• Home
  • »
  • News
  • »
  • state
  • »
  • BDA: ಪರಿಹಾರ ನೀಡದ ಬಿಡಿಎ; ಲೇಔಟ್ ಮುಖ್ಯರಸ್ತೆಗೆ ಬೇಲಿ ಹಾಕಿದ ವೃದ್ಧ ದಂಪತಿ

BDA: ಪರಿಹಾರ ನೀಡದ ಬಿಡಿಎ; ಲೇಔಟ್ ಮುಖ್ಯರಸ್ತೆಗೆ ಬೇಲಿ ಹಾಕಿದ ವೃದ್ಧ ದಂಪತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೃದ್ಧ ದಂಪತಿ (Old Couple) ನಾಡಪ್ರಭು ಕೆಂಪೇಗೌಡ ಲೇಔಟ್​​ (Nadaprabhu Kempegowda Layour) ಮೂಲಕ ಹಾದು ಹೋಗುವ ಮೇಜರ್ ಆರ್ಟೀರಿಯಲ್ ರಸ್ತೆ (MAR- Major Arterial road)ಗೆ ಬೇಲಿ ಹಾಕಿದ್ದಾರೆ

  • News18 Kannada
  • Last Updated :
  • Bangalore, India
  • Share this:

ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (Bangalore Development Authority) ವಿರುದ್ಧ ಆಕ್ರೋಶಗೊಂಡ ವೃದ್ಧ ದಂಪತಿ (Old Couple) ನಾಡಪ್ರಭು ಕೆಂಪೇಗೌಡ ಲೇಔಟ್​​ (Nadaprabhu Kempegowda Layour) ಮೂಲಕ ಹಾದು ಹೋಗುವ ಮೇಜರ್ ಆರ್ಟೀರಿಯಲ್ ರಸ್ತೆ (MAR- Major Arterial road)ಗೆ ಬೇಲಿ ಹಾಕಿದ್ದಾರೆ. ಬಿಡಿಎ ವಶಪಡಿಸಿಕೊಂಡಿರುವ 100 ಮೀಟರ್​ಗಳಷ್ಟು ರಸ್ತೆಗೆ ತಂತಿ ಬೇಲಿ (Fence) ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಕೆಂಪೇಗೌಡ ಲೇಔಟ್‌ನ ನಾಲ್ಕನೇ ಬ್ಲಾಕ್‌ನ ಕೋಮಘಟ್ಟ ಗ್ರಾಮದ ನಿವಾಸಿಗಳಾದ ಚಿಕ್ಕ ಬೆಟ್ಟಯ್ಯ (75) ಮತ್ತು ಲಕ್ಷ್ಮಮ್ಮ (70) ಬೇಲಿ ಹಾಕಿದ ವೃದ್ಧ. ಪಾರ್ಶ್ವವಾಯುನಿಂದ ಚಿಕ್ಕ ಬೆಟ್ಟಯ್ಯ ಅವರ ಎಡಗಾಲು ಮತ್ತು ಎಡಗೈ ನಿಷ್ಕ್ರಿಯಗೊಂಡಿದೆ. ಚಿಕ್ಕ ಬೆಟ್ಟಯ್ಯ ಅವರು ಕೆಎಸ್​ಆರ್​ಟಿಸಿಯ (KSRTC Retired Employee) ನಿವೃತ್ತ ಉದ್ಯೋಗಿ.


ಕಳೆದ ಎರಡು ವರ್ಷಗಳಿಂದ ಪರಿಹಾರ ನೀಡದಿದ್ದಾಗ ಬೇಲಿ ಹಾಕಿದ್ದಾರೆ. ಲೇಔಟ್‌ನ ಒಂಬತ್ತು ಬ್ಲಾಕ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.


ಮೈಸೂರು ರಸ್ತೆಯನ್ನು ಮಾಗಡಿ ರಸ್ತೆಯಿಂದ ಮತ್ತು ಲೇಔಟ್‌ನ ಎಲ್ಲಾ ಒಂಬತ್ತು ಬ್ಲಾಕ್‌ಗಳಲ್ಲಿ 26 ಸಾವಿರ ಸೈಟ್‌ಗಳೊಂದಿಗೆ ಸಂಪರ್ಕಿಸುವ 10.76 ಕಿಮೀ ರಸ್ತೆಯಲ್ಲಿ 5.7 ಕಿಮೀ ಕಾಮಗಾರಿಯನ್ನು ಬಿಡಿಎ ಪೂರ್ಣಗೊಳಿಸಿದೆ.


ಭೂಮಿ ನಮ್ಮ ಹೆಸರಿಗೆ ನೋಂದಣಿ ಆಗಿಲ್ಲ


ಈ ಕುರಿತು ಮಾತನಾಡಿರುವ ಇಂಡಿಯನ್​ ಎಕ್ಸ್​ಪ್ರೆಸ್​ ಜೊತೆ ಮಾತನಾಡಿದ ಬೆಟ್ಟಯ್ಯ, ಈ ಲೇಔಟ್ ನಿರ್ಮಾಣಕ್ಕಾಗಿ ನಾವು 14 ಗುಂಟೆ ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಪೂರ್ವಜರು ರೈತರಾಗಿದ್ದು, 60 ವರ್ಷಗಳಿಂದ ಈ ಜಮೀನು ನಮ್ಮ ಹೆಸರಿನಲ್ಲಿದೆ. 14 ಗುಂಟೆ ಭೂಮಿ ಬದಲಾಗಿ ನಮಗೆ ಅಭಿವೃದ್ಧಿಪಡಿಸಿದ 4,150 ಚದರ ಅಡಿಯ ಭೂಮಿ ಮತ್ತು ಪರಿಹಾರ ಮೊತ್ತವನ್ನು ನೀಡಲಾಗಿದೆ. ಆದ್ರೆ ನೀಡಲಾಗಿರುವ ಭೂಮಿ ನಮ್ಮ ಹೆಸರಿಗೆ ನೋಂದಣಿ ಆಗಿಲ್ಲ ಎಂದು ಬೆಟ್ಟಯ್ಯ ಹೇಳುತ್ತಾರೆ.


bda layouts, nadaprabhu kempegowda layout site price, kempegowda layout near me, kannada news, karnataka news, ಬಿಡಿಎ ಪರಿಹಾರ, ಬಿಡಿಎ ಲೇಔಟ್​​ಗಳು, ನಾಡಪ್ರಭು ಕೆಂಪೇಗೌಡ ಲೇಔಟ್​
ಚಿಕ್ಕ ಬೆಟ್ಟಯ್ಯ ಮತ್ತು ಲಕ್ಷ್ಮಮ್ಮ


ಇದನ್ನೂ ಓದಿ: Kalaburagi: ರೇಪ್​ ಆಂಡ್ ಮರ್ಡರ್​ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ


ನಮ್ಮ ಫೈಲ್ ಮಾತ್ರ ಕ್ಲೀಯರ್ ಆಗ್ತಿಲ್ಲ


ಕಳೆದ ಎರಡು ವರ್ಷಗಳಿಂದ ಪರಿಹಾರಕ್ಕಾಗಿ ಹಲವು ಬಾರಿ ಬಿಡಿಎ ಕಚೇರಿಗೆ ಅಲೆದಾಟ ನಡೆಸಿದ್ದೇವೆ. ಅಧಿಕಾರಿಗಳು ಸಹ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಪ್ರತಿ ಬಾರಿ ಇಲ್ಲಿಂದ ಬಿಡಿಎ ಕಚೇರಿಗೆ (BDA Office) ಹೋಗಬೇಕಾದ್ರೆ ಓಲಾ/ಊಬರ್​​ಗೆ (Ola And Uber Charge) 800 ರೂಪಾಯಿ ನೀಡಬೇಕಿದೆ. ಆದ್ರೆ ನಮ್ಮ ಫೈಲ್ ಮಾತ್ರ ಒಂದು ಟೇಬಲ್​ನಿಂದ ಮತ್ತೊಂದು ಟೇಬಲ್​ಗೆ ಹೋಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.


1.5 ಲಕ್ಷಹಣ ಲಂಚ ನೀಡಿದ ದಂಪತಿ


ನಾವು 14 ಗುಂಟೆ ಜಮೀನು ನೀಡುವಾಗ ಅಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವ ಸುಸಜ್ಜಿತ ಮನೆ ಇತ್ತು. ಸಾರ್ವಜನಿಕರ ಒಳ್ಳೆಯದ್ದಕ್ಕಾಗಿ ನಾವು ಎಲ್ಲವನ್ನು ತ್ಯಜಿಸಿ ಈಗ ತೊಂದರೆಯಲ್ಲಿ ಸಿಲುಕಿದ್ದೇವೆ. ಜಮೀನು ನಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಸುಮಾರು ಒಂದೂವರೆ ಲಕ್ಷದಷ್ಟು ಹಣವನ್ನು ಲಂಚ ನೀಡಲಾಗಿದೆ ಎಂದು ಲಕ್ಷ್ಮಮ್ಮ ಆಕ್ರೋಶ ಹೊರ ಹಾಕಿದ್ದಾರೆ.


bda layouts, nadaprabhu kempegowda layout site price, kempegowda layout near me, kannada news, karnataka news, ಬಿಡಿಎ ಪರಿಹಾರ, ಬಿಡಿಎ ಲೇಔಟ್​​ಗಳು, ನಾಡಪ್ರಭು ಕೆಂಪೇಗೌಡ ಲೇಔಟ್​
ಸಾಂದರ್ಭಿಕ ಚಿತ್ರ


ಈಗ ನಮ್ಮಿಂದ  ಮತ್ತೆ ಹಣ ನೀಡಲು ಸಾಧ್ಯವಿಲ್ಲ. ಇದನ್ನು ಬಿಡಿಎ ಅಧಿಕಾರಿಗಳ ಗಮನಕ್ಕೂ ತಂದರೂ ಸ್ಪಂದಿಸುತ್ತಿಲ್ಲ ಎಂದು ಬೆಟ್ಟಯ್ಯ ಆರೋಪಿಸಿದ್ದಾರೆ.


ಇದನ್ನೂ ಓದಿ:  Chikkamagaluru: ಅಪಾಯಕ್ಕೆ ಆಹ್ವಾನ ನೀಡ್ತಿದೆ ನೆಮ್ಮಾರು ಗ್ರಾಮದ ತೂಗು ಸೇತುವೆ


ಅಧಿಕಾರಿಗಳಿಂದ ಮನವೊಲಿಸುವ ಯತ್ನ


ಇನ್ನು ಬೇಲಿ ಹಾಕಿರುವ ವಿಷಯ ತಿಳಿಯುತ್ತಲೇ ಲೇಔಟ್​ಗೆ ದೌಡಾಯಿಸಿದ ಬಿಡಿಎ ಇಂಜಿನಿಯರ್​ಗಳು (BDA Engineers) ವೃದ್ಧ ದಂಪತಿ ಮನವೊಲಿಸಲು ಮುಂದಾಗಿದ್ದಾರೆ. ಆದಷ್ಟು ಬೇಗ ಪರಿಹಾರ ನೀಡುವ ಭರವಸೆಯನ್ನು ಸಹ ನೀಡಿದ್ದಾರೆ.

Published by:Mahmadrafik K
First published: