ಬೆಂಗಳೂರು: ಏರಿಯಾದಲ್ಲಿ ಹವಾ ಸೃಷ್ಟಿಸೋಕೆ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಯುವಕ
ಆರೋಪಿ ಅಶೋಕ್ ಮತ್ತು ಟೀಂ ಸದ್ಯ ತಲೆಮರಿಸಿಕೊಂಡಿದೆ. ಈ ತಂಡ ಈಗಾಗಲೇ ಬೆಂಗಳರನ್ನು ಬಿಟ್ಟು ಹೋಗಿರುವ ಶಂಕೆ ಇದೆ. ಹೀಗಾಗಿ, ಇವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
news18-kannada Updated:November 16, 2020, 12:54 PM IST

ಕೊಲೆಯಾದ ವ್ಯಕ್ತಿ
- News18 Kannada
- Last Updated: November 16, 2020, 12:54 PM IST
ಬೆಂಗಳೂರು (ನವೆಂಬರ್ 16): ಒಂದು ಏರಿಯಾದಲ್ಲಿ ಹವಾ ಸೃಷ್ಟಿ ಮಾಡೋಕೆ ಮತ್ತೊಬ್ಬವನನ್ನು ಕೊಲೆ ಮಾಡುವುದು, ಯಾವುದೋ ಪುಡಿ ರೌಡಿ ದೊಡ್ಡ ಡಾನ್ನನ್ನು ಕೊಲೆ ಮಾಡಿ ತಾನೇ ರಾಜ ಎನ್ನುವಂತೆ ಮೆರೆಯುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ. ಈಗ ಬೆಂಗಳೂರಿನಲ್ಲೂ ಇದೇ ಮಾದರಿಯ ಘಟನೆ ನಡೆದಿದೆ. ಏರಿಯಾದಲ್ಲಿ ಹವಾ ಸೃಷ್ಟಿ ಮಾಡಬೇಕು ಎನ್ನುವ ಕಾರಣಕ್ಕೆ ಯುವಕನೋರ್ವ ಗೆಳೆಯನನ್ನೇ ಕೊಲೆ ಮಾಡಿದ್ದಾನೆ.
ಬೆಂಗಳೂರಿನ ಗಂಗಮ್ಮನಗುಡಿಯಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಹತ್ಯೆಯಾದ ಯುವಕ. ಆತನ ಸ್ನೇಹಿತ ಅಶೋಕ್ ಹಾಗೂ ಆತನ ಸಹಚರರಿಂದ ಕೃತ್ಯ ನಡೆದಿದೆ. ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್ ನ ಸದಸ್ಯರು. ಇಬ್ಬರ ಮಧ್ಯೆ ಹವಾ ಸೃಷ್ಟಿ ಮಾಡುವ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಲೇ ಇತ್ತು. ನಿನ್ನೆ ಮಧ್ಯಾಹ್ನ ಎಲ್ಲರೂ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಏರಿಯಾವನ್ನು ಯಾರು ಆಳಬೇಕು ಎನ್ನುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಕೊನೆಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಕಾರ್ತಿಕ್ನನ್ನು ಅಶೋಕ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಶೋಕ್ ಮತ್ತು ಟೀಂ ಸದ್ಯ ತಲೆಮರಿಸಿಕೊಂಡಿದೆ. ಈ ತಂಡ ಈಗಾಗಲೇ ಬೆಂಗಳರನ್ನು ಬಿಟ್ಟು ಹೋಗಿರುವ ಶಂಕೆ ಇದೆ. ಹೀಗಾಗಿ, ಇವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಂಗಳೂರಿನ ಗಂಗಮ್ಮನಗುಡಿಯಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಹತ್ಯೆಯಾದ ಯುವಕ. ಆತನ ಸ್ನೇಹಿತ ಅಶೋಕ್ ಹಾಗೂ ಆತನ ಸಹಚರರಿಂದ ಕೃತ್ಯ ನಡೆದಿದೆ. ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್ ನ ಸದಸ್ಯರು. ಇಬ್ಬರ ಮಧ್ಯೆ ಹವಾ ಸೃಷ್ಟಿ ಮಾಡುವ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಲೇ ಇತ್ತು.
ಆರೋಪಿ ಅಶೋಕ್ ಮತ್ತು ಟೀಂ ಸದ್ಯ ತಲೆಮರಿಸಿಕೊಂಡಿದೆ. ಈ ತಂಡ ಈಗಾಗಲೇ ಬೆಂಗಳರನ್ನು ಬಿಟ್ಟು ಹೋಗಿರುವ ಶಂಕೆ ಇದೆ. ಹೀಗಾಗಿ, ಇವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.