Belagavi: ಒಂದು ಫೋಟೋ, 19 ಲಕ್ಷ; ಸೋಶಿಯಲ್ ಮೀಡಿಯಾ ಬಳಸೋ ಯುವತಿಯರೇ ಎಚ್ಚರ ಇಂಥಹವರು ಇರ್ತಾರೆ

ಹಣದ ಅವಶ್ಯಕತೆ ಇದೆ ಅಂತಾ ಹತ್ತು, ಇಪ್ಪತ್ತು, ಐವತ್ತು ಸಾವಿರವರೆಗೂ ಹಣ ಹಾಕಿಸಿಕೊಂಡು ನಂಬರ್ ಬ್ಲಾಕ್ ಮಾಡುತ್ತಿದ್ದ. ಹೀಗೆ ಯುವತಿ ಪೋಟೋ ಹಾಕಿ ಯುವತಿ ಹೆಸರಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಪಾಲೋವರ್ಸ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಳಗಾವಿ: ಸಾಮಾಜಿಕ ಜಾಲತಾಣದಿಂದ (Social Media) ರಾತ್ರೋರಾತ್ರಿ ಫೇಮಸ್ ಆಗಬೇಕು. ಫೇಸ್ ಬುಕ್, ಇನ್ಸ್ಟಾ ಗ್ರಾಮ್ ಗಳಲ್ಲಿ (Facebook And Instagram) ಫೋಟೋ ಹಾಕಿ ಅತೀ ಹೆಚ್ಚು ಲೈಕ್ ಕಮೆಂಟ್ ಬರುತ್ತದೆ ಎಂದು ಯುವತಿಯರು ತಮ್ಮ ಫೋಟೋ ಹಾಕುವುದು ಸುರಕ್ಷಿತವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ (Photo) ಅಪ್ಲೋಡ್ ಮಾಡುವ ಯುವತಿಯರೇ ಹುಷಾರ್. ಹೆಚ್ಚು ಲೈಕ್ ಬರುತ್ತವೆ, ಕಮೆಂಟ್ (Like And Comment) ಬರುತ್ತವೆ ಎಂದು ಎಂದು ತಮ್ಮ ಎಲ್ಲ ಫೋಟೋಗಳನ್ನ ಅಪ್ಲೋಡ್ ಮಾಡಿದರೆ ನಿಮ್ಮ ಪೋಟೊಗಳನ್ನೇ ಬಳಸಿಕೊಂಡು ಹಣ ಮಾಡುವ ಖದೀಮನ ಖತರ್ನಾಕ್ ಸ್ಟೋರಿಗೆ ಬೆಳಗಾವಿ ಸಿಇಎನ್ ಪೊಲೀಸರು ಫುಲ್ ಸ್ಟಾಪ್ ಇಟ್ಟಿದ್ದಾರೆ‌.

ಒಂದೇ ಯುವತಿಯ ಪೋಟೋ ಬಳಸಿಕೊಂಡು 19 ಲಕ್ಷ ಎಗರಿಸಿದ್ದಾನೆ. ಈ ಖತರನಾಕ್ ಯುವಕನ ಹುಚ್ಚಾಟಕ್ಕೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಬಳಸುವ ಯುವತಿಯರೇ ಬೆಚ್ಚಿ ಬಿದ್ದಿದ್ದಾರೆ‌.

ಫೇಕ್ ಖಾತೆ ತೆರೆದಿದ್ದ ಮಹಾಂತೇಶ್

ಬೆಳಗಾವಿಯ ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಮಾಡಿ ಹಣ ಪೀಕುತ್ತಿದ್ದ ಯುವಕನ ಬಂಧಿಸಿದ್ದಾರೆ. ಎಂ‌.ಸ್ನೇಹಾ.ಎಂ ಹೆಸರಿನಲ್ಲಿ ಫೇಕ್ ಐಡಿ ಮಾಡಿದ್ದ ಮಹಾಂತೇಶ್ ಮುಡಸೆ ಬಂಧಿತ ಆರೋಪಿ.

Man creates Fake social media account and cheats youths csb mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Praveen Nettaru: ರಾಜೀನಾಮೆ ನೀಡುವ ಬಿಜೆಪಿ ಪದಾಧಿಕಾರಿಗಳಿಗೆ ಅಭಿನಂದನೆ; ಬಿಜೆಪಿ ವಿರುದ್ಧ ಮುತಾಲಿಕ್ ಕಿಡಿ

ಈತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ನಿವಾಸಿಯಾಗಿದ್ದಾನೆ. ಅಲ್ಲದೇ ಮಹಾಂತೇಶ್ ಮೂಡಸೆ ಪಿಎಸ್‌ಐ ದೈಹಿಕ ಪರೀಕ್ಷೆ ಕೂಡ ಪಾಸ್ ಆಗಿದ್ದನು.‌ ಧಾರವಾಡದಲ್ಲಿದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಹಾಂತೇಶ್ ಯುವತಿ ಹೆಸರಲ್ಲಿ ಹಣ ವಸೂಲಿ ಮಾಡಿ ಗೋವಾಕ್ಕೆ ತೆರಳಿ ಎಂಜಾಯ್ ಕೂಡ ಮಾಡುತ್ತಿದ್ದವನನ್ನು ಸಿಇಎನ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

19 ಲಕ್ಷ ವಸೂಲಿ ಮಾಡಿದ್ದ

ಯುವತಿಯೊಬ್ಬರ ಪೋಟೋಗಳನ್ನ ಫೇಸ್ ಬುಕ್‌ನಲ್ಲಿ ಡೌನ್‌ಲೋಡ್ ಮಾಡಿದ್ದ ಮಹಾಂತೇಶ್ ಬೆಳಗಾವಿ ನಗರದ ಯುವತಿ ಪೋಟೊ ಬಳಸಿ ಫೇಕ್ ಅಕೌಂಟ್ ಮಾಡಿದ್ದ. ಆ ಯುವತಿ ಪೋಟೊಕ್ಕೆ ಸ್ನೇಹಾ ಹೆಸರು ಹಾಕಿ ಅಕೌಂಟ್ ಮಾಡಿದ್ದ ಕಿರಾತಕ  ಕಳೆದ ಮೂರು ವರ್ಷದ ಹಿಂದೆ ಫೇಕ್ ಐಡಿ ಮಾಡಿ 19 ಲಕ್ಷ ವಸೂಲಿ ಮಾಡಿದ್ದಾನೆ.

ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಯುವಕರೊಂದಿಗೆ ಸ್ನೇಹ ಮಾಡಿಕೊಂಡು ಯುವಕರಿಗೆ ತಾನೂ ಸ್ನೇಹಾ ಅಂತಾ ನಂಬಿಸಿ ಅವರ ನಂಬರ್ ಪಡೆಯುತ್ತಿದ್ದ ಮಹಾಂತೇಶ್. ಹೀಗೆ ನಂಬರ್ ಪಡೆದು ನಂತರ ಪೋನ್ ನಲ್ಲಿ ಮಾತನಾಡದೇ ಬರೀ ಚಾಟ್ ಮಾಡುತ್ತಿದ್ದ. ಈ ವೇಳೆ ಕೆಲವು ಪೋಟೋಗಳನ್ನ ವಾಟ್ಸಪ್ ಮಾಡುತಿದ್ದನು. ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಹಾಕಿದ್ದಾನೆ.

Man creates Fake social media account and cheats youths csb mrq
ಸಾಂದರ್ಭಿಕ ಚಿತ್ರ


ತನ್ನ ಫೋಟೋ ದುರ್ಬಳಕೆ ನೋಡಿ ಯುವತಿ ಶಾಕ್

ಹಣದ ಅವಶ್ಯಕತೆ ಇದೆ ಅಂತಾ ಹತ್ತು, ಇಪ್ಪತ್ತು, ಐವತ್ತು ಸಾವಿರವರೆಗೂ ಹಣ ಹಾಕಿಸಿಕೊಂಡು ನಂಬರ್ ಬ್ಲಾಕ್ ಮಾಡುತ್ತಿದ್ದ. ಹೀಗೆ ಯುವತಿ ಪೋಟೋ ಹಾಕಿ ಯುವತಿ ಹೆಸರಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಪಾಲೋವರ್ಸ್. ತನ್ನ ಪೋಟೋ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದು ಶಾಕ್ ಆಗಿದ್ದ ಯುವತಿ.

ದುಬೈನಲ್ಲಿ ಸೆಟ್ಲ್ ಆಗಿದ್ಯಾಕೆ ತನ್ನ ಪೋಟೋ ಮಿಸ್‌ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿ ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದಾರೆ‌.

ಇದನ್ನೂಓದಿ:  BJP Program: ಜನೋತ್ಸವಕ್ಕೆ ಮಾಡಿ ಉಳಿದ ಊಟ ಅನಾಥಾಶ್ರಮಕ್ಕೆ, ಇದು ನಿಯಮ ಬಾಹಿರ; ಆ ಮಕ್ಕಳಿಗೆ ಮಿಕ್ಕ ಆಹಾರ ಕೊಡ್ಬೇಡಿ!

ದೂರು ದಾಖಲಿಸಿದ ಬಳಿಕ ಆರೋಪಿಯ ಬಂಧನ

ಇಷ್ಟಾದರೂ ಆತ ಕೇಳದ ಹಿನ್ನೆಲೆ ಜು. 4ರಂದು ಬೆಳಗಾವಿಗೆ ಆಗಮಿಸಿ ದೂರು ಸಲ್ಲಿಸಿದ್ದರು. ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯ ದೂರಿನ ಮೇರೆಗೆ ಗೋವಾದಲ್ಲಿ ಮಸ್ತ್ ಮಜಾ ಮಾಡುತ್ತಿದ್ದವನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ನಕಲಿ ಖಾತೆಯಿಂದ ಯುವತಿಯ ಕುಟುಂಬದಲ್ಲಿ ಜಗಳವಾಗಿತ್ತು. ಬೇಸತ್ತು ಯುವತಿ‌ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.
Published by:Mahmadrafik K
First published: