ್ಮಿ ಗರ್ಭಿಣಿ (Pregnant) ಆಗಿದ್ದಾರೆ. ಆದ್ರೆ ಪತಿ ಮೋಹನ್ ಪತ್ನಿಯ ಮೇಲೆ ಅನುಮಾನಗೊಂಡು ಕೊಲೆ ಮಾಡಿ, ದಟ್ಟ ಅರಣ್ಯ ಪ್ರದೇಶದಲ್ಲಿ ರಶ್ಮಿ ಶವ ಹೂತು ಹಾಕಿದ್ದಾನೆ. ಕೊಂದ (Wife Murder) ಬಳಿಕ ದೇವರ ಮುಂದೆ ಪ್ರಮಾಣ ಮಾಡಿದ್ದ ನೀಚ ಮೋಹನ್ ಕುಮಾರ್ ಅಲಿಯಾಸ್ ಮನು ಪತ್ನಿಯನ್ನು ನಾನು ಕೊಲೆ ಮಾಡಿಲ್ಲ. ಯಾಕೆ ಯಾರ ಜೊತೆಯಲ್ಲಾದ್ರೂ ಓಡಿ ಹೋಗಿರಬೇಕು ಎಂದು ಕಾಗಕ್ಕ ಗುಬ್ಬಕ್ಕನ ಕಥೆಯನ್ನು ಕುಟುಂಬಸ್ಥರ ಮುಂದೆ ಹೇಳಿದ್ದನು. ಪೊಲೀಸರು (Police) ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆಯ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.


ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಇದೇ ವರ್ಷ ಏಪ್ರಿಲ್ 13ರಂದು ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ, ರತ್ನಮ್ಮ ದಂಪತಿಯ ಕೊನೆಯ ಪುತ್ರಿ ರಶ್ಮಿಯನ್ನು ಗಂಗಗೊಂಡನಹಳ್ಳಿಯ ನಿವಾಸಿ ಮೋಹನ್ ಜೊತೆ ಮದುವೆ ಮಾಡಿಕೊಡಲಾಗಿತ್ತು.


ಎರಡು ಕುಟುಂಬಗಳ ಸಮ್ಮುಖದಲ್ಲಿ ಮೋಹನ್ ಮತ್ತು ರಶ್ಮಿ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಡಲಾಗಿತ್ತು. ಆದ್ರೆ ಮದುವೆಯಾದ ಆರು ತಿಂಗಳಲ್ಲಿಯೇ ರಶ್ಮಿ ಪತಿಯಿಂದಲೇ ಕೊಲೆಯಾಗಿದ್ದಾಳೆ.


ಅನುಮಾನ ಪಿಶಾಚಿಯಾಗಿದ್ದ ನೀಚ ಮೋಹನ್


ರಶ್ಮಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಸಂತೋಷಪಡದ ಮೋಹನ್ ಪತ್ನಿಯ ಮೇಲೆ ಅನುಮಾನಪಡಲು ಆರಂಭಿಸಿದ್ದನು. ರಶ್ಮಿ ಯಾರ ಜೊತೆಯಲ್ಲಿ ಮಾತನಾಡಿಸಿದರೂ ಅನುಮಾನದಿಂದಲೇ ನೋಡುತ್ತಿದ್ದನು. ಹೀಗೆ ರಶ್ಮಿಗೆ ಮಾನಸಿಕ ಕಿರುಕುಳ ನೀಡಲು ಮೋಹನ್ ಆರಂಭಿಸಿದ್ದನು.


man killed pregnant wife in davanagere mrq
ಸಾಂದರ್ಭಿಕ ಚಿತ್ರ


ಇದೇ ವಿಷಯವಾಗಿ ರಶ್ಮಿ ಮತ್ತು ಮೋಹನ್ ಕುಮಾರ್ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ನಡೆಸಿ ಜೊತೆಯಾಗಿ ಬಾಳುವಂತೆ ತಿಳಿ ಹೇಳುತ್ತಿದ್ದರು. ರಾಜಿ ಸಂಧಾನದ ಬಳಿಕವೂ ಮೋಹನ್ ಅನುಮಾನಿಸುತ್ತಿರೋದನ್ನು ಬಿಟ್ಟಿರಲಿಲ್ಲ.


ಒಂದು ತಿಂಗಳು ಮುಂಚೆಯೇ ಕೊಲೆಗೆ ಸಂಚು


ಹೌದು, ಮೋಹನ್ ಕುಮಾರ್ ಪತ್ನಿ ರಶ್ಮಿ ಕೊಲೆಗೆ ಒಂದು ತಿಂಗಳು ಮುಂಚೆಯೇ ಸಂಚು ರೂಪಿಸಿದ್ದನು. ತನ್ನ ಸಂಚಿನಂತೆಯೇ ಒಂದು ತಿಂಗಳು ಮೊದಲು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸಮೀಪದ ಶಿರಗಲಿಪುರ ಕಣಿವೆ ಬಳಿ ಗುಂಡಿ ತೋಡಲು ಜಾಗ ಗುರುತಿಸಿದ್ದನು. ತನ್ನ ಪ್ಲಾನ್​ನಂತೆಯೇ ಗುರುತಿಸಿದ ಜಾಗದಲ್ಲಿ ಗುಂಡಿ ತೋಡಿ ಬಂದಿದ್ದನು.


ಅಕ್ಟೋಬರ್ 8ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಶ್ಮಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ರಾತ್ರಿಯೇ ಕಾರ್​ನಲ್ಲಿ ಶವ ಸಾಗಿಸಿ ಗುರುತಿಸಿದ ಜಾಗದಲ್ಲಿ ಹೂತು ಹಾಕಿ ಬಂದಿದ್ದನು.


man killed pregnant wife in davanagere mrq
ಸಾಂದರ್ಭಿಕ ಚಿತ್ರ


ಶವ ಹೂತ ಬಳಿಕ ರಶ್ಮಿ ಪೋಷಕರಿಗೆ ಕರೆ


ಮತ್ತೆ ಮನೆಗೆ ಬಂದಿದ್ದ ಮೋಹನ್ ಕುಮಾರ್ ಹಲವು ಸಾಕ್ಷ್ಯ ನಾಶಗೊಳಿಸಿ ರಶ್ಮಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಕಾಣುತ್ತಿಲ್ಲ. ಯಾರ ಜೊತೆಯಲ್ಲಾದ್ರೂ ಓಡಿ ಹೋಗಿರಬಹುದು ಎಂದು ಹೇಳಿದ್ದನು.


ಇದನ್ನೂ ಓದಿ: Bengaluru: ಪ್ರಿಯತಮೆಯ ಗಂಡನಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲು ಪಾಲಾದ ಇನಿಯ


ಮಗಳು ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿದ ಪೋಷಕರು ಮೋಹನ್ ಕುಮಾರ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ದೇವರ ಮುಂದೆ ಪ್ರಮಾಣ ಮಾಡಿದ್ದ ಮೋಹನ್ ಕುಮಾರ್, ನಾನು ಆಕೆಯನ್ನು ಏನೂ ಮಾಡಿಲ್ಲ. ಮನೆಯಲ್ಲಿ ಕಾಣಿಸುತ್ತಿಲ್ಲ ಎಂದು ತನ್ನ ಹಳೆ ಮಾತುಗಳನ್ನು ಪದೇ ಪದೇ ಹೇಳಿದ್ದಾನೆ.


ದೂರು ದಾಖಲಿಸಿದ ರಶ್ಮಿ ಪೋಷಕರು


ಮಗಳು ಸಿಗದ ಹಿನ್ನೆಲೆಯಲ್ಲಿ ರಶ್ಮಿ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪುತ್ರಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರಿಗೂ ಆರಂಭದಲ್ಲಿ ಮೋಹನ್ ಕುಮಾರ್ ಮೇಲೆಯೇ ಅನುಮಾನ ಬಂದಿದೆ. ಶಂಕೆ ಹಿನ್ನೆಲೆ ಮೋಹನ್ ಕುಮಾರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ  ಪ್ರಕರಣ ಬೆಳಕಿಗೆ ಬಂದಿದೆ. ಮೋಹನ್ ಕುಮಾರ್ ಹೂತಿಟ್ಟಿದ್ದ ಶವವನ್ನು ಹೊರಗೆ ತಗೆದು ಮರಣೋತ್ತರ ಶವಪರೀಕ್ಷೆ ಸಹ ನಡೆಸಲಾಗಿದೆ.


ಇದನ್ನೂ ಓದಿ:  Love Jihad: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಕಿರುಕುಳ; ಸಂತ್ರಸ್ತೆಯಿಂದ ದೂರು


ಪೋಷಕರ ಕಣ್ಣೀರು


ಮಗಳ ಜೀವನ ಚೆನ್ನಾಗಿರಲಿ ಎಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಆಕೆಯನ್ನು ಸ್ಮಶಾನಕ್ಕೆ ಕಳುಹಿಸಲು ಮದುವೆ ಮಾಡಿಕೊಟ್ಟಂತೆ ಆಗಿದೆ ಎಂದು ರಶ್ಮಿ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

Published by:Mahmadrafik K
First published: