HOME » NEWS » State » MAN KILLED BY FRIENDS BECAUSE HE DIDNT GIVE MONEY FOR PARTY SKG KVD

Gadag Murder: ಸಾಲ ವಾಪಸ್​​​ ಕೊಡದ ಸ್ನೇಹಿತನನ್ನು ಕೊಚ್ಚಿ ಕೊಂದ ಗುಂಪು !

ಕೊಟ್ಟ ಹಣ ಕೇಳಿದಾಗ ಮುತ್ತು ಚಲವಾದಿ ಸತಾಯಿಸಿದ್ದಲ್ಲದೇ ನಿನ್ನನ್ನೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಕ್ಕೆ ಪ್ರಕಾಶ್ ಕೋರಿಶೆಟ್ಟರ್ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

news18-kannada
Updated:July 22, 2021, 11:02 PM IST
Gadag Murder: ಸಾಲ ವಾಪಸ್​​​ ಕೊಡದ ಸ್ನೇಹಿತನನ್ನು ಕೊಚ್ಚಿ ಕೊಂದ ಗುಂಪು !
ಬಂಧಿತ ಆರೋಪಿಗಳು
  • Share this:
ಗದಗ: ಹಣ್ಣಿನ ವ್ಯಾಪಾರಿಯೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಘಟನೆ ಗದಗ ನಗರದಲ್ಲಿ ನಡೆದಿತ್ತು. ನಗರದ ತೀಸ್ ಬಿಲ್ಡಿಂಗ್ ಬಳಿ ಈ ದುರ್ಘಟನೆ ನಡೆದಿದ್ದು,  ಬ್ಯಾಂಕ್ ರಸ್ತೆಯ ಅಯೋಧ್ಯಾ ಹೋಟೆಲ್ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವಿವೇಕಾನಂದ ರಸ್ತೆಯ ‌ನಿವಾಸಿ ಗುಂಡಪ್ಪ ಚಲವಾದಿ ಅಲಿಯಾಸ್ ಮುತ್ತು ಚಲವಾದಿ (28)  ಎಂಬಾತ ಕೊಲೆಗೀಡಾಗಿದ್ದ. ಹರಿತವಾದ ಚಾಕುವಿನಿಂದ ಸಿಕ್ಕ ಸಿಕ್ಕಲ್ಲಿ ಇರಿಯಲಾಗಿತ್ತು. ಸುಮಾರು 20 ಬಾರಿ ಕತ್ತು, ತಲೆ, ಎದೆ ಹಾಗೂ ಹೊಟ್ಟೆಯ ಬಾಗಕ್ಕೆ ಚಾಕು ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣವನ್ನ ಜಾಡು ಹಿಡಿದು ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ನಾಲ್ಕೇ ದಿನದಲ್ಲಿ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ರೌಡಿಶೀಟರ್ ಸೇರಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಗದಗ ನಗರದ ಬಯಲು ಆಂಜನೇಯ ದೇವಸ್ಥಾನದ ಬಳಿ ನಿವಾಸಿ ರೌಡಿಶೀಟರ ಪ್ರಕಾಶ್ @ ಫಕ್ಕೀರೇಶ್ @220 ಫಕ್ಕ್ಯಾ  ತಂದೆ ಬಸವರಾಜ್ ಕೋರಿಶೆಟ್ಟರ್, ವಿವೇಕಾನಂದ ನಗರದ ಪ್ರವೀಣ್ @ ಪವನ್ ಯಮನಪ್ಪ ಸಕ್ರಿ, ಇನ್ಬೊಬ್ಬ ಹೊಟೇಲ್ ವೊಂದರಲ್ಲಿ ವೇಟರ್ ಆಗಿದ್ದ ಕಮ್ಮಾರ ಸಾಲಿನ ಅಮೀರಸೋಹೈಲ್ ಸುಭಾನಸಾಬ್ ನದಾಫ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಮುತ್ತು ಚಲವಾದಿ‌ ಮನೆಯಲ್ಲಿ ಮಲಗಿದ್ದ ವೇಳೆ ಸ್ನೇಹಿತರು  ಪಾರ್ಟಿ ಮಾಡೋಣ ಬಾ ಎಂದು ಕರೆದುಕೊಂಡು ಹೋಗಿದ್ದರು ಎಂದು ಪೋಷಕರು ತಿಳಿಸಿದ್ದರು. ಬಳಿಕ ತಡರಾತ್ರಿ 11 ಗಂಟೆ ಸುಮಾರಿಗೆ ಮಗ ಕೊಲೆಯಾಗಿರೋ ಬಗ್ಗೆ ಮಾಹಿತಿ ಗೊತ್ತಾಗಿದೆ. ಇದೇ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳನ್ನ ಹಿಡಿಯುವುದು ಅಷ್ಟೇನು ಕಷ್ಟವಾಗಿರಲಿಲ್ಲ. ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರು,  ಶಹರ ಠಾಣೆ ಇನ್ಸ್‌ಪೆಕ್ಟರ್ ಪಿ ವಿ ಸಾಲಿಮಠ, ಬೆಟಗೇರಿ ಸಿಪಿಐ ಬಿ ಜಿ ಸುಬ್ಬಾಪೂರಮಠ, ಶಹರ ಠಾಣೆಯ ಪಿಎಸ್ಐ ಗಿರಿಜಾ ಜಕ್ಕಲಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು.

ಇದನ್ನೂ ಓದಿ: Bengaluru: ನವಗ್ರಹ ಸಿನಿಮಾ ನೋಡಿ ಅಂಗಡಿಗೆ ಕನ್ನ ಹಾಕಿದ ಭೂಪ; ಚನ್ನಪಟ್ಟಣದಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದ..!

ಪ್ರಕರಣದ ತನಿಖೆ ಕೈಗೆತ್ತಿಕೊಂಡು ಮೂರು ತಂಡಗಳು ಆರೋಪಿಗಳ ಹೆಡಮುರಿ ಕಟ್ಟಿ ಕೊಲೆಯ ಬಗ್ಗೆ ಬಾಯಿ ಬಿಡಿಸಿದ್ದಾರೆ. ಬಂಧಿತರಿಂದ ಕೊಲೆಗೆ ಬಳಸಿದ ಎರಡು ಚಾಕು ಹಾಗೂ ಡಿಯೋ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಕೊಟ್ಟ ಹಣ ಕೇಳಿದಾಗ ಮುತ್ತು ಚಲವಾದಿ ಸತಾಯಿಸಿದ್ದಲ್ಲದೇ ನಿನ್ನನ್ನೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಕ್ಕೆ ಪ್ರಕಾಶ್ ಕೋರಿಶೆಟ್ಟರ್ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಪ್ರವೀಣ್ ಸಕ್ರಿಗೆ ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದ ಆ ಕಾರಣಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಮಾಹಿತಿ ನೀಡಿದ್ದಾರೆ.

ಇನ್ನು ಮೂರನೆ ಆರೋಪಿ ಅಮೀರಸೋಹೈಲ್ ನದಾಫ್ ಎಂಬಾತ ಇಬ್ಬರು ಆರೋಪಿಗಳೊಂದಿಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯ ನಂತರ ಹುಲಕೋಟಿ ಬಳಿಯ ಟೆಕ್ಸ್ ಟೈಲ್ ಮಿಲ್ ಬಳಿ‌ ತಲೆ ಮರೆಸಿಕೊಂಡಿದ್ದರು. ಬಳಿಕ ಅಲ್ಲಿಂದ ಹುಬ್ಬಳ್ಳಿಗೆ ತೆರಳಿದ್ದರು. ಅಲ್ಲಿಂದ ಗೋವಾಗೆ ತೆರಳಿ ತಲೆಮರೆಸಿಕೊಳ್ಳುವವರಿದ್ದರು. ಅಷ್ಟರೊಳಗೆ ಎಲ್ಲಾ ಪ್ರಯತ್ನಗಳಿಗೆ ಪೊಲೀಸರಿಗೆ ಬ್ರೇಕ್ ಹಾಕಿದ್ದಾರೆ.
Published by: Kavya V
First published: July 22, 2021, 11:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories