ಕಾರವಾರ: ಪತ್ನಿಯ ಕತ್ತು ಹಿಸುಕಿ ಕೊಲೆಗೈದು (Wife Murder) ಶವವನ್ನು ಬ್ಯಾರೆಲ್ನಲ್ಲಿ ಬಚ್ಚಿಟ್ಟು ಅರಣ್ಯ ಪ್ರದೇಶದಲ್ಲಿ (Forest Area) ಬಿಸಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು (Accused Arrest) ಯಶಸ್ವಿಯಾಗಿದ್ದಾರೆ. ಶನಿವಾರ ಆರೋಪಿಯ ಬಂಧನವಾಗಿದ್ದು, ಈತನಿಗೆ ಸಹಕಾರ ನೀಡಿದ್ದ ಮತ್ತಿಬ್ಬರನ್ನು ಸಹ ಬಂಧಿಸಲಾಗಿದೆ. ತುಕರಾಮ್ ಮಡಿವಾಳ ಪತ್ನಿಯನ್ನು ಕೊಲೆಗೈದ ಗಂಡ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ (Haliyala,Uttara Kannada) ತೆರಗಾಂವ ಗ್ರಾಮದದಲ್ಲಿ ಪತ್ನಿ ಶಾಂತಕುಮಾರಿ (38) ಜೊತೆ ತುಕಾರಾಮ್ ವಾಸವಾಗಿದ್ದನು. ತುಕಾರಾಮ್ ಪರ ಸ್ತ್ರೀಯರ ಜೊತೆ ಸಲುಗೆಯಿಂದ ಇರುತ್ತಿದ್ದನು. ಇದೇ ವಿಷಯಕ್ಕೆ ಶಾಂತಕುಮಾರಿ ಮತ್ತು ತುಕಾರಾಮ್ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪತ್ನಿಯ ಶವವನ್ನು ನೀರು ತುಂಬುವ ಬ್ಯಾರೆಲ್ನಲ್ಲಿ ಬಚ್ಚಿಟ್ಟಿದ್ದನು.
ಮರುದಿನ ಮನೆ ಖಾಲಿ ಮಾಡುವ ನೆಪದಲ್ಲಿ ಟಾಟಾ ಏಸ್ ವಾಹನವನ್ನು ಬಾಡಿಗೆ ಪಡೆದು ಪತ್ನಿ ಶವ ತುಂಬಿದ್ದ ಬ್ಯಾರೆಲ್ ಸಾಗಿಸಿದ್ದನು. ನಂತರ ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದನು.
ಮನೆ ಖಾಲಿ ಮಾಡಲು ಮುಂದಾಗಿದ್ದ
ಶನಿವಾರ ಇಡೀ ಸಾಮಾನುಗಳನ್ನು ವಾಹನದಲ್ಲಿ ಆತುರವಾಗಿ ತುಂಬುತ್ತಿರೋದನ್ನು ಗಮನಿಸಿದ ಮನೆಯ ಮಾಲೀಕರು ಎಲ್ಲಿಗೆ ಹೋಗ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಅರ್ಜೆಂಟ್ ಆಗಿ ಗೋವಾಗೆ ಹೋಗಬೇಕು. ಹಾಗಾಗಿ ಮನೆ ಖಾಲಿ ಮಾಡುತ್ತಿದ್ದೇನೆ ಎಂದು ತುಕಾರಾಮ್ ಹೇಳಿದ್ದಾನೆ.
ಪೊಲೀಸರಿಗೆ ವಿಷಯ ತಿಳಿಸಿದ ಮನೆ ಮಾಲೀಕ
ಗಂಡ-ಹೆಂಡತಿ ಜಗಳದ ಬಗ್ಗೆ ತಿಳಿದಿದ್ದ ಮನೆ ಮಾಲೀಕರು ಅನುಮಾನಗೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೊದಲಿಗೆ ಮನೆ ಖಾಲಿ ಮಾಡುತ್ತಿದ್ದ ತುಕಾರಾಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಭಯಗೊಂಡ ತುಕಾರಾಮ್ ಪತ್ನಿಯ ಕೊಲೆ ವಿಷಯ ಬಾಯ್ಬಿಟ್ಟಿದ್ದಾನೆ. ನಂತರ ಆರೋಪಿ ತುಕಾರಾಮ್ನನ್ನು ಪೊಲೀಸರು ಬಂಧಿಸಿದ್ದಾರೆ.
ತುಕಾರಾಮ್ಗೆ ಸಹಕರಿಸಿದ್ದ ಇಬ್ಬರ ಬಂಧನ
ಇನ್ನು ಕೊಲೆಗೆ ಸಹಕರಿಸಿದ್ದ ರಿಜ್ವಾನ್ ಕುಂಬಾರಿ ಮತ್ತು ಸಮೀರ್ ಪಂತೋಜಿ ಎಂಬವರನ್ನು ಬಧಿಸಲಾಗಿದೆ. ಇದೀಗ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಿಜಯಪುರ: ವೃದ್ಧ ದಂಪತಿಯ ಸಜೀವ ದಹನ
ತಡರಾತ್ರಿ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ವೃದ್ಧ ದಂಪತಿ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಹೊರವಲಯದಲ್ಲಿರುವ ನಿವರಗಿ ರಸ್ತೆಯ ತೋಟದ ಮನೆಯಲ್ಲಿ ನಡೆದಿದೆ.
82 ವರ್ಷದ ಕರೀಂಸಾಬ್ ಟಪಾಲ್, 72 ವರ್ಷದ ಸಾಜನಬಿ ಟಪಾಲ್ ಮೃತ ದಂಪತಿ. ಚಿಮಣಿಯಿಂದಾಗಿ ತಡರಾತ್ರಿ ಗುಡಿಸಲಿಗೆ ಬೆಂಕಿ ತಗುಲಿರುವ ಸಾಧ್ಯತೆಗಳಿವೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಯಾದಗಿರಿಯಲ್ಲಿ ಸಿಲಿಂಡರ್ ಸ್ಫೋಟ
ಸಿಲಿಂಡರ್ ಬ್ಲಾಸ್ಟ್ ಆಗಿ ಗುಡಿಸಲು ಬೆಂಕಿಗಾಹುತಿ ಆಗಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಹೊರಭಾಗದ ಸಾಯಿ ನಗರದಲ್ಲಿ ನಡೆದಿದೆ.
ಇದನ್ನೂ ಓದಿ: Bengaluru: ಅಕ್ರಮವಾಗಿ ಯುವತಿಯ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹ; ಅಧೀಕ್ಷಕ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಅಮಾನತು
ಆಂಧ್ರಮೂಲದ ಟಿ.ಮಧು ಅವರಿಗೆ ಸೇರಿದ್ದ ಗುಡಿಸಲು ಬೆಂಕಿಗಾಹುತಿ ಆಗಿದೆ. ಸ್ನಾನ ಮಾಡಲು ನೀರು ಕಾಯಿಸಲು ಮಧು ಹೊರಗೆ ಬಂದಾಗ, ಸಿಲಿಂಡರ್ ಬ್ಲಾಸ್ಟ್ ಆಗಿದೆ. ಗುಡಿಸಲು ಪಕ್ಕದಲ್ಲಿದ್ದ ಓರ್ವ ವ್ಯಕ್ತಿಗೆ ಗಾಯವಾಗಿದೆ. ದುರಂತದಲ್ಲಿ 2 ಲಕ್ಷ ರೂಪಾಯಿ ಹಣ, ವಾಸಿಂಗ್ ಮಷೀನ್,ಟಿವಿ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ