• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಮೂರು ಬಾರಿ ಜೈಲು ಪಾಲಾದ್ರೂ ಚಾಳಿ ಬಿಡದ ಕಳ್ಳ; ಮತ್ತೆ ಎಟಿಎಂ ದರೋಡೆ ಮಾಡಲು ಹೋಗಿ ಸಿಕ್ಕಿಬಿದ್ದ!

Bengaluru: ಮೂರು ಬಾರಿ ಜೈಲು ಪಾಲಾದ್ರೂ ಚಾಳಿ ಬಿಡದ ಕಳ್ಳ; ಮತ್ತೆ ಎಟಿಎಂ ದರೋಡೆ ಮಾಡಲು ಹೋಗಿ ಸಿಕ್ಕಿಬಿದ್ದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶೆಟರ್ ಮುಚ್ಚಿದ ನಂತರ ಯಂತ್ರವನ್ನು ಪರಿಶೀಲಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಎಟಿಎಂ ಎದುರು ಇರುವ ಅಂಗಡಿಯೊಂದರ ಸಿಸಿಟಿವಿಯಲ್ಲಿಯೂ ವ್ಯಕ್ತಿಯ ಚಲನವಲನ ದಾಖಲಾಗಿದೆ.

  • Share this:

ಬೆಂಗಳೂರು (ಜೂ19): ರಾಜಧಾನಿಯಲ್ಲಿ ಎಟಿಎಂಗೆ (ATM) ಕನ್ನ ಹಾಕೋರು ಸಂಖ್ಯೆ ಕಡಿಮೆ ಇಲ್ಲ. ಇತ್ತೀಚಿಗೆ ಎಟಿಎಂನಲ್ಲಿ ಹಣ ಕಳವು ಮಾಡಲು ಯತ್ನಿಸಿದ್ದ ಆರೋಪಿಯನ್ನು (Accused) ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಮರ್ಜ್ಯೋತ್​ ಸಿಂಗ್ (Samarjyot Singh)​ ಕಳ್ಳತನ ಹಿಸ್ಟರಿಯೇ ಭಯಾನಕವಾಗಿದೆ.  ಈತ ಸತತವಾಗಿ ಮೂರು ಬಾರಿ ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿದ್ದಾನೆ. ಹಣ ಕದ್ದು ಸಿಕ್ಕಿಬಿದ್ದು ಜೈಲು  ಪಾಲಾಗಿದ್ರು (Jailed) ಕಳ್ಳತನ ಬುದ್ದಿ ಬಿಟ್ಟಿಲ್ಲ ಈ ಮೊಂಡ. ಜೈಲಿನಿಂದ ಹೊರಬರ್ತಿದ್ದಂತೆ ಮತ್ತೆ ತನ್ನ ಕಳ್ಳತನದ ಕಸುಬು ಮುಂದುವರಿಸಿದ್ದಾನೆ. ಪಂಜಾಬ್​ ಮೂಲದವನದ ಈತ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಎಟಿಎಂ ಕಿಯೋಸ್ಕ್ ತೆರೆಯಲು ಪ್ರಯತ್ನಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು TOI ವರದಿ ಮಾಡಿದೆ


ಸಿಸಿಟಿವಿ ಸೆರೆಯಾಯ್ತು ಕಳ್ಳ ಕಳ್ಳಾಟ


ಸಪ್ತಗಿರಿ ಕಾಲೇಜು ರಸ್ತೆಯಲ್ಲಿರುವ ಎಟಿಎಂ ಯಂತ್ರಕ್ಕೆ ಹಣ ತುಂಬುವ ಸಂಸ್ಥೆ ಕಳ್ಳತನ ಬಗ್ಗೆ ದೂರು ನೀಡಿತ್ತು. ಏಜೆನ್ಸಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ರಾತ್ರಿಯಲ್ಲಿ ಎಟಿಎಂ ಕಿಯೋಸ್ಕ್‌ಗೆ ಈ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸುತ್ತಿರುವುದನ್ನು ಗಮನಿಸಿದ್ರು. ಶೆಟರ್ ಮುಚ್ಚಿದ ನಂತರ ಯಂತ್ರವನ್ನು ಪರಿಶೀಲಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಎಟಿಎಂ ಎದುರು ಇರುವ ಅಂಗಡಿಯೊಂದರ ಸಿಸಿಟಿವಿಯಲ್ಲಿಯೂ ವ್ಯಕ್ತಿಯ ಚಲನವಲನ ದಾಖಲಾಗಿದೆ.


ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ


ಇತ್ತೀಚೆಗೆ ಆರೋಪಿ ಎಟಿಎಂಗೆ ನುಗ್ಗಿ ಶಟರ್ ಮುಚ್ಚಲು ಯತ್ನಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದರು. ದರೋಡೆಗೆ ಬಳಸಿದ್ದ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ, ಆರೋಪಿಯು ಪಂಜಾಬ್ ಮೂಲದವನಾಗಿದ್ದು, ಎಟಿಎಂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತಾರಾಜ್ಯ ಗ್ಯಾಂಗ್​ಗೆ ಸೇರಿದವನಾಗಿದ್ದಾನೆ. ನಗರದಲ್ಲಿ ಆರೋಪಿ ವಿರುದ್ಧ ಎಟಿಎಂ ದರೋಡೆ ಮತ್ತಿತರ ಹಲವು ಪ್ರಕರಣಗಳು ದಾಖಲಾಗಿವೆ.


ಇದನ್ನೂ ಓದಿ: Bengaluru: ನಾಳೆ ವಾಹನ ಸವಾರರು ರಸ್ತೆಗಿಳಿಯೋ ಮುನ್ನ ಎಚ್ಚರ; ನಗರದಲ್ಲಿ ಹಲವೆಡೆ ಸಂಚಾರ ಬಂದ್


ಎಟಿಎಂ ಒಡೆದು ಹಣ ದರೋಡೆ


ಇತ್ತೀಚೆಗಷ್ಟೇ ಪುಣೆಯಲ್ಲಿ ದುಷ್ಕರ್ಮಿಗಳು ಎಟಿಎಂ ಒಡೆದು ಹಣದೊಂದಿಗೆ ಪರಾರಿಯಾಗಿದ್ದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂನಿಂದ ಹಣ ಕದಿಯುವ ಯತ್ನದಲ್ಲಿ 3.98 ಲಕ್ಷ ರೂಪಾಯಿ ಮೌಲ್ಯದ ನಗದನ್ನು ಸುಟ್ಟು ಹಾಕಿದ್ದಾರೆ. ಜೂನ್ 12 ರಂದು ಬೆಳಗ್ಗೆ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಈ ಘಟನೆ ನಡೆದಿದೆ.


19 ಲಕ್ಷ ರೂ.ಹಣ ಸುಟ್ಟ ಕದೀಮ


ಬೆಂಗಳೂರು : ಎಟಿಎಂ ದರೋಡೆಗೆ  ದುಷ್ಕರ್ಮಿಗಳು ಯತ್ನಿಸಿದ್ದಾರೆ. ಗ್ಯಾಸ್ ಕಟರ್  ಮೂಲಕ ತೆರೆಯಲು ಯತ್ನಿಸಿದಾಗ 19 ಲಕ್ಷ ರೂ.ನಗದು ಸುಟ್ಟು ಕರಕಲಾಗಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಪರಪ್ಪನ ಅಗ್ರಹಾರ  ಬಳಿಯ ಹೊಸರೋಡ್ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ, ದರೋಡೆಗೆ ದರೋಡೆಕೋರರು ವಿಫಲ ಯತ್ನ ನಡೆಸಿದ್ದಾರೆ.


ಗ್ಯಾಸ್ ಕಟರ್ ಮೂಲಕ ಎಟಿಎಂ ತೆರೆಯಲು ಯತ್ನ


ಇದೇ ತಿಂಗಳ 14ರ ಮಧ್ಯರಾತ್ರಿಯ ನಂತರ ಗ್ಯಾಸ್ ಕಟರ್ ಮೂಲಕ ಎಟಿಎಂ ತೆರೆಯಲು ಯತ್ನಿಸಲಾಗಿತ್ತು. ಆದರೂ ಎಟಿಎಂ ತೆರೆಯಲಿಲ್ಲ. ಮತ್ತೊಂದೆಡೆ ಗ್ಯಾಸ್ ಕಟರ್ ಬೆಂಕಿಗೆ ಎಟಿಎಂನಲ್ಲಿದ್ದ 19 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಸುಟ್ಟು ಕರಕಲಾಗಿವೆ. ಎಟಿಎಂ ಭದ್ರತಾ ಸಿಬ್ಬಂದಿ ಒಂದು ವಾರ ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.


ಇದನ್ನೂ ಓದಿ: Mysuru: ನಾಳೆ ಅರಮನೆ ನಗರಿಗೆ ಮೋದಿ; ಚಾಮುಂಡಿ ಬೆಟ್ಟಕ್ಕೆ ಜನರಿಗಿಲ್ಲ ಎಂಟ್ರಿ; ಮಾಲ್ ಕ್ಲೋಸ್, ಎಲ್ಲೆಲ್ಲೂ ಪೊಲೀಸ್​


ದರೋಡೆಕೋರರು ಗ್ಯಾಸ್ ಕಟರ್ ಮೂಲಕ ಎಟಿಎಂ ತೆರೆಯಲು ಯತ್ನಿಸಿದಾಗ ನೋಟುಗಳು ಸುಟ್ಟುಹೋಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಲು ತಡವಾಗಿದೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ.


ಪೊಲೀಸರಿಂದ ತನಿಖೆ


ಘಟನೆ ಸಂಬಂಧ ಬೆಂಗಳೂರು ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೂರು ದಾಖಲಿಸಿರುವ ಭದ್ರತಾ ಸಂಸ್ಥೆಯು ಸಿಸಿಟಿವಿ ದೃಶ್ಯಾವಳಿಗಳನ್ನು ಇನ್ನೂ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

top videos
    First published: