ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬಾಳು ಕೊಟ್ಟ ಯುವಕ

ಅನಾಥ ಯುವತಿಯನ್ನು ಮದುವೆಯಾದ ಯುವಕ

ಅನಾಥ ಯುವತಿಯನ್ನು ಮದುವೆಯಾದ ಯುವಕ

ಅವರಿಬ್ಬರು ಇಂದು ಯರಮರಸ್ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮದುವೆ ಮಾಡಿಕೊಂಡು  ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನಡೆಯಿತು.

  • Share this:

ರಾಯಚೂರು(ಜ.30) :  ಅನಾಥಾಶ್ರಮದಲ್ಲಿ ಬೆಳೆದ ಯುವತಿಯನ್ನು ಯುವಕ ಮದುವೆ ಮಾಡಿಕೊಳ್ಳುವ ಮೂಲಕ ಬಾಳನ್ನು ಕೊಟ್ಟಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ದುಡಿಯಲು ತಂದೆ ತಾಯಿಯರೊಂದಿಗೆ ಬಂದಿರುವ  ಮಿನಾಕ್ಷಿ ಮತ್ತು ಅವಳ ತಂದೆ-ತಾಯಿಗಳು ಕೂಲಿ ಕೆಲಸ ಮಾಡಿಕೊಂಡಿದ್ದರು.


ರಾಯಚೂರು ನಗರದಲ್ಲಿ ಕೂಲಿಯನ್ನ ನಂಬಿಕೊಂಡು ವಾಸವಾಗಿದ್ದರು. ಆದರೆ ಅಕಾಲಿಕವಾಗಿ ತೀರಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಮೀನಾಕ್ಷಿ (ಪದ್ಮಾ) ಪಾಲಕರನ್ನು ಕಳೆದುಕೊಂಡು ಅನಾಥೆಯಾಗಿದ್ದಳು. ಯುವತಿಯನ್ನುಕರೆದುಕೊಂಡು ಬಂದು ಯರಮರಸ್ ನಲ್ಲಿರುವ ಕನಕದಾಸ ಅನಾಥಾಶ್ರಮದಲ್ಲಿ ಬಿಡಲಾಗಿತ್ತು. ಆಕೆ ಈಗ ಪ್ರಾಪ್ತ ವಯಸ್ಸಿಗೆ ಬಂದಿದ್ದಳು, ಬೆಳೆದು ದೊಡ್ಡವಳಾದ ಅನಾಥೆಯನ್ನು ಏಗನೂರು ಗ್ರಾಮದ ಯಲಪ್ಪ ಎಂಬ ಯುವಕ ಮುದುವೆ ಯಾಗಿದ್ದಾನೆ.


ಯುವಕ ಯಲ್ಲಪ್ಪನಿಗೆ ತಂದೆ ಇಲ್ಲ, ರಾಯಚೂರಿನ ನರಸರಡ್ಡಿಯವರ ಮನೆಯಲ್ಲಿ ವಾಸವಾಗಿದ್ದ, ಅವರ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದ, ಆದರೆ, ಆತನಿಗೂ ಮದುವೆ ಮಾಡಬೇಕಾಗಿತ್ತು, ಈ ಮಧ್ಯೆ ಅವರಿಬ್ಬರನ್ನು ಮದುವೆ ಮಾಡಿಸಲು ನರಸರಡ್ಡಿ ನಿರ್ಧರಿಸಿದ್ದರು. ಆಗ ಅನಾಥೆಯಾಗಿರುವ ಮೀನಾಕ್ಷಿಯನ್ನು ನೋಡಿ ಒಪ್ಪಿಕೊಂಡು  ಯುವತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರು.


ಇದನ್ನೂ ಓದಿ : ನಾನು ಮತ್ತು ರಮೇಶ್​​ ಜಾರಕಿಹೊಳಿ ಸಹೋದರರಿದ್ದಂತೆ: ಶ್ರೀರಾಮುಲು


ಅವರಿಬ್ಬರು ಇಂದು ಯರಮರಸ್ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮದುವೆ ಮಾಡಿಕೊಂಡು  ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನಡೆಯಿತು. ಈ ಮದುವೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ ಬಿ ವೇದಮೂರ್ತಿ ಅವರು ಶುಭಾಶಯ ಕೋರಿದರು.

First published: