• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Black Magic: ಮೂವರು ಯುವತಿಯರ ವಶೀಕರಣಕ್ಕೆ ಬೆತ್ತಲೆ ಪೂಜೆ; ಫೋಟೋ ಇರಿಸಿ ವಾಮಾಚಾರ

Black Magic: ಮೂವರು ಯುವತಿಯರ ವಶೀಕರಣಕ್ಕೆ ಬೆತ್ತಲೆ ಪೂಜೆ; ಫೋಟೋ ಇರಿಸಿ ವಾಮಾಚಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Haveri: ಯುವತಿಯರಿಗೆ ಹಾಗೂ ಅವರ ಕುಟುಂಬಕ್ಕೆ ಹಾನಿಯುಂಟು ಮಾಡಲು ವಾಮಾಚಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

  • News18 Kannada
  • 3-MIN READ
  • Last Updated :
  • Haveri, India
  • Share this:

ಹಾವೇರಿ: ಯುವತಿಯ ವಶೀಕರಣಕ್ಕಾಗಿ ಬೆತ್ತಲೆ ಪೂಜೆ ಮಾಡುತ್ತಿದ್ದ ಓರ್ವನನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಹಿರೆಕೇರೂರು (Hirekerur, Haveri) ತಾಲೂಕಿನ ಜೊಗಚಿಕೊಪ್ಪ (Jogachikoppa) ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಬೆತ್ತಲಾಗಿ ಪೂಜೆ ಮಾಡುತ್ತಿದ್ದ ಓರ್ವನನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಗ್ರಾಮದ ಮೂವರು ಯುವತಿಯರ ಫೋಟೋ ಇರಿಸಿ ತಲೆ ಬರುಡೆ, ಕುಂಬಳಕಾಯಿ ಮೇಲೆ ಕುಂಕುಮ ಹಚ್ಚಿ ಸ್ಮಶಾನದಲ್ಲಿ ವಾಮಾಚಾರ (Black Magic) ಮಾಡಲಾಗುತ್ತಿತ್ತು. ಓರ್ವ ಆರೋಪಿಯನ್ನು ಕಟ್ಟಿಹಾಕಿ ಪೋಲಿಸರಿಗೆ ಒಪ್ಪಿಸಿದ ಊರ ಜನರು.


ಹನುಮಂತಪ್ಪ ಹರಿಜನ ಸೇರಿದಂತೆ 4 ಜನರ ವಿರುದ್ಧ ದೂರು ನೀಡಲಾಗಿದೆ. ಯುವತಿಯರಿಗೆ ಹಾಗೂ ಅವರ ಕುಟುಂಬಕ್ಕೆ ಹಾನಿಯುಂಟು ಮಾಡಲು ವಾಮಾಚಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹಂಸಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೊಪ್ಪಳ: ಶಾಸಕ ದಡೇಸಗೂರರಿಗೆ ತರಾಟೆ


ಕೊಪ್ಪಳ ಜಿಲ್ಲೆಯಲ್ಲಿ ಶಾಸಕ ಬಸವರಾಜ್ ದಡೇಸಗೂರರಿಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಚಳ್ಳೂರಿನಲ್ಲಿ ವಾಲ್ಮೀಕಿ ನಿರ್ಮಾಣದಲ್ಲಿ ಅವ್ಯವಹಾರ ಸಂಬಂಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.


ಗ್ರಾಮದಲ್ಲಿ ವಾಲ್ಮೀಕಿ ಭವನ ಅಪೂರ್ಣವಾಗಿದೆ. ಭವನಕ್ಕಾಗಿ ಮಂಜೂರಾದ ಹಣ ಎತ್ತಿಕೊಳ್ಳಲಾಗಿದೆ. ಭವನ ನಿರ್ಮಾಣವಾಗದ ಕಾರಣಕ್ಕೆ ಶಾಸಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.




ಹಣ ಸೀಝ್


ಇನೋವಾದಲ್ಲಿ ಅನಧಿಕೃತವಾಗಿ ಸಾಗಿಸ್ತಿದ್ದ 3 ಲಕ್ಷ ಹಣವನ್ನು ಬೆಂಗಳೂರಿನ ರಾಜಗೋಪಾಲ್ ನಗರ ಪೊಲೀಸರು ಸೀಝ್​​ ಮಾಡಿದ್ದಾರೆ.


ಇದನ್ನೂ ಓದಿ:  Somanna Audio: 'ತೊಟ್ಟಿ ನನ್ ಮಗನ ಮಾತು ಕೇಳ್ಬೇಡ, ನಾಮಪತ್ರ ವಾಪಸ್ ತಕೋ'! ಮ್ಯಾಚ್‌ ಫಿಕ್ಸಿಂಗ್‌ಗೆ ಇಳಿದ್ರಾ ಸೋಮಣ್ಣ?

top videos


    ನಿನ್ನೆ ಪೀಣ್ಯ 2ನೇ ಹಂತದ ಬಳಿ ಇನೋವಾ ಕಾರಿನಲ್ಲಿ 3 ಲಕ್ಷ ಹಣ ಸಾಗಿಸಲಾಗ್ತಿತ್ತು. ವಾಹನ ಪರಿಶೀಲನೆ ವೇಳೆ ಅನಧಿಕೃತವಾಗಿ ಹಣ ಸಾಗಿಸ್ತಿರೋದು ಪತ್ತೆಯಾಗಿದೆ. ಸದ್ಯ 3 ಲಕ್ಷ ನಗದು ಹಾಗೂ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

    First published: