ಪ್ರಧಾನಿ ನರೇಂದ್ರ ಮೋದಿ ಸಹಿಯನ್ನೇ ನಕಲಿ ಮಾಡಿ ಕೆಲಸಗಿಟ್ಟಿಸಲು ಹೋದ ಭೂಪ

ಹೇಗಾದರೂ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಯೋಚಿಸಿದ ಈತ ಪ್ರಧಾನಿ ಹೆಸರಲ್ಲೇ ಶಿಫಾರಸ್ಸು ಪತ್ರ ನಕಲು ಮಾಡಲು ಮುಂದಾಗಿದ್ದಾನೆ

Seema.R | news18
Updated:December 28, 2018, 5:33 PM IST
ಪ್ರಧಾನಿ ನರೇಂದ್ರ ಮೋದಿ ಸಹಿಯನ್ನೇ ನಕಲಿ ಮಾಡಿ ಕೆಲಸಗಿಟ್ಟಿಸಲು ಹೋದ ಭೂಪ
ಪ್ರಧಾನಿ ಸಹಿ ನಕಲಿ ಮಾಡಿದ ಆರೋಪಿ
Seema.R | news18
Updated: December 28, 2018, 5:33 PM IST
ಗಂಗಾಧರ್​, 

ಬೆಂಗಳೂರು (ಡಿ.28): ಹೈ ಕೋರ್ಟ್​ನಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಬೇಕು ಎಂದು ಅರ್ಜಿ ಹಾಕಿದ ಈ ಯುವಕನಿಗೆ ಶಿಫಾರಸ್ಸು ಮಾಡಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ಹೌದು, ಒಂದು ಕ್ಷಣಕ್ಕೆ ನಂಬಲು ಅಸಾಧ್ಯವಾದರೂ ಇತನಿಗೆ ಉದ್ಯೋಗ ನೀಡಲು ನರೇಂದ್ರ ಮೋದಿ ತಮ್ಮ ಪ್ರಭಾವ ಬೀರಿ ಹೈ ಕೋರ್ಟ್​ ರಿಜಿಸ್ಟರ್​ಗೆ ಪತ್ರ ಬರೆದಿದ್ದಾರೆ. ಈ ಪತ್ರ ಕಂಡ ರಿಜಿಸ್ಟರ್​ ಒಂದು ಕ್ಷಣ ಅವಕ್ಕಾಗಿದ್ದು, ಈ ಕುರಿತು ಪರೀಶಿಲನೆಗೆ ಮುಂದಾದರು. ಆಗ ತಿಳಿಯಿತು ಅಸಲಿ ಕಥೆ.

ಬೆಳಗಾವಿಯ ಸಂಜಯ್​ ಎಂಬ ಯುವಕ ಇತ್ತೀಚೆಗೆ ಹೈ ಕೋರ್ಟ್​ನಲ್ಲಿ ಕರೆ ಮಾಡಿದ್ದ  ಟೈಪಿಸ್ಟ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಹೇಗಾದರೂ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಯೋಚಿಸಿದ ಈತ ಪ್ರಧಾನಿ ಹೆಸರಲ್ಲೇ ಶಿಫಾರಸ್ಸು ಪತ್ರ ಬರೆದಿದ್ದಾನೆ. ಸೈಬರ್ ಸೆಂಟರ್‌ ನಲ್ಲಿ ದಾಖಲೆ ಸೃಷ್ಟಿಸಿ ಪ್ರಧಾನಿ ಸಹಿ ನಕಲು ಮಾಡಿ ಪೋಸ್ಟ್​ ಮಾಡಿದ್ದಾನೆ.

ಇದನ್ನು ಓದಿ : ನೋಡಲು ಚೆನ್ನಾಗಿಲ್ಲ, ವಯಸ್ಸಾಗಿದೆ ಎಂದು ಹೆಂಡತಿಗೆ ವಾಟ್ಸಾಪ್​ ಮೂಲಕ ತಲಾಖ್​ ನೀಡಿದ ವೈದ್ಯ

ಈ ಪತ್ರ ಪಡೆದ ರಿಜಿಸ್ಟರ್​ ತಕ್ಷಣಕ್ಕೆ ವಿಧಾನಸೌದಕ್ಕೆ ದೂರು ನೀಡಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿದಾಗ ಇದು ನಕಲಿ ಸಹಿ ಎಂದು ತಿಳಿದು ಬಂದಿದೆ.  ತಕ್ಷಣಕ್ಕೆ ಬೆಳಗಾವಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
First published:December 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ