• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಮಾಜಿ ಪತಿ ಕೊಲೆಗೆ 10 ಲಕ್ಷಕ್ಕೆ ಸುಪಾರಿ; ಉಲ್ಟಾ ಹೊಡೆದ ಹಂತಕರು, ಮುಂದೇನಾಯ್ತು?

Bengaluru: ಮಾಜಿ ಪತಿ ಕೊಲೆಗೆ 10 ಲಕ್ಷಕ್ಕೆ ಸುಪಾರಿ; ಉಲ್ಟಾ ಹೊಡೆದ ಹಂತಕರು, ಮುಂದೇನಾಯ್ತು?

ಪ್ರವೀಣ್

ಪ್ರವೀಣ್

ಪತಿ ಎರಡನೇ ಮದುವೆಯಾಗಿದ್ದಕ್ಕೆ ಸಂಧ್ಯಾ ಕೋಪಗೊಂಡಿದ್ದಳು. ಇದರಿಂದ ತಂದೆ ಸತ್ಯನಾರಾಯಣ ಜೊತೆ ಸೇರಿ ಪ್ರವೀಣ್ ಕೊಲೆಗೆ ಸಂಧ್ಯಾ ಸುಪಾರಿ ನೀಡಿದ್ದಾಳೆ ಎಂದು ದೂರು ದಾಖಲಾಗಿದೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ಮಹಿಳೆಯೋರ್ವಳು ಮಾಜಿ ಪತಿಯ (Ex Husband) ಕೊಲೆಗೆ ಸುಪಾರಿ ನೀಡಿದ ಪ್ರಕರಣ ಬೆಂಗಳೂರಿನ ಆರ್.ಟಿ.ನಗರ (RT Nagar, Bengaluru) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಹಿಳೆಯಿಂದ ಸುಪಾರಿ ಪಡೆದಿದ್ದ ಹಂತಕರು, ಕೊಲೆಗೈದೇ ವ್ಯಕ್ತಿಯಿಂದ 2.75 ಲಕ್ಷ ರೂ ಪಡೆದು ಪರಾರಿಯಾಗಿದ್ದಾರೆ. ಸಂಧ್ಯಾ ಎಂಬಾಕೆ ಪ್ರವೀಣ್ ಕೊಂಡ ಎಂಬವರನ್ನು ಮದುವೆಯಾಗಿದ್ದಳು. ದಂಪತಿಗೆ ಓರ್ವ ಮಗ ಸಹ ಇದ್ದನು. ಕೌಟುಂಬಿಕ ಕಲಹ (Family Dispute) ಹಿನ್ನೆಲೆ ಪ್ರವೀಣ್ ಮತ್ತು ಸಂಧ್ಯಾ ಡಿವೋರ್ಸ್ (Divorce)​ ಪಡೆದುಕೊಂಡಿದ್ದರು. ವಿಚ್ಛೇದನ ಬಳಿಕ ಪ್ರವೀಣ್ ಎರಡನೇ ಮದುವೆಯಾಗಿದ್ದರು. ಸಂಧ್ಯಾ ವಿಚ್ಛೇದನ ಪ್ರಕರಣವನ್ನು ಶಾನ್ ಎಂಬ ವಕೀಲೆಗೆ (Lawyer) ನೀಡಿದ್ದಳು. ಇತ್ತ ಪತಿ ಎರಡನೇ ಮದುವೆಯಾಗಿದ್ದಕ್ಕೆ ಸಂಧ್ಯಾ ಕೋಪಗೊಂಡಿದ್ದಳು. ಇದರಿಂದ ತಂದೆ ಸತ್ಯನಾರಾಯಣ ಜೊತೆ ಸೇರಿ ಪ್ರವೀಣ್ ಕೊಲೆಗೆ ಸಂಧ್ಯಾ ಸುಪಾರಿ ನೀಡಿದ್ದಾಳೆ ಎಂದು ದೂರು ದಾಖಲಾಗಿದೆ.


ಸಂಧ್ಯಾ ಮತ್ತು ಸತ್ಯನಾರಾಯಣ್ ಇಬ್ಬರೂ ಮನ್ಸೂರ್@ ದೂನ್ ಮನ್ಸೂರ್ ಎಂಬಾತನಿಗೆ ಸುಪಾರಿ ನೀಡಿದ್ದಾರೆ. ಸುಪಾರಿ ಪಡೆದ ಮನ್ಸೂರ್ ಜನವರಿ 27ರಂದು ಪ್ರವೀಣ್​ಗೆ ಕರೆ ಮಾಡಿದ್ದಾನೆ.


ದಾಖಲೆಗಾಗಿ ಹೋದಾಗ ಲಾಕ್!


ನನ್ನ ಪತ್ನಿ ವಕೀಲೆ ಶಾನ್​ ನನಗೆ ಮೋಸ ಮಾಡಿದ್ದಾಳೆ. ನಿಮ್ಮ ವಿಚ್ಛೇದನಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ನನ್ನ ಬಳಿಯಲ್ಲಿವೆ ಎಂದು ಹೇಳಿ ಆರ್.ಟಿ.ನಗರದಲ್ಲಿರುವ ಚಾಮುಂಡಿ ನಗರದಲ್ಲಿರುವ ತನ್ನ ನಿವಾಸಕ್ಕೆ ಬರುವಂತೆ ಹೇಳಿದ್ದಾನೆ. ಅದೇ ರೀತಿ ದಾಖಲೆ ಪಡೆಯಲು ಪ್ರವೀಣ್ ಜನವರಿ 28ರಂದು ಮನ್ಸೂರ್ ಮನೆಗೆ ತೆರಳಿದ್ದಾರೆ.


ಪ್ರವೀಣ್ ತೆರಳಿದಾಗ ಅಲ್ಲಿ ಮನ್ಸೂರ್ ಸೇರಿದಂತೆ ಐದು ಜನರಿದ್ದರು. ಎಲ್ಲರೂ ಪ್ರವೀಣ್ ಬಟ್ಟೆ ಕಳಚಿ, ಸಂಧ್ಯಾಳಿಗೆ ಫೋನ್ ಮಾಡಿ ನಿನ್ನ ಪತ್ನಿಯನ್ನು ಎತ್ಕಾಂಡು ಬಂದಿದ್ದೇವೆ ಎಂದು ಹೇಳಿದ್ದಾರೆ. ನಂತರ ಪ್ರವೀಣ್ ಅವರನ್ನು ಮನೆಯಲ್ಲಿ ಲಾಕ್​ ಮಾಡಿ ನಿನ್ನ ಪತ್ನಿ ಕೊಲ್ಲಲು 10 ಲಕ್ಷಕ್ಕೆ ಸುಪಾರಿ ನೀಡಿರುವ ವಿಷಯವನ್ನು ತಿಳಿಸಿದ್ದಾರೆ.


ಕೊಲೆ ಬೆದರಿಕೆ


ಈ ವೇಳೆ ಪ್ರವೀಣ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ನಂತರ  ಕಾರ್​ನಲ್ಲಿ ಪ್ರವೀಣ್ ಅವರನ್ನು ರಾಮನಗರದತ್ತ ಕರೆದುಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ಆರೋಪಿಗಳ ಬಳಿ ಮಾರಾಕಸ್ತ್ರಗಳಿದ್ದು, ಮಾರ್ಗದುದ್ದಕ್ಕೂ ಕೊಲೆ ಮಾಡೋದಾಗಿ ಬೆದರಿಕೆ  ಹಾಕಿದ್ದಾರೆ.


15 ಲಕ್ಷದ ಆಫರ್


ಮಾರ್ಗ ಮಧ್ಯೆ ಉಲ್ಟಾ ಹೊಡೆದ ಆರೋಪಿಗಳು 15 ಲಕ್ಷ ನೀಡಿದರೆ ನಿನ್ನನ್ನು ಕೊಲ್ಲಲ್ಲ ಎಂದು ಹೇಳಿದ್ದಾರೆ. ಮನ್ಸೂರ್ ಫೋನ್ ಪಡೆದು ಎರಡನೇ ಪತ್ನಿಗೆ ಕರೆದ ಮಾಡಿದ ಪ್ರವೀಣ್ ಅಪಹರಣದ ವಿಷಯ ತಿಳಿಸಿ ಹಣ ಕಳುಹಿಸುವಂತೆ ಹೇಳಿದ್ದಾರೆ.


ಪ್ರವೀಣ್ ಬಳಿಯಲ್ಲಿದ್ದ ಕ್ರೆಡಿಟ್ ಕಾರ್ಡ್​​ನಿಂದ 30 ಸಾವಿರ ಮತ್ತು ಫೋನ್​ನಿಂದ 50 ಸಾವಿರ ಪಡೆದುಕೊಂಡಿದ್ದಾರೆ. ಎರಡನೇ ಪತ್ನಿಯೂ ಸಹ ಅವರಿವರಿಂದ ಹಣ ಪಡೆದು ಹೇಳಿದ ಮೊಬೈಲ್​ ಸಂಖ್ಯೆಗೆ ಹಣ ವರ್ಗಾಯಿಸಿದ್ದಾರೆ. ನಂತರ ಪ್ರವೀಣ್ ಬಳಿಯಲ್ಲಿದ್ದ 20 ಗ್ರಾಂ ಚಿನ್ನದ ಸರ, 8 ಗ್ರಾಂ ಎರಡು ಉಂಗುರು ಹಾಗೂ ಐ ಫೋನ್ ಕಿತ್ತುಕೊಂಡು ಜನವರಿ 29ರಂದು ಕಮ್ಮನಹಳ್ಳಿ ಬಳಿ ಕಾರ್​ನಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ.


ಇದನ್ನೂ ಓದಿ:  Traffic Rules: ವಾಹನ ಸವಾರರೇ ಗಮನಿಸಿ, ರೂಲ್ಸ್​ ಬ್ರೇಕ್​ಗೆ ಪ್ರತಿ ಸಿಗ್ನಲ್​​ನಲ್ಲೂ ಬೀಳುತ್ತೆ ದಂಡ


8 ಜನರ ವಿರುದ್ಧ ದೂರು ದಾಖಲು


ಹಲ್ಲೆಗೊಳಗಾಗಿದ್ದರಿಂದ ನೇರವಾಗಿ ಆಸ್ಪತ್ರೆಗೆ ತೆರಳಿದ ಪ್ರವೀಣ್ ಚಿಕಿತ್ಸೆ ಪಡೆದು ಪೊಲೀಸರ ಬಳಿ ಬಂದಿದ್ದಾರೆ. ಚಿಕಿತ್ಸೆ ಪಡೆದುಕೊಳ್ಳಲು ಹೋಗಿದ್ದರಿಂದ ದೂರು ದಾಖಲಿಸೋದು ತಡವಾಯ್ತು ಎಂಬ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.




ಈ ಸಂಬಂಧ ಮಾಜಿ ಪತ್ನಿ ಸಂಧ್ಯಾ, ಮಾವ ಸತ್ಯನಾರಾಯಣ್ ಸೂರ್, ಮನ್ಸೂರ್ ಸೇರಿದಂತೆ 8 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಆರ್​.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು