ಐಎಎಸ್ ಅಧಿಕಾರಿ ವಿರುದ್ಧ 1 ರೂ ಮಾನನಷ್ಟ ಮೊಕದ್ದಮೆ ಹಾಕಿ ಗೆದ್ದ ಶಿವಮೊಗ್ಗದ ವ್ಯಕ್ತಿ

ದೂರಿನ ಪರಾಮರ್ಶೆ ಮಾಡದೆಯೇ ತಮ್ಮ ವಿರುದ್ಧ ಕ್ರಮ ಕೈಗೊಂಡು ತಮ್ಮ ಘನತೆಗೆ ಕುಂದು ತಂದಿದ್ದರು ಎಂದು ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ವಿರುದ್ಧ ಮಾಜಿ ಕಂದಾಯ ಇಲಾಖೆ ನೌಕರ ಆರೋಪ ಮಾಡಿ ಮಾನನಷ್ಟ ಭರಿಸಿಕೊಡುವಂತೆ ಕೋರಿದ್ದರು.

news18
Updated:January 13, 2020, 7:31 AM IST
ಐಎಎಸ್ ಅಧಿಕಾರಿ ವಿರುದ್ಧ 1 ರೂ ಮಾನನಷ್ಟ ಮೊಕದ್ದಮೆ ಹಾಕಿ ಗೆದ್ದ ಶಿವಮೊಗ್ಗದ ವ್ಯಕ್ತಿ
ಶಿವಮೊಗ್ಗದ ಕೋರ್ಟ್ ಸಂಕೀರ್ಣ
  • News18
  • Last Updated: January 13, 2020, 7:31 AM IST
  • Share this:
ಶಿವಮೊಗ್ಗ: ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದರೆ ತಪ್ಪಾಗಲಾರದು. ಸಾರ್ವಜನಿಕವಾಗಿ ನನ್ನ ಮಾನ ಹೋಗಿದೆ. ಹೀಗಾಗಿ ಅಧಿಕಾರಿ ನನಗೆ ಒಂದು ರೂಪಾಯಿ ಮಾನನಷ್ಟ ತುಂಬಿ ಕೊಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದ ವ್ಯಕ್ತಿಗೆ ನ್ಯಾಯ ಸಿಕ್ಕಿದೆ.  ಐಎಎಸ್ ಅಧಿಕಾರಿ ಈಗ ಈ ವ್ಯಕ್ತಿಗೆ ಒಂದು ರೂಪಾಯಿ ಹಣವನ್ನು 60 ದಿನಗಳ ಒಳಗೆ ನೀಡಬೇಕಿದೆ. ಇಂತಹ ಒಂದು ತೀರ್ಪು ನೀಡಿರುವುದು ಶಿವಮೊಗ್ಗದ 3 ನೇ ಜೆಎಂಎಫ್​ಸಿ ನ್ಯಾಯಾಧೀಶರು.

ಪ್ರಸ್ತುತ ಕೆಪಿಸಿಎಲ್​ನಲ್ಲಿ ಎಂಡಿಯಾಗಿರುವ, ಈ ಹಿಂದೆ ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರ ಕಾರ್ಯದರ್ಶಿಯಾಗಿದ್ದ ಮತ್ತು ಅದಕ್ಕೂ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನುರಾಜ್ ವಿರುದ್ಧ ಶಿವಮೊಗ್ಗದ ಶಿವಪ್ಪ ಎಂಬುವವರು 2014ರ ಅ. 9ರಂದು ಮಾನನಷ್ಟ ಕೇಸು ದಾಖಲಿಸಿದ್ದರು. ಒಂದು ರೂ ಮಾನನಷ್ಟ ಕೊಡಿಸುವಂತೆ ಶಿವಪ್ಪ ಮನವಿ ಮಾಡಿದ್ದರು. ಅಂದು ಈ ದಾವೆಯನ್ನು ನ್ಯಾಯಾಲಯ ವಿಚಾರಣೆಗೆ ಮಾನ್ಯ ಕೂಡ ಮಾಡಿತ್ತು.

ಇದನ್ನೂ ಓದಿ: ಇದು ಪರಾಕ್ರಮಿಗಳ ಭೂಮಿಯಲ್ಲ: ಕನ್ನಡ ನೆಲದಲ್ಲೇ ಕರ್ನಾಟಕ ತೆಗಳಿದ ಮರಾಠಿ ಸಾಹಿತಿ

ಈ ಹಿಂದೆ, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದ ವಿನೋಬ ನಗರ ನಿವಾಸಿಯಾಗಿರುವ ಕೆ. ಶಿವಪ್ಪ ಅವರು ಈ ಮೂಲಕ ರಾಜ್ಯದ ಗಮನ ಸೆಳೆದಿದ್ದರು.  6 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಇದೀಗ ನ್ಯಾಯಾಲಯವು ತೀರ್ಪು ನೀಡಿದೆ. ಶಿವಪ್ಪ ಅವರಿಗೆ ಪೊನ್ನುರಾಜ್ 60 ದಿನದೊಳಗೆ 1 ರೂ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿದೆ.

K Shivappa
ಮಾನನಷ್ಟ ಮೊಕದ್ದಮೆ ಗೆದ್ದ ಕೆ. ಶಿವಪ್ಪ


ಐಎಎಸ್ ಅಧಿಕಾರಿ ಮಾಡಿದ ತಪ್ಪೇನು?

ಕಂದಾಯ ಇಲಾಖೆ ನಿವೃತ್ತ ನೌಕರ ಕೆ. ಶಿವಪ್ಪ ವಿರುದ್ದ 2011 ರ ಏಪ್ರಿಲ್ 5 ರಂದು ಶಿವಮೊಗ್ಗದವರೇ ಆದ ಎಎಂ ಮಹದೇವಪ್ಪ ಎಂಬುವವರು ಆಗ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರಿಗೆ ದೂರೊಂದನ್ನು ಸಲ್ಲಿಸಿದ್ದರು.  ಅದರಲ್ಲಿ ಕೆ. ಶಿವಪ್ಪ ನಿವೃತ್ತರಾಗಿದ್ದರೂ ಕಂದಾಯ ಇಲಾಖೆಯಲ್ಲಿ ಕಾಣಿಸಿಕೊಂಡು, ಸಾರ್ವಜನಿಕ ವ್ಯವಹಾರಕ್ಕೆ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸದೆಯೇ, ಶಿವಪ್ಪಗೆ ಯಾವುದೇ ನೋಟಿಸ್ ಜಾರಿಗೊಳಿಸದೆಯೇ, ಶಿವಪ್ಪ ಯಾವುದೇ ಇಲಾಖೆಗಳಿಗೆ ಹೋಗಬಾರದೆಂದು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದನ್ನು ಆಯಾ ಇಲಾಖೆ ನೋಟಿಸ್ ಬೋರ್ಡ್​ಗಳಲ್ಲಿಯೂ ಪ್ರಕಟಿಸಲಾಗಿತ್ತು.ಇದನ್ನೂ ಓದಿ: ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ; ಸಿಎಂ ಯಡಿಯೂರಪ್ಪ

ತಮ್ಮ ಅರಿವಿಗೆ ಬಾರದೇ ಸುತ್ತೋಲೆ ಹೊರಡಿಸಿ ನಿರ್ಬಂಧಿಸಿದ್ದರ ವಿರುದ್ಧ ಕೆ. ಶಿವಪ್ಪ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆಗ ತಮ್ಮ ಸುತ್ತೋಲೆಯನ್ನು ಪೊನ್ನುರಾಜ್ ಹಿಂಪಡೆದಿದ್ದರು. ಈ ಸುತ್ತೋಲೆ ಹಿನ್ನೆಲೆಯಲ್ಲಿ ತಮಗೆ ಮಾನನಷ್ಟವಾಗಿದೆ. ಅಲ್ಲದೇ, ಸುತ್ತೋಲೆ ಪರಿಣಾಮ ತಮ್ಮ ವ್ಯಾವಹಾರಿಕ ಬದುಕಿನ ಮೇಲೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಆದರೆ, 25 ಲಕ್ಷ ರೂ.ಗೆ ಬದಲಾಗಿ, ಶಿವಪ್ಪ ಕೇವಲ 1 ರೂ. ಗೆ  ನೀಡುವಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈಗ ಜೆಎಂಎಫ್​ಸಿ ನ್ಯಾಯಾಲಯದ ತೀರ್ಪಿನಿಂದಾಗಿ ಶಿವಪ್ಪ ಅವರ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದ್ದಂತಾಗಿದೆ.

ಒಟ್ಟಿನಲ್ಲಿ, ಇಂತಹ ಅಪರೂಪದ ಸುದೀರ್ಘ ಪ್ರಕರಣವೊಂದು ಇದೀಗ ಮುಕ್ತಾಯ ಕಂಡಂತಾಗಿದೆ. ಅಧಿಕಾರಿಗಳು ಸಾರ್ವಜನಿಕ ಬದುಕಿನಲ್ಲಿ ಯಾವಾಗಲೂ ಕತ್ತಿಯ ಅಲುಗಿನ ಮೇಲೆಯೇ ನಡೆಯಬೇಕಿರುತ್ತದೆ. ಇಂತಹ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ತಿರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ನೀತಿಪಾಠ ಈ ಕೋರ್ಟ್ ತೀರ್ಪಿನಿಂದ ಕಂಡುಕೊಳ್ಳಬಹುದಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: January 13, 2020, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading