Chikkamagaluru: ಅಮೆರಿಕ ಕ್ರಿಕೆಟ್ ತಂಡದಲ್ಲಿ ಕಾಫಿನಾಡಿನ ಯುವಕ ಕಮಾಲ್ - ಯಾರಿದು ನಾಸ್ತೋಶ್ ಕೆಂಜಿಗೆ ? ಇಲ್ಲಿದೆ ನೋಡಿ

Ameican Cricket Team: ಒಟ್ಟಾರೆ, ಸಾಧನೆ ಮಾಡ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ನಮ್ಮಲ್ಲಿ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಅಮೆರಿಕಕ್ಕೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ

Ameican Cricket Team:  ಒಟ್ಟಾರೆ, ಸಾಧನೆ ಮಾಡ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ನಮ್ಮಲ್ಲಿ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಅಮೆರಿಕಕ್ಕೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ

Ameican Cricket Team: ಒಟ್ಟಾರೆ, ಸಾಧನೆ ಮಾಡ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ನಮ್ಮಲ್ಲಿ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಅಮೆರಿಕಕ್ಕೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ

  • Share this:
ಚಿಕ್ಕಮಗಳೂರು : ವಿಶ್ವದ ದೊಡ್ಡಣ್ಣ ಅಮೆರಿಕಾದ (America) ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ (National cricket Team) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ 31 ವರ್ಷದ ಯುವಕ ನಾಸ್ತೋಶ್ ಕೆಂಜಿಗೆ ಸ್ಥಾನ ಪಡೆದಿದ್ದು ನಾಲ್ಕು ವರ್ಷಗಳಿಂದ ಅಮೆರಿಕಾ ತಂಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನ ಆಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ವಿಶ್ವದ ಕ್ರೀಡಾಪ್ರೇಮಿಗಳ ಮನಗೆದ್ರೆ, ಎಬಿ ಡಿವಿಲಿಯರ್ಸ್ ಕೋಟ್ಯಾಂತರ ಭಾರತೀಯರ ನೆಚ್ಚಿನ ಆಟಗಾರ. ಕ್ರಿಕೆಟ್‍ಗೆ ದೇಶ-ಭಾಷೆಯ ಹಂಗಿಲ್ಲ. ಗಡಿ ರೇಖೆಯನ್ನ ಮೀರಿ ಕ್ರಿಕೆಟ್ ಹಾಗೂ ಕ್ರಿಕೆಟಿಗರು ಎಲ್ಲರ ಮನಗೆದ್ದಿದ್ದಾರೆ. ಕ್ರಿಕೆಟನ್ನೇ ಫ್ಯಾಶನ್ ಅಂತ ಪ್ರೀತಿಸ್ತಿರೋ ಕಾಫಿನಾಡಿನ ಯುವಕನೋರ್ವ ಕಳೆದ ನಾಲ್ಕು ವರ್ಷದಿಂದಲೂ ಸದ್ದಿಲ್ಲದೇ ಅಮೆರಿಕ ತಂಡವನ್ನ ಪ್ರತಿನಿಧಿಸುತ್ತ ಭಾರತೀಯರನ್ನೇ ಬೆರಗುಗೊಳಿಸಿದ್ದಾನೆ.

ಬುಗುರಿಯಂತೆ ಬಾಲನ್ನ ತಿರುಗಿಸ್ತಿರೋ ಯುವಕ. ರಾಹುಲ್ ದ್ರಾವಿಡ್ ಶೈಲಿಯಲ್ಲಿ ಬ್ಯಾಟ್ ಬೀಸ್ತಿರೋ ಕ್ರಿಕೆಟರ್. ಬೌಲಿಂಗ್-ಬ್ಯಾಟಿಂಗ್ ಎರಡಕ್ಕೂ ಸೈ ಅನ್ನೋ ಜಾಯಮಾನದ ಯುವಕ. ಕಾಫಿನಾಡ ಈ ಅಪ್ರತಿಮ ಪ್ರತಿಭೆ ಇಂದು ಅಂತರರಾಷ್ಟ್ರೀಯ ಕ್ರಿಕೆಟರ್. ಅಯ್ಯೋ..? ಇದ್ಯಾರಿದು, ನಾವು ನೋಡಿದ ಹಾಗೆನೇ ಇಲ್ವಲ್ಲ ಅಂತ ಅಚ್ಚರಿಯಾಗ್ಬೇಡಿ. ಈ ಯುವಕ ಅಮೆರಿಕ ತಂಡದ ಕ್ರಿಕೆಟರ್. ಹೆಸರು, ನೋಸ್ತುಶ್ ಕೆಂಜಿಗೆ.

ಅಮೆರಿಕ ತಂಡದ ಕ್ರಿಕೆಟರ್ ಆದ್ರೂ ಈತ ಅಪ್ಪಟ ಭಾರತೀಯ. ಅದ್ರಲ್ಲೂ ಕಾಫಿನಾಡ ಪುತ್ರ ಅನ್ನೋದು ಹೆಮ್ಮೆಯ ಸಂಗತಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್-ಶೃತಿ ಕೀರ್ತಿ ದಂಪತಿಯ ಪುತ್ರ. ಎಡಗೈ ಸ್ಪಿನರ್ ಆಗಿರೋ ನೋಸ್ತುಶ್ ಅಮೆರಿಕ ಕ್ರಿಕೆಟ್ ತಂಡದ ಸದಸ್ಯ.

ಇದನ್ನೂ ಓದಿ: ಎಷ್ಟೊತ್ತಾದ್ರೂ ವಿದ್ಯುತ್ ಸರಿಯಾಗಿಲ್ವಾ? ನೀರು ಬರ್ತಿಲ್ವಾ? ಬೆಂಗ್ಳೂರಲ್ಲಿ ಏನೇ ಸಮಸ್ಯೆಯಾದ್ರೂ ಈ ನಂಬರ್​ಗಳಿಗೆ ಕರೆ ಮಾಡಿ

2017ರಲ್ಲಿ ಅಮೆರಿಕ ತಂಡದ ಪರ ಅಂತರರಾಷ್ಟ್ರೀಯ ಪಂದ್ಯವಾಡಿದ ನೋಸ್ತುಶ್, ಈಗಾಗಲೇ 60 ಓಡಿಐ, ಟಿ20 ಪಂದ್ಯಗಳನ್ನಾಡಿ ಗಮನ ಸೆಳೆದಿದ್ದಾರೆ. ಕಾಫಿನಾಡಿನ ಈ ಪ್ರತಿಭೆ ಎಡಗೈಯಲ್ಲಿ ಬೌಲ್ ಮಾಡಿದ್ರೂ ಬ್ಯಾಟ್ ಬೀಸೋದು ಬಲಗೈಯಲ್ಲೇ. ಸದ್ಯ ವಿಶ್ರಾಂತಿ ಪಡೆದು ತವರೂರಿಗೆ ಆಗಮಿಸಿರುವ ನೋಸ್ತುಶ್, ಇಲ್ಲೂ ಕೂಡ ಪ್ರಾಕ್ಟಿಸ್ ಮಾಡೋದನ್ನ ನಿಲ್ಸಿಲ್ಲ. ಬಿಸಿಲ ಧಗೆಯಲ್ಲೇ ಗೆಳೆಯರ ಜೊತೆ ನೆಟ್ ಪ್ರಾಕ್ಟಿಸ್ ಮಾಡ್ತಾ ಆಟವನ್ನ ಮುಂದುವರೆಸಿದ್ದಾರೆ.

ಮಯಾಂಕ್ ಆಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಕ್ಲಬ್ ಕ್ರಿಕೆಟ್ನಲ್ಲಿ ಒಂದೇ ತಂಡವನ್ನ ಪ್ರತಿನಿಧಿಸುತ್ತಿದ್ದ ನೋಸ್ತುಶ್, ಅಮೆರಿಕದ ಪರ ಕ್ರಿಕೆಟ್ ಆಡುವಂತಾಗಿದೆ. ಬೆಂಗಳೂರಲ್ಲೇ ಕ್ರಿಕೆಟ್ ಆಟವನ್ನ ಅಭ್ಯಾಸ ಮಾಡಿದ್ರೂ ಹೆಚ್ಚು ಅವಕಾಶ ಇಲ್ಲಿ ಸಿಗದೇ ಇದ್ದಿದ್ದರಿಂದ ಅಮೆರಿಕ ದೇಶದ ಪರ ಆಡುವಂತಾಗಿದೆ ಅನ್ನುವ ನೋಸ್ತುಶ್, ನಾನು ಕ್ರಿಕೆಟ್ ಲವರ್, ಅಮೆರಿಕದ ಪರ ಆಡ್ತಿದ್ರೂ ಕ್ರಿಕೆಟನ್ನ ಎಂಜಾಯ್ ಮಾಡ್ತಿದ್ದೇನೆ ಅಂತಾರೆ.

ಮುಂದಿನ ಜೂನ್ನಲ್ಲಿ ಕ್ವಾಲಿಫೈಯರ್ ಮ್ಯಾಚ್ ಇದೆ, 2023ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಆಡುವ ಆಸೆಯಿದೆ ಅಂತಾ ತಮ್ಮ ಕನಸನ್ನ ಬಿಚ್ಚಿಟ್ಟಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ನೋಸ್ತುಶ್ ಸ್ನೇಹಿತರು, ತಮ್ಮೂರಿನ ಪ್ರತಿಭೆ ಅಮೆರಿಕದಲ್ಲಿ ಅರಳಿದ ಬಗ್ಗೆ ಹೆಮ್ಮೆ ಪಡ್ತಿದ್ದಾರೆ.

ಒಟ್ಟಾರೆ, ಸಾಧನೆ ಮಾಡ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ನಮ್ಮಲ್ಲಿ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಅಮೆರಿಕಕ್ಕೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ.

ಇದನ್ನೂ ಓದಿ: ಈ ವರ್ಷ ಕೇಂದ್ರ ಸರ್ಕಾರ ಕಳಿಸಿದ ಗಣರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಗಿಡ ಹುಟ್ಟುತ್ತಂತೆ

ಅಮೆರಿಕ ಕ್ರಿಕೆಟ್ ತಂಡದಲ್ಲಿ ಕಾಫಿನಾಡ ಯುವಕನ ಕಮಾಲ್ ನೋಡಿ ಕ್ರಿಕೆಟ್ ಪ್ರೇಮಿಗಳು ಸಂತಸ ಪಡುತ್ತಿದ್ದಾರೆ. ಅದಕ್ಕೆ ಹೇಳೋದಲ್ವಾ ಕ್ರಿಕೆಟ್, ದೇಶ-ಭಾಷೆಯನ್ನೂ ಮೀರಿದ್ದು ಅಂತ. ಆಲ್ ದಿ ಬೆಸ್ಟ್ ನೋಸ್ತುಶ್.

 ವೀರೇಶ್ ಹೆಚ್ ಜಿ
Published by:Sandhya M
First published: