• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Channapatna: ಸಾಯಿಬಾಬಾ ಅವತಾರವೆಂದು ಜನರಿಗೆ ವಂಚನೆ; ನಕಲಿ ಬಾಬಾನಿಗಾಗಿ ಬಲೆ ಬೀಸಿರುವ ಪೊಲೀಸರು

Channapatna: ಸಾಯಿಬಾಬಾ ಅವತಾರವೆಂದು ಜನರಿಗೆ ವಂಚನೆ; ನಕಲಿ ಬಾಬಾನಿಗಾಗಿ ಬಲೆ ಬೀಸಿರುವ ಪೊಲೀಸರು

ನಕಲಿ ಬಾಬನಿಗಾಗಿ ಬಲೆಬೀಸಿರುವ ಪೊಲೀಸರು

ನಕಲಿ ಬಾಬನಿಗಾಗಿ ಬಲೆಬೀಸಿರುವ ಪೊಲೀಸರು

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಚನ್ನಪಟ್ಟಣಕ್ಕೆ ಆಧ್ಯಾತ್ಮಿಕ ಪುರುಷ ಸಾಯಿಬಾಬಾ ಅವರ ಪುನರ್ಜನ್ಮ ಎಂದು ವ್ಯಕ್ತಿ ಪ್ರತಿನಿತ್ಯ ಬರುತ್ತಿದ್ದು ಜನರ ಕಷ್ಟಗಳನ್ನು ನಿವಾರಿಸುವುದಾಗಿ ಹೇಳಿಕೊಂಡು ಪ್ರತಿಯೊಬ್ಬರಿಂದ ತಲಾ 5 ಲಕ್ಷ ರೂಪಾಯಿಗಳನ್ನು 20 ಜನರಿಂದ ಪಡೆದುಕೊಂಡಿದ್ದಾನೆ. ಸಚಿನ್‌ನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದೇ ಇದ್ದರೂ ಆತನ ಆಪ್ತರಲ್ಲಿ ಒಬ್ಬನಾದ ವನ್ನಿಯಾ ರಾಜ್‌ನನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಂದೆ ಓದಿ ...
  • Share this:

ತಮ್ಮನ್ನು ತಾವು ಪವಾಡ ಪುರುಷರು ಎಂದು ಹೇಳಿಕೊಂಡು ಭಕ್ತಿಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವುದು (Cheating) ಅವ್ಯಾತವಾಗಿ ನಡೆದುಕೊಂಡು ಬಂದಿದೆ. ಭಕ್ತರ ಕಷ್ಟಗಳನ್ನು ನಿವಾರಿಸುವುದಾಗಿ ಹೇಳುವ ಈ ಪವಾಡ ಪುರುಷರು ಇಲ್ಲವೇ ದೇವಮಾನವರು ತಾವು ದೇವೀ ಸ್ವರೂಪದವರು (Goddess form) ಈ ಯುಗದಲ್ಲಿ ಪುನರ್ಜನ್ಮ ತಾಳಿರುವುದಾಗಿ ಹೇಳಿಕೊಂಡು ಭಕ್ತಿಯ ಸೋಗಿನಲ್ಲಿ ಜನರನ್ನು (People) ಯಾಮಾರಿಸುತ್ತಿರುತ್ತಾರೆ. ಇಂತಹ ವಂಚನೆಗಳ ಜಾಲಕ್ಕೆ ಜನರು ಬೀಳಬಾರದು ಹಾಗೂ ಇಂತಹ ಯಾವುದೇ ಮಾಹಿತಿ ದೊರೆತರೂ ಕೂಡಲೇ ಕಾನೂನು ಪಾಲಕರಿಗೆ ತಿಳಿಸಬೇಕು ಎಂದು ಪೊಲೀಸರು (Police) ಜನರನ್ನು ವಿನಂತಿಸಿದರೂ ಜನರು ಮಾತ್ರ ಸುಲಭವಾಗಿ ಇಂತಹ ಖದೀಮರ ಜಾಲಕ್ಕೆ ಬೀಳುತ್ತಿದ್ದಾರೆ.


ಬಹಳಷ್ಟು ದುಡ್ಡು, ಬಂಗಾರ ಕಳೆದುಕೊಂಡ ನಂತರ ತಾವು ವಂಚನೆಗೊಳಗಾಗಿರುವುದಾಗಿ ಪೊಲೀಸರಿಗೆ ದೂರು ನೀಡುತ್ತಾರೆ. ಈಗ ಇಂತಹುದ್ದೇ ಘಟನೆಗೆ ಚನ್ನಪಟ್ಟಣ ಸಾಕ್ಷಿಯಾಗಿದೆ. ತಾನು ಅವತಾರ ಪುರುಷ ಸಾಯಿಬಾಬನ ಪುನರ್ಜನ್ಮ ಎಂದು ಹೇಳಿಕೊಂಡು ಮಹಾರಾಷ್ಟ್ರದ ಕೊಲ್ಹಾಪುರದ ವ್ಯಕ್ತಿ ಜನರಿಂದ ಹಣ ಪಡೆದುಕೊಂಡು ಪರಾರಿಯಾಗಿದ್ದಾನೆ.


ವಂಚನೆ ಪ್ರಕರಣ ದಾಖಲಿಸಿರುವ ಪೊಲೀಸರು
ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ ಸಚಿನ್ ಅಕಾರಾಂ ಸರ್ಗಾರ್ ಎಂಬಾತ ತಾನು ಆಧ್ಯಾತ್ಮಿಕ ಪುರುಷ ಸಾಯಿಬಾಬಾ ಅವರ ಪುನರ್ಜನ್ಮ ಎಂದು ಹೇಳಿಕೊಂಡಿದ್ದು ಇದೀಗ ಸಚಿನ್ ಹಾಗೂ ಆತನ ಐದು ಸಹಚರರ ವಿರುದ್ಧ ಕರ್ನಾಟಕ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.


ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಚನ್ನಪಟ್ಟಣಕ್ಕೆ ಈತ ಪ್ರತಿನಿತ್ಯ ಬರುತ್ತಿದ್ದು ಜನರ ಕಷ್ಟಗಳನ್ನು ನಿವಾರಿಸುವುದಾಗಿ ಹೇಳಿಕೊಂಡು ಪ್ರತಿಯೊಬ್ಬರಿಂದ ತಲಾ 5 ಲಕ್ಷ ರೂಪಾಯಿಗಳನ್ನು 20 ಜನರಿಂದ ಪಡೆದುಕೊಂಡಿದ್ದಾನೆ. ಸಚಿನ್‌ನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದೇ ಇದ್ದರೂ ಆತನ ಆಪ್ತರಲ್ಲಿ ಒಬ್ಬನಾದ ವನ್ನಿಯಾ ರಾಜ್‌ನನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.


ವಂಚನೆಗೊಳಗಾದವರಿಂದ ಪೊಲೀಸರಿಗೆ ದೂರು
ಚನ್ನಪಟ್ಟಣದ ಎಸ್ ಸಿಂಧು ಎಂಬುವವರ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದ್ದು ಸಚಿನ್ ರೂ 5 ಲಕ್ಷ ವಂಚಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ತನ್ನದು ಸಾಯಿಬಾಬಾನ ಪುನರ್ಜನ್ಮ ಎಂದು ಹೇಳಿಕೊಂಡು ಸಚಿನ್ ಚನ್ನಪಟ್ಟಣಕ್ಕೆ ಬಂದಿದ್ದನು ಎಂದು ಸಿಂಧು ದೂರಿನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ:    Sister Suicide: ಗೌರಿ ತರೋ ವಿಚಾರಕ್ಕೆ ಗಲಾಟೆ, ತಂಗಿ ಜೊತೆ ಜಗಳ ಮನನೊಂದು ಅಕ್ಕ ಸೂಸೈಡ್!


ಜನರ ಕಷ್ಟಗಳನ್ನು ನಿವಾರಿಸುವುದಾಗಿ ಆತ ಜನರಿಗೆ ಭರವಸೆ ನೀಡಿದ್ದನು. ಕೆಲವರು ಆತನನ್ನು ನಂಬಿದರು ಹಾಗೂ ಆಶ್ರಯ ಮತ್ತು ಆಹಾರವನ್ನು ನೀಡಿದರು. ಯಶೋದಮ್ಮ ಎಂಬುವವರಿಗೆ ಸೇರಿದ ಮನೆಯಲ್ಲಿ ಆತ ತಂಗಿದ್ದನು ಹಾಗೂ ದಿನಕ್ಕೆರಡು ಬಾರಿ ಭಜನೆಗಳನ್ನು ನಡೆಸುತ್ತಿದ್ದನು ಎಂದು ಸಿಂಧು ತಿಳಿಸಿದ್ದಾರೆ.


ಫಾರ್ಮ್‌ಹೌಸ್‌ ಬೇಕೆಂದು ಪಟ್ಟು ಹಿಡಿದ ಸಚಿನ್
ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದಂತೆ ಭಜನೆಗಳನ್ನು ಸಿಂಧು ಅವರ ಫಾರ್ಮ್ ಹೌಸ್‌ನಲ್ಲಿ ನಡೆಸಲಾಗುತ್ತಿತ್ತು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫಾರ್ಮ್‌ ಹೌಸ್‌ನ ಮಾಲೀಕತ್ವವನ್ನು ಶ್ರೀ ಪ್ರೇಮ್ ಸ್ವರೂಪಿಣಿ ಸಾಯಿ ಸೇವಾ ಸಮಿತಿಗೆ ವರ್ಗಾಯಿಸಲು ಆರೋಪಿ ಸಚಿನ್ ತಮ್ಮ ಮೇಲೆ ಒತ್ತಡ ಹೇರುತ್ತಿದ್ದುದಾಗಿ ಸಿಂಧು ತಿಳಿಸಿದ್ದಾರೆ.


ಇದನ್ನೂ ಓದಿ:  Crime News: ಕದ್ದುಮುಚ್ಚಿ ಸಿಗರೇಟ್ ಸೇದ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು! ನೋಡಿದ 6 ನೇ ಕ್ಲಾಸ್ ವಿದ್ಯಾರ್ಥಿಗೆ ಧಮ್ಕಿ


ಸಿಂಧು ಅವರ ಪತಿ ಸಚಿನ್ ಅವರ ಬೇಡಿಕೆಯನ್ನು ವಿರೋಧಿಸಿದ್ದರು ಹಾಗೂ ಸಚಿನ್‌ನ ತಂಡ ಚನ್ನಪಟ್ಟಣದಿಂದ ನಿಧಾನವಾಗಿ ಪಲಾಯನಗೈಯ್ಯತೊಡಗಿತು.


ಸಚಿನ್ ಹಾಗೂ ಸಹಚರರ ಪಲಾಯನ
ಆಕೆಯಂತೆಯೇ ಇನ್ನೂ ಹಲವರನ್ನು ದೇವಮಾನವ ವಂಚಿಸಿರುವುದು ಕೊನೆಗೆ ತಿಳಿದುಬಂದಿದೆ. ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಸಚಿನ್ ಬಗೆಗೆ ಕೊಂಚ ಸುಳಿವು ದೊರೆತಿರುವುದಾಗಿ ತಿಳಿಸಿದ್ದು ಆತ ಮೂವರು ಮಹಿಳೆಯರನ್ನು ಮದುವೆಯಾಗಿದ್ದು ಅದರಲ್ಲೊಂದು ಫೋಟೋ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಂತಹ ಅವತಾರ ಪುರುಷರ ಸೋಗಿನಲ್ಲಿ ಹಲವಾರು ವ್ಯಕ್ತಿಗಳು ಜನರನ್ನು ವಂಚಿಸುತ್ತಿದ್ದು, ಭಕ್ತರು ಹಣ ನೀಡುವ ಮೊದಲು ಯೋಚಿಸಬೇಕು ಹಾಗೆಯೇ ಇಂತಹವರ ಬಗ್ಗೆ ತಮಗೆ ತಿಳಿಸಬೇಕು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ ಜನರು ವಂಚನೆಗೊಳಗಾದ ಮೇಲೆಯೇ ಪ್ರಕರಣ ದಾಖಲಿಸಲು ಕಚೇರಿಗೆ ಬರುತ್ತಾರೆ ಈ ಸಮಯದಲ್ಲಿ ಖದೀಮರು ಪಲಾಯನಗೈಯ್ಯುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

top videos
    First published: