ಪಟಾಕಿ ಸಿಡಿಸಿ ಓಡುವಾಗ ರೈಲಿಗೆ ಡಿಕ್ಕಿ; ತುಂಬು ಗರ್ಭಿಣಿ ಹೆಂಡತಿ ಕಣ್ಣೆದುರೇ ಪ್ರಾಣ ಬಿಟ್ಟ ಗಂಡ

ಮಂಜುನಾಥ್ ಅವರ ಪತ್ನಿ ತುಂಬು ಗರ್ಭಿಣಿ. ದೀಪಾವಳಿಯ ಸಂಭ್ರಮದ ಜೊತೆಗೆ ತಂದೆಯಾಗುವ ಖುಷಿಯಲ್ಲಿದ್ದ ಮಂಜುನಾಥ್ ತನ್ನ ಮನೆಯವರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. 8 ತಿಂಗಳ ಗರ್ಭಿಣಿ ಹೆಂಡತಿಯನ್ನು ದೂರದಲ್ಲಿ ನಿಲ್ಲಿಸಿ ಮನೆ ಮುಂದೆ ಪಟಾಕಿ ಹೊಡೆಯುತ್ತಿದ್ದಾಗ ದುರ್ಘಟನೆ ನಡೆದಿದೆ.

news18-kannada
Updated:October 30, 2019, 1:59 PM IST
ಪಟಾಕಿ ಸಿಡಿಸಿ ಓಡುವಾಗ ರೈಲಿಗೆ ಡಿಕ್ಕಿ; ತುಂಬು ಗರ್ಭಿಣಿ ಹೆಂಡತಿ ಕಣ್ಣೆದುರೇ ಪ್ರಾಣ ಬಿಟ್ಟ ಗಂಡ
ಸಾಂದರ್ಭಿಕ ಚಿತ್ರ
  • Share this:
ದೊಡ್ಡಬಳ್ಳಾಪುರ (ಅ. 30): ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪ್ರತಿವರ್ಷ ಸಾಕಷ್ಟು ಕಹಿ ಘಟನೆಗಳು ನಡೆಯುತ್ತಲೇ ಇರುತ್ತವೆ. ದೀಪಾವಳಿಗೆ ಪಟಾಕಿ ಹೊಡೆಯುವಾಗ ಮೈಕೈ ಸುಟ್ಟುಕೊಂಡು, ಪ್ರಾಣಕ್ಕೂ ಕುತ್ತು ತಂದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಆದರೆ, ದೊಡ್ಡಬಳ್ಳಾಪುರದಲ್ಲಿ ಮತ್ತೊಂದು ರೀತಿಯ ದುರಂತ ಸಂಭವಿಸಿದ್ದು, ದೀಪಾವಳಿ ಖುಷಿಯಲ್ಲಿ ಪಟಾಕಿ ಹಚ್ಚಿ ಓಡಿಹೋಗುವಾಗ ರೈಲು ತಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಎಂಬ 35 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡ ದುರ್ದೈವಿ. ಪಟಾಕಿ ಹೊತ್ತಿಸಿದ ನಂತರ ಅದು ಸಿಡಿಯುವ ಭಯದಲ್ಲಿರೈಲ್ವೆ ಹಳಿಯತ್ತ ಓಡಿಹೋಗುವಾಗ ರೈಲು ಹಾದುಹೋಗಿದೆ. ಇಲ್ಲಿನ ವಸತಿಪ್ರದೇಶದಲ್ಲಿ ಹಾದುಹೋಗುವ ರೈಲು ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ಬಿಜೆಪಿಯವರೇ ಮತಾಂಧರು; ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ಮಂಜುನಾಥ್ ಅವರ ಪತ್ನಿ ತುಂಬು ಗರ್ಭಿಣಿ. ದೀಪಾವಳಿಯ ಸಂಭ್ರಮದ ಜೊತೆಗೆ ತಂದೆಯಾಗುವ ಖುಷಿಯಲ್ಲಿದ್ದ ಮಂಜುನಾಥ್ ತನ್ನ ಮನೆಯವರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. 8 ತಿಂಗಳ ಗರ್ಭಿಣಿ ಹೆಂಡತಿಯನ್ನು ದೂರದಲ್ಲಿ ನಿಲ್ಲಿಸಿ ಮನೆ ಮುಂದೆ ಪಟಾಕಿ ಹೊಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ತುಂಬು ಗರ್ಭಿಣಿ ಹೆಂಡತಿಯ ಕಣ್ಣ ಮುಂದೆಯೇ ಮಂಜುನಾಥ್ ರೈಲಿನಡಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಕಾಚಿಗುಡ ಎಕ್ಸ್​ಪ್ರೆಸ್ ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಹಳಿಗೆ ಯಾವುದೇ ತಡೆಗೋಡೆಯಿಲ್ಲದ ಕಾರಣ ದುರಂತ ಸಂಭವಿಸಿದೆ. ಮನೆಯ ಎದುರಲ್ಲೇ ಮಂಜುನಾಥ್ ಶವವಾಗಿ ಬಿದ್ದಿದ್ದಕ್ಕೆ ಸಾರ್ವಜನಿಕರಿಂದ ರೈಲ್ವೆ ಮತ್ತು ಸ್ಥಳೀಯ ಸಂಸ್ಥೆಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published: October 30, 2019, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading