ಬೆಂಗಳೂರಿನ ಮಹಿಳಾ ಪಿಜಿಯಲ್ಲಿ (Bengaluru Ladies PG) ಯುವತಿಯರ ಸ್ನಾನದ ವಿಡಿಯೋಗಳನ್ನು ಮಾಡಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೆದರಿಕೆ ಹಾಕುತ್ತಿದ್ದ ಕಾಮುಕನನ್ನು (Accused) ಬಂಧಿಸುವಲ್ಲಿ ಪೊಲೀಸರು (Bengaluru Police) ಯಶಸ್ಬಿಯಾಗಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಕೈಗೊಂಡಿದ್ದ ಇನ್ಸ್ಪೆಕ್ಟರ್ ಎಸ್.ಟಿ.ಯೋಗೇಶ್ (Inspector ST Yogesh) ನೇತೃತ್ವದ ತಂಡ ಕಾಮುಕನನ್ನು ಬಂಧಿಸಿದೆ. ಬಂಧಿತ ಆರೋಪಿ ವಿಡಿಯೋ ತೋರಿಸಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಪಾಂಡಿಚೇರಿ ಮೂಲದ ನಿರಂಜನ್ ಬಂಧಿತ ಆರೋಪಿ. 10ನೇ ತರಗತಿ ಓದಿಕೊಂಡಿದ್ದ ನಿರಂಜನ್ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದನು. ಪಕ್ಕದ ಲೇಡಿಸ್ ಪಿಜಿಯಲ್ಲಿದ್ದ ಯುವತಿಯರ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿದು ಲೈಂಗಿಕವಾಗಿ ಸಹಕರಿಸುವಂತೆ ಬೆದರಿಕೆ ಹಾಕುತ್ತಿದ್ದನು.
ಪಾಂಡಿಚೇರಿ ಮೂಲದವನಾದ ನಿರಂಜನ್ ತಾನೋರ್ವ ವಾಸ್ತುಶಿಲ್ಪಿ ಎಂದು ಹೇಳಿಕೊಂಡು ಬೊಮ್ಮನಹಳ್ಳಿ ವ್ಯಾಪ್ತಿಯ ಪಿಜಿಯಲ್ಲಿ ವಾಸವಾಗಿದ್ದನು. ಪಕ್ಕದ ಲೇಡಿಸ್ ಪಿಜಿಯ ಮಾಲೀಕನ ಉತ್ತಮ ಒಡನಾಟ ಹೊಂದಿದ್ದ ನಿರಂಜನ್, ಅಲ್ಲಿ ಯಾವುದೇ ಕೆಲಸಗಳಿದ್ರೂ ಮುಂದೆ ನಿಂತು ಮಾಡಿಸುತ್ತಿದ್ದನು.
ಇದೇ ಕಾರಣಕ್ಕೆ ಯಾವುದೇ ಭಯವಿಲ್ಲದೇ ಲೇಡಿಸ್ ಪಿಜಿಯಲ್ಲಿ ನಿರಂಜನ್ ತಿರುಗಾಡುತ್ತಿದ್ದನು. ಕೆಲಸ ಮಾಡುತ್ತಿರುವ ಕಾರಣ ಪಿಜಿ ಮಾಲೀಕರು ನಿರಂಜನ್ಗೆ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ನಿರಂಜನ್, ವಿಡಿಯೋ ಮಾಡಲು ಶುರು ಮಾಡಿಕೊಂಡಿದ್ದನು.
ಪೈಪ್ ಮೂಲಕ ಬಂದು ವಿಡಿಯೋ
ಪಕ್ಕದ ಕಟ್ಟಡದಲ್ಲಿರುವ ಪಿಜಿಯಲ್ಲಿಯೇ ವಾಸವಾಗಿದ್ದ ನಿರಂಜನ್, ಯುವತಿಯರ ಚಲನವಲನದ ಮೇಲೆ ನಿಗಾ ಇರಿಸಿದ್ದನು. ಕಟ್ಟಡದ ಮೇಲೆ ಒಣಗಿ ಹಾಕಿದ್ದ ಟವೆಲ್ ತೆಗೆದುಕೊಂಡ್ರೆ ಅವರು ಸ್ನಾನಕ್ಕೆ ಹೋಗ್ತಾರೆ ಅನ್ನೋದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದನು.
ಪಿಜಿ ರಿಜಿಸ್ಟರ್ನಲ್ಲಿ ಸಿಗ್ತಿತ್ತು ಮೊಬೈಲ್ ಸಂಖ್ಯೆ
ಪೈಪ್ ಮೂಲಕ ಕಟ್ಟಡದ ಬಾತ್ ರೂಮ್ ಕಿಟಕಿಯ ಮೇಲೆ ಬಂದು ದಾರದಿಂದ ಮೊಬೈಲ್ ಕೆಳಗೆ ಬಿಟ್ಟು ವಿಡಿಯೋ ಮಾಡುತ್ತಿದ್ದನು. ಹೊರಗೆ ಬಂದಾಗ ಯುವತಿಯರ ಫೋಟೋ ಸಹ ಕ್ಲಿಕ್ಕಿಸಿಕೊಳ್ಳುತ್ತಿದ್ದನು.
ಇದನ್ನೂ ಓದಿ: Bus Service: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಆರಂಭ; ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾದ MES
ನಂತರ ಪಿಜಿಗೆ ಬಂದು ರಿಜಿಸ್ಟರ್ ಪುಸ್ತಕದಿಂದ ಯುವತಿಯ ಹೆಸರು ಮತ್ತು ಮೊಬೈಲ್ ನಂಬರ್ ಪಡೆದುಕೊಂಡು ವಿಡಿಯೋ ಕಳಿಸಿ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸುತ್ತಿದ್ದನು.
ವಿದೇಶಿ ನಂಬರ್ ಆಗಿ ಬದಲಿಸಿಕೊಂಡಿದ್ದ!
ಇನ್ನು 10ನೇ ತರಗತಿ ಓದಿರುವ ನಿರಂಜನ್ ಮೊಬೈಲ್ನಲ್ಲಿ ಪಳಗಿದ್ದನು. ಮೊಬೈಲ್ Aap ಬಳಸಿ ತನ್ನ ನಂಬರ್ನ್ನು ವಿದೇಶಿ ಸಂಖ್ಯೆಯಾಗಿ ಬದಲಿಸಿಕೊಂಡಿದ್ದನು. +1(747)222-8960 ಸಂಖ್ಯೆಯಿಂದ ಯುವತಿಯರಿಗೆ ತಾನು ಸೆರೆ ಹಿಡಿದ ವಿಡಿಯೋಗಳನ್ನು ಕಳುಹಿಸುತ್ತಿದ್ದನು.
ದೂರು ದಾಖಲಿಸಿದ ಯುವತಿ
ಕೆಲ ದಿನಗಳ ಹಿಂದೆ ಪಿಜಿಯಲ್ಲಿ ವಾಸವಾಗಿದ್ದ ಯುವತಿಯೊಬ್ಬರಿಗೆ ವಿಡಿಯೋ ಕಳುಹಿಸಿದ್ದಾನೆ. ನಂತರ ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸು, ಇಲ್ಲವಾದ್ರೆ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಯುವತಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Viral Video: ರೈಲು ಪಾಸ್ ಆದ್ರೂ ಬದುಕುಳಿದ ಜೀವಗಳು; ತಾಯಿ-ಮಗ ಗ್ರೇಟ್ ಎಸ್ಕೇಪ್
ನಿರಂಜನ್ ಜೊತೆ ಪೊಲೀಸರ ಚಾಟ್
ಇನ್ನು ಯುವತಿ ದೂರು ದಾಖಲಿಸುತ್ತಿದ್ದಂತೆ ಪೊಲೀಸರೇ ನಿರಂಜನ್ ಜೊತೆ ಚಾಟ್ ಮಾಡಿದ್ದಾರೆ. ಆತನ ಷರತ್ತುಗಳಿಗೆ ಒಪ್ಪಿದ್ದೇನೆ ಎಂಬಂತೆ ನಿರಂಜನ್ಗೆ ಮೆಸೇಜ್ ಕಳುಹಿಸಿದ್ದಾರೆ. ನಂತರ ಆತ ಹೇಳಿದ ಸ್ಥಳಕ್ಕೆ ಬರೋದಾಗಿ ಹೇಳಿದಾಗ ವಿಳಾಸ ಹೇಳಿದ್ದಾನೆ. ಈ ವೇಳೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.
ತಾಯಿ ದುಡ್ಡಲ್ಲಿ ಮೋಜು ಮಸ್ತಿ
ವಾಸ್ತು ಶಿಲ್ಪಿ ಎಂದು ಹೇಳಿಕೊಂಡಿದ್ದ ನಿರಂಜನ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎಂದು ವರದಿಯಾಗಿದೆ. ತಾಯಿ ನೀಡಿದ ಹಣದಲ್ಲಿಯೇ ಬೆಂಗಳೂರಿನಲ್ಲಿದ್ದುಕೊಂಡು ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದನು ಎಂಬ ವಿಷಯ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ನಿರಂಜನ್ ಮಾದಕ ವ್ಯಸನಿಯಾಗಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ