ಬೆಂಗಳೂರು: ಬೆಂಗಳೂರಿನಲ್ಲಿ ಲಿಫ್ಟ್ಗೆ (Elevator) ಸಿಲುಕಿ ಉತ್ತರ ಪ್ರದೇಶ ಮೂಲದ ವಿಕಾಸ್ (26) ಎಂಬ ಯುವಕ ಸಾವನ್ನಪ್ಪಿದ್ದಾನೆ. ನಗರದ ಜೆ.ಸಿ. ರಸ್ತೆಯ ಭರತ್ ಸರ್ಕಲ್ ಬಳಿ ಬುಧವಾರ ಸಂಜೆ ಸುಮಾರು ಏಳು ಗಂಟೆಗೆ ಈ ಘಟನೆ ನಡೆದಿದೆ. ನೂರಾರು ಕನಸುಗಳ ಜೊತೆಯಲ್ಲಿ ಆರು ತಿಂಗಳ ಹಿಂದೆ ಉದ್ಯೋಗ (Job) ಅರಸಿ ಬೆಂಗಳೂರಿಗೆ ಬಂದಿದ್ದ ಮೃತ ವಿಕಾಸ್ ಸಂಜಯ್ ಆಟೋಮೊಬೈಲ್ನಲ್ಲಿ ಕೆಲಸ ಮಾಡಿಕೊಂಡಿದ್ದನು. ಸಂಜಯ್ ಆಟೋ ಮೊಬೈಲ್ಸ್ ನಲ್ಲಿ ಸ್ಟೋರ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು. 6 ತಿಂಗಳಿನಿಂದ ಕೆಲಸ ಮಾಡ್ತಿದ್ದು ತಿಂಗಳಿಗೆ 13 ಸಾವಿರ ಸಂಬಳ ಬರುತ್ತಿತ್ತು.
ವಿಕಾಸ್ ಸಾವಿನ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಲಾಗಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷದ ಮಗು ಸಾವು
ವೈದ್ಯರ ನಿರ್ಲಕ್ಷ್ಯಕ್ಕೆ (Doctor Negligence) ಮೂರು ವರ್ಷದ ಮಗು ಸಾವನ್ನಪ್ಪಿರುವ ಆರೋಪ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ (Baptist hospital, Hebbal) ವಿರುದ್ಧ ಕೇಳಿ ಬಂದಿದೆ. ಬುಧವಾರ ಮಧ್ಯಾಹ್ನ ಜ್ವರವಿದ್ದ ಕಾರಣ ಮಗುವನ್ನು ಪೋಷಕರು ಮೊದಲಿಗೆ ಯಲಹಂಕದ (Yelhanka) ಶುಶ್ರೂಷಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸುಮಾರು ಒಂದು ಗಂಟೆಗಳ ಕಾಲ ಶುಶ್ರೂಷಾ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ವೈದ್ಯರ ಸೂಚನೆ ಮೇರೆಗೆ ಪೋಷಕರು (Parents) ಮಗುವನ್ನು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ 9 ಗಂಟೆ ವೇಳೆಗೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.
ಪೋಷಕರ ಆಕ್ರಂದನ
ಜ್ವರ ಎಂದು ಕರೆದುಕೊಂಡ ಬಂದು ಮಗು ಹೇಗೆ ಸಾವನ್ನಪ್ಪಿತು ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Sudan Crisis: ಸುಡಾನ್‌ನಿಂದ ತಾಯ್ನೆಲಕ್ಕೆ ತಲುಪಿದ 360 ಭಾರತೀಯರು; ಮುಂದುವರಿದ ‘ಆಪರೇಷನ್ ಕಾವೇರಿ’ ಕಾರ್ಯ
ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿರುವ ಕುಟುಂಬಸ್ಥರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ