ಬೆಂಗಳೂರು: ಸೆಲ್ಫಿ ವಿಡಿಯೋ (Selfie Video) ಮಾಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ದಕ್ಷಿಣದ ಬನ್ನೇರುಘಟ್ಟ ರಸ್ತೆಯಲ್ಲಿ (Bannerghatta) ನಡೆದಿದೆ. ಶಿವರಾಜ್ (33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದ ಮೂರು ದಿನಗಳ ಬಳಿಕ ಮೃತ ವ್ಯಕ್ತಿಯ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಮೃತ ಶಿವರಾಜ್ ತನ್ನ ಸ್ನೇಹಿತರಿಗೆ ವ್ಯಕ್ತಿಯೊಬ್ಬರಿಂದ ಬಡ್ಡಿಗೆ ಸಾಲ ಕೊಡಿಸಿ, ಜಾಮೀನಿಗೆ ಸಹಿ ಹಾಕಿದ್ದರಂತೆ. ಆದರೆ ಸಾಲ ಕೊಟ್ಟ ವ್ಯಕ್ತಿಗಳು ಹಣ ವಾಪಸ್ ಕೇಳಿ ಧಮ್ಕಿ ಹಾಕಿದ್ದು, ಇದರಿಂದ ಮನನೊಂದು ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಘಟನೆ ಬಗ್ಗೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಲ ಕೊಟ್ಟವರ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಶಿವರಾಜ್ ಸ್ನೇಹಿತರಿಂದ 40 ಸಾವಿರ ರೂಪಾಯಿ ಹಣ ಸಾಲ ಪಡೆದುಕೊಂಡಿದ್ದರಂತೆ. ಸಾಲದ ಹಣ ವಾಪಸ್ ನೀಡದಿದ್ದಕ್ಕೆ ಶಿವರಾಜ್ಗೆ ಧಮ್ಕಿ ಹಾಕಿ ಕಿರುಕುಳ ನೀಡಿದ್ದರಂತೆ. ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್!
ಮೃತ ಶಿವರಾಜ್ ಸ್ನೇಹಿತರು ಜೂಜಾಟಕ್ಕೆ ರೇಣುಕಾರಾಧ್ಯ ಎಂಬಾತನಿಂದ ಹಣ ಸಾಲವನ್ನು ಪಡೆದಿದ್ದರಂತೆ. ಸಾಲ ಪಡೆದಿದ್ದ ಹಣದ ಜಾಮೀನಿಗೆ ಶಿವರಾಜ್ ಸಹಿ ಹಾಕಿದ್ದನಂತೆ. ಸ್ನೇಹಿತರು ಮೀಟರ್ ಬಡ್ಡಿ ಕಟ್ಟಿಲ್ಲವೆಂದು ಶಿವರಾಜ್ಗೆ ಮಾನಸಿಕ ಹಿಂಸೆ, ಬೆದರಿಕೆಗೆ ಹಾಕಿದ್ದರಂತೆ. ಅಲ್ಲದೆ ಮೀಟರ್ ಬಡ್ಡಿ ಕಟ್ಟಿಲ್ಲವೆಂದು ಬೈಕ್ ಕೂಡ ತೆಗೆದುಕೊಂಡು ಹೋಗಿದ್ದರಂತೆ. ಇದರಿಂದ ಬೇಸತ್ತು ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಧನು, ವೆಂಕಟೇಶ, ರೇಣುಕಾರಾಧ್ಯ ಎಂಬವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸೆಲ್ಫಿ ವಿಡಿಯೋದಲ್ಲಿ ಈ ಮೂವರು ವಿರುದ್ಧ ಆರೋಪ ಮಾಡಿದ್ದ ಶಿವರಾಜ್, ನನ್ನ ಸಾವಿಗೆ ಇವರೇ ಕಾರಣ ಎಂದು ಹೇಳಿಕೆ ನೀಡಿದ್ದ.
ವಿಷ ಸೇವಿಸಿ ರೈತ ಆತ್ಮಹತ್ಯೆ
ಬೆಳೆಯೆಲ್ಲಾ ಹಾಳಾಗಿ ಹೋಗಿದೆ ಎಂದು ಮನನೊಂದ ರೈತ (Farmer) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಬಾಬಾನಗರದ ಮನೋಹರ ದ್ರಾಕ್ಷಿ (Grapes) ಬೆಳಗೆ ಸಿಂಪಡಿಸೋಕೆ ಔಷಧ ತಂದಿದ್ದರು. ಗೊಂದಲಕ್ಕೊಳಗಾಗಿ ತಪ್ಪು ಔಷಧ ಸಿಂಪರಣೆ ಮಾಡಿದ್ರು. ಆದ್ದರಿಂದ ಬೆಳೆ ಬೆಳೆ ಒಣಗಿ ಹೋಗಿದೆ. ರೈತ ಮನೋಹರ ದ್ರಾಕ್ಷಿ ಬೆಳೆಗಾಗಿ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದರಂತೆ. ದ್ರಾಕ್ಷಿ ಫಸಲು ಒಣಗಿದ್ದಕ್ಕೆ ರೈತ ಅದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Crime News: ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಮಹಿಳೆಯ ಅಸ್ತಿಪಂಜರ ಪತ್ತೆ; ನೇಣು ಬೀಗಿದ ಸ್ಥಿತಿಯಲ್ಲಿ ಸಿಕ್ತು ಬುರುಡೆ!
ಸಿಲಿಕಾನ್ ಸಿಟಿಯ (Bengaluru) ಮಲ್ಲೇಶ್ವರಂ ಠಾಣಾ ವ್ಯಾಪ್ತಿಯ (Malleshwaram) ಮಲ್ಲೇಶ್ವರಂನ 13ನೇ ಕ್ರಾಸ್ನಲ್ಲಿ ಘಟನೆ ನಡೆದಿದ್ದು, ಮಿಡ್ ನೈಟ್ನಲ್ಲಿ ಕಿಡಿಗೇಡಿಯೋರ್ವ ಪುಂಡಾಟ ಮಾಡಿದ್ದಾನೆ. ಮಚ್ಚುಗಳಿಂದ ಮೂರು ಕಾರ್ (Car), ಒಂದು ಆಟೋ (Auto) ಕಿಟಕಿ ಗಾಜುಗಳ ಜಖಂ ಮಾಡಿದ್ದಾನೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು (Bengaluru Police) ತಲಾಶ್ ನಡೆಸುತ್ತಿದ್ದಾರೆ. ಬಿಜೆಪಿ ಕಚೇರಿ ಹಿಂಬದಿಯೇ ಮಚ್ಚುಗಳಿಂದ ಕಾರಿಗೆ ಡ್ಯಾಮೇಜ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ