ಮದುವೆಯಾಗೆಂದು ಪೀಡಿಸಿದ ವ್ಯಕ್ತಿಯ ಬರ್ಬರ ಕೊಲೆ; ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಯ್ತು ಶವ

ಪ್ರಕರಣ ದಾಖಲಿಸಿಕೊಂಡ ಅತ್ತಿಬೆಲೆ ಪೊಲೀಸರು ಎಲ್ಲಾ ಅಯಾಮಗಳಲ್ಲಿ ತನಿಖೆ ನಡೆಸಿದರು ಕಾಣೆಯಾದ ದತ್ತಾತ್ರೇಯ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ರಾಮನಗರ ಹಾರೋಹಳ್ಳಿ ಬಳಿಯ ಪಾಳು ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪುರುಷ ಶವವೊಂದು ಪತ್ತೆಯಾಗಿತ್ತು.

news18-kannada
Updated:October 18, 2020, 12:23 PM IST
ಮದುವೆಯಾಗೆಂದು ಪೀಡಿಸಿದ ವ್ಯಕ್ತಿಯ ಬರ್ಬರ ಕೊಲೆ; ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಯ್ತು ಶವ
ಭರತ್-ಕೊಲೆ ಆದ ವ್ಯಕ್ತಿ
  • Share this:
ಆನೇಕಲ್ (ಅಕ್ಟೋಬರ್ 18): ಆತ ದುಡಿಮೆಗಾಗಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಬಂದಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರು ಸಮೀಪದ ಖಾಸಗಿ ಕಂಪನಿಯೊಂದರಲ್ಲಿ ದುಡಿಯುತ್ತ ಜೀವನ ಕಂಡುಕೊಂಡಿದ್ದ. ಆದ್ರೆ ಅದೊಂದು ದಿನ ಕಂಪನಿಯಲ್ಲಿ ಕೆಲಸ ಮುಗಿಸಿ ಹೊರ ಬಂದವನು ನಾಪತ್ತೆಯಾಗಿದ್ದ. ಬರೋಬ್ಬರಿ 38 ದಿನಗಳ ಬಳಿಕ ಆತನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಗುರುತು ಸಿಗದಷ್ಟು ಕೊಳೆತು ಹೋಗಿರುವ ಈ ಮೃತ ದೇಹ ತಿಂಗಳ ಹಿಂದೆ ಕಾಣೆಯಾಗಿದ್ದ ದತ್ತಾತ್ರೇಯನದು ಎನ್ನಲಾಗಿದೆ. 26 ವರ್ಷ ವಯಸ್ಸಿನ ಈತ ಮೂಲತಃ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಬಿಳಗಿ ಗ್ರಾಮದ ವಾಸಿ. ಕಳೆದ ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ದತ್ತಾತ್ರೇಯ ಅತ್ತಿಬೆಲೆ ಸಮೀಪದ ಮಾಯಸಂದ್ರ ದಿಣ್ಣೆಯಲ್ಲಿರುವ ಅಮೇಜಾನ್ ಕಂಪನಿಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ಸಮೀಪದ ಮಾಯಸಂದ್ರ ಮನೆಯೊಂದರ ಕೊಠಡಿಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಎಂದಿನಂತೆ ಕೆಲಸಕ್ಕೆ ಹೋಗಿದ್ದ ದತ್ತಾತ್ರೇಯ ಕಳೆದ ತಿಂಗಳು 9 ನೇ ತಾರೀಕು ಕಂಪನಿ ಕೆಲಸ ಮುಗಿಸಿ ಹೊರ ಬಂದವನು ಕಾಣೆಯಾಗಿದ್ದ. ವಿಚಾರ ತಿಳಿದ ಸಹೋದರ ಶ್ರೀನಾಥ್ ಕೆಲಸಕ್ಕೆಂದು ಹೋರ ಹೋದ ತಮ್ಮ ಎರಡು ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದಾನೆ.  ತಮ್ಮನನ್ನು ಪತ್ತೆ ಮಾಡಬೇಕು ಎಂದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಮಿಸ್ಸಿಂಗ್ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ದಾಖಲಿಸಿಕೊಂಡ ಅತ್ತಿಬೆಲೆ ಪೊಲೀಸರು ಎಲ್ಲಾ ಅಯಾಮಗಳಲ್ಲಿ ತನಿಖೆ ನಡೆಸಿದರು ಕಾಣೆಯಾದ ದತ್ತಾತ್ರೇಯ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ರಾಮನಗರ ಹಾರೋಹಳ್ಳಿ ಬಳಿಯ ಪಾಳು ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪುರುಷ ಶವವೊಂದು ಪತ್ತೆಯಾಗಿತ್ತು. ಕೂಡಲೇ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ‌ ನೀಡಿ ಸ್ಥಳಕ್ಕೆ ಹೋಗಿ‌ ನೋಡಲಾಗಿ ಆತ ಧರಿಸಿದ್ದ ಬಟ್ಟೆಗಳ ಗುರುತು ಅಧಾರದ ಮೇಲೆ ಮೃತನ ಶವ ದತ್ತಾತ್ರೇಯನದ್ದು ಎಂದು ಖಾತರಿ ಆಗಿದೆ.

ಕಾಣೆಯಾಗಿದ್ದ ದತ್ತಾತ್ರೇಯನ ಶವ ದೊರೆಯುತ್ತಿದ್ದಂತೆ ಪ್ರಕರಣಕ್ಕೆ ಚುರುಕು‌ ನೀಡಿದ ಪೊಲೀಸರ ತನಿಖೆಯಲ್ಲಿ ಹುಡುಗಿಯೊಬ್ಬಳ ಪ್ರೇಮಪಾಶ ದತ್ತಾತ್ರೇಯ ಜೀವಕ್ಕೆ ಕುತ್ತು ತಂದೊಡ್ಡಿದೆ ಎಂಬ ಅಂಶ ಗೊತ್ತಾಗಿದೆ. ಜೊತೆಗೆ ಪ್ರಕರಣ ಸಂಬಂಧ ಆನೇಕಲ್ ಪಟ್ಟಣದ ಭರತ್, ಉದಯ್ ಮತ್ತು ರಾಚಮಾನಹಳ್ಳಿ ವಾಸಿ ಆನಂದನನ್ನು ವಶಕ್ಕೆ ಪಡೆದು ಪೊಲೀಸ್ ವಿಚಾರಣೆ ನಡೆಸಿದಾಗ ಸ್ಫೋಟಕಕ ಸತ್ಯ ಹೊರ ಬಿದ್ದಿತ್ತು.  ಬಂಧಿತ ಆರೋಪಿ ಭರತ್ ಜೊತೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ಆ ಯುವತಿ ಮೃತ ಯುವಕ ದತ್ತಾತ್ರೇಯ ಕೆಲಸ ಮಾಡುವ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ದತ್ತಾತ್ರೇಯ ಮದುವೆಯಾಗುವಂತೆ ಯುವತಿ ದುಂಬಾಲು ಬಿದ್ದಿದ್ದ. ಮದುವೆಯಾಗದಿದ್ದರೆ ಇಡೀ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ವಿಚಾರ ತಿಳಿದು ಭರತ್ ಸಹಚರರ ಜೊತೆ ಸೇರಿ ದತ್ತಾತ್ರೇಯನನ್ನು ಕೊಲೆಗೈದು ಯಾರಿಗೂ ತಿಳಿಯಬಾರದು ಎಂದು‌ ರಾಮನಗರದ ಹಾರೋಹಳ್ಳಿ ಬಳಿಯ ಪಾಳು ಮನೆಯಲ್ಲಿ ಎಸೆದು ಬರಲಾಗಿತ್ತು ಎಂದು ಪೊಲೀಸ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಒಟ್ನಲ್ಲಿ ಯುವತಿಯನ್ನು ಮದುವೆಯಾಗಲು ಬೆದರಿಕೆಯ ತಂತ್ರ ಅನುಸರಿಸಿದ್ದ ದತ್ತಾತ್ರೇಯನಿಗೆ ಬುದ್ಧಿ ಕಲಿಸಲು ಹೋಗಿ ಭರತ್ ಮತ್ತು ಗ್ಯಾಂಗ್ ಮಾಡಬಾರದ ಕೆಲಸ ಮಾಡಿ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆದೇನೆ ಆದರೂ ತಪ್ಪು ಮಾಡಿದರೆ ದಂಡಿಸಲು ಕಾನೂನು ಇರುವಾಗ ಕಾನೂನು ಕೈಗೆತ್ತಿಕೊಂಡು ಒಬ್ಬರ ಜೀವ ತೆಗೆದದ್ದು ಮಾತ್ರ ಅಕ್ಷಮ್ಯ ಅಪರಾಧ.
Published by: Rajesh Duggumane
First published: October 18, 2020, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading