Bengaluru Crime News: ಯುವಕನಿಗೆ ಚಾಕುವಿನಿಂದ ಇರಿದು ಕೊಂದ ಪುಡಿ ರೌಡಿಗಳು

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ರೂಪೇಶ್ ಹೋಟೆಲ್ ಬಳಿ ನಡೆದು ಹೋಗುತ್ತಿದ್ದ ಕಲ್ಬುರ್ಗಿ ಮೂಲದ ಸಿದ್ದರಾಮ (22) ಎಂಬ ಯುವಕನ ಮೇಲೆ ಅಪರಿಚಿತರು ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.

news18-kannada
Updated:August 9, 2020, 10:09 PM IST
Bengaluru Crime News: ಯುವಕನಿಗೆ ಚಾಕುವಿನಿಂದ ಇರಿದು ಕೊಂದ ಪುಡಿ ರೌಡಿಗಳು
ಕ್ರೈಮ್​
  • Share this:
ಆನೇಕಲ್(ಆ.09): ಅವ್ನು ಹೊಟ್ಟೆಪಾಡಿಗಾಗಿ ಹುಟ್ಟೂರು ಬಿಟ್ಟು ಬಂದು ದೂರದ ಊರಿನಲ್ಲಿ ಬದುಕು ಕಟ್ಟಿಕೊಂಡಿದ್ದ. ಮಾರಕ ಕೊರೋನಾ ವೈರಸ್​​ ನಡುವೆಯೂ ಕಾರ್ಖಾನೆಯೊಂದರಲ್ಲಿ ದುಡಿದು ಹೇಗೋ ಜೀವನ ನಡೆಸುತ್ತಿದ್ದ. ಆದ್ರೆ ಕಳೆದ ರಾತ್ರಿ ಆತನಿಗೆ ಅಪರಿಚಿತರು ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ರೂಪೇಶ್ ಹೋಟೆಲ್ ಬಳಿ ನಡೆದು ಹೋಗುತ್ತಿದ್ದ ಕಲ್ಬುರ್ಗಿ ಮೂಲದ ಸಿದ್ದರಾಮ (22) ಎಂಬ ಯುವಕನ ಮೇಲೆ ಅಪರಿಚಿತರು ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಸಿದ್ದರಾಮ ಚಿಕಿತ್ಸೆ ಫಲಕಾರಿಯಾಗದೇ ಇಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಎಫ್ಓ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಸಿದ್ದರಾಮ ಕಳೆದ ಶುಕ್ರವಾರ ರಾತ್ರಿ ಸ್ನೇಹಿತರು ಬರ್ತ್ ಡೇ ಪಾರ್ಟಿಗೆ ಹೋಗಿದ್ದಾನೆ. ಅಲ್ಲಿ ಸ್ನೇಹಿತನ ಬರ್ತ್ ಡೇ ಪಾರ್ಟಿ ನಡುವೆ ಕ್ಷುಲ್ಲಕ ಕಾರಣಕ್ಕೆ ಸಿದ್ದರಾಮ ಮತ್ತು ಇತರರ ನಡುವೆ ಜಗಳ ಶುರುವಾಗಿದೆ. ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿದಾಗ ಅಲ್ಲಿದ್ದ ಕೆಲವರು ಜಗಳ ಬಿಡಿಸಿ ಕಳುಹಿಸಿದ್ದಾರೆ.‌ ಸಿದ್ದರಾಮ ಸಹ ತಾನು ಉಳಿದುಕೊಂಡಿದ್ದ ಕೊಠಡಿಗೆ ಬಂದು ನಿದ್ರಿಸಿದ್ದಾನೆ.

ಇದನ್ನೂ ಓದಿ: ‘ರೈತರು, ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು‘ - ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ

ಮಾರನೇ ದಿನ ಎಂದಿನಂತೆ ಸೆಂಕೆಂಡ್ ಶಿಫ್ಟ್ ಕೆಲಸ ಮುಗಿಸಿಕೊಂಡು ವಾಪಸ್ ಒಬ್ಬನೇ ನಡೆದು ಬರುವಾಗ ಅಪರಿಚಿತರ ಗುಂಪು ಏಕಾಏಕಿ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಸಿದ್ದರಾಮ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
Published by: Ganesh Nachikethu
First published: August 9, 2020, 10:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading