ಬೆಂಗಳೂರು: ಇಂದಿನ ಅವಸರದ ಬದುಕು, ವೇಗದ ಜೀವನ ಜನರನ್ನು ಹೆಚ್ಚಾಗಿ ಅಪಾಯಕ್ಕೆ ತುತ್ತಾಗುವಂತೆ ಮಾಡುತ್ತಿದೆ. ಆದರೆ ಕೆಲವೊಮ್ಮೆ ಕೆಲವರ ಮುಂಜಾಗ್ರತಾ ಕ್ರಮಗಳು ಅವರನ್ನು ಅಪಾಯದಿಂದ ತಪ್ಪಿಸುತ್ತದೆ. ಬೈಕ್ (Bike) ಸವಾರರು ಅಪಾಯಕ್ಕೆ ಒಳಗಾಗಿ ಪ್ರಾಣ ಕಳೆದು ಕೊಳ್ಳುವುದನ್ನು ಪ್ರತಿ ದಿನ ಕೇಳುತ್ತಲೇ ಇರುತ್ತೇವೆ. ಇದಕ್ಕೆ ಪ್ರಮುಖ ಕಾರಣ ಅವರು ಹೆಲ್ಮೆಟ್ (Helmet) ಧರಿಸದೆ ಇರುವುದು. ಇದೀಗ ಒಂದು ವೀಡಿಯೋ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದು ಉತ್ತಮ ಗುಣಮಟ್ಟದ (Good Quality) ಹೆಲ್ಮೆಟ್ ಧರಿಸುವಿಕೆಯ ಮುನ್ನೆಚ್ಚರಿಕೆಯನ್ನು (Precautions) ತಿಳಿಸುತ್ತಿದೆ. ಬೆಂಗಳೂರು ಪೋಲಿಸರು (Bangalore Police) ಈ ವಿಡಿಯೋವನ್ನು ಹೆಲ್ಮೆಟ್ ಬಳಕೆಯ ಉಪಯೋಗದ ಸಂದೇಶ ನೀಡಲು ಬಳಸಿಕೊಂಡಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳು
ಪ್ರತಿನಿತ್ಯ ಒಂದಲ್ಲ ಒಂದು ಕಡೆ ರಸ್ತೆ ಅಪಘಾತಗಳು ನಡೆಯುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಜನರ ನಿರ್ಲಕ್ಷ್ಯವಾಗಿದೆ. ಸೀಟ್ ಬೆಲ್ಟ್ ಹಾಕದೆ ಇರುವುದು. ಹೆಲ್ಮೆಟ್ ಧರಿಸದೆ ಇರುವುದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದು ಹೀಗೆ ಅಪಘಾತಗಳ ತಡೆಯಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ ಇರುವುದಾಗಿದೆ.
ಇದನ್ನೂ ಓದಿ: Bengaluru Accident: ಬೈಕ್ನಲ್ಲಿ ಚಲಿಸುವಾಗ ಮರದ ದಿಮ್ಮಿ ಬಿದ್ದು ನವವಿವಾಹಿತ ಸಾವು; ಗರ್ಭಿಣಿ ಪತ್ನಿಯ ಕಣ್ಣೀರು
ಬಸ್ಸಿನಡಿ ಬಿದ್ದರೂ ಬದುಕುಳಿದ ಯುವಕ
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು. ಈ ವೀಡಿಯೋದಲ್ಲಿ ಯುವಕನೊಬ್ಬ ಬಸ್ಸಿನಡಿಗೆ ಬಿದ್ದರೂ ಅವನು ಉತ್ತಮವಾದ ಹೆಲ್ಮೆಟ್ ಧರಿಸಿರುವದರಿಂದ ಅಪಾಯದಿಂದ ಪಾರಾಗಿರುವ ದೃಶ್ಯವನ್ನು ಗಮನಿಸಬಹುದಾಗಿದೆ.
ವೀಡಿಯೋವನ್ನು ಟಿಟ್ಟರ್ ನಲ್ಲಿ ಹಂಚಿಕೊಂಡ ಬೆಂಗಳೂರು ಪೋಲಿಸ್
ವೈರಲ್ ಆಗುತ್ತಿದ್ದ ಈ ವೀಡಿಯೋವನ್ನು ಬೆಂಗಳೂರಿನ ಟ್ರಾಫಿಕ್ ಪೋಲಿಸ್ ಕಮಿಷನರ್ ಡಾ ಬಿ ಆರ್ ರವಿಕಾಂತೆ ಗೌಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉತ್ತಮ ಗುಣಮಟ್ಟದ ಐ ಎಸ್ ಐ ಮಾರ್ಕ್ ಹೆಲ್ಮೆಟ್" ಜೀವರಕ್ಷಕ"
Good quality ISI MARK helmet saves life. pic.twitter.com/IUMyH7wE8u
— Dr.B.R. Ravikanthe Gowda IPS (@jointcptraffic) July 20, 2022
ವೀಡಿಯೋದಲ್ಲಿ ಗಮನಿಸಿರುವಂತೆ ಯುವಕ ಅತೀ ವೇಗವಾಗಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಾಗ ಅವನ ತಲೆ ಹಿಂದಿನ ಟೈರ್ನಡಿಗೆ ಬೀಳುತ್ತದೆ. ಆದರೆ ಅವನು ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿರುವುದರಿಂದ ಅವನ ಜೀವ ಉಳಿದಿದೆ. ಇದು ಎಲ್ಲಿ ನಡೆದ ಘಟನೆ ಎಂದೂ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.
ಮುಂಜಾಗ್ರತಾ ಕ್ರಮವಾಗಿ ವೀಡಿಯೋ ವೈರಲ್
ಈ ವೀಡಿಯೋ ಉತ್ತಮ ಗುಣಮಟ್ಟದ ಹೆಲ್ಮೆಟ್ ಏಕೆ ಧರಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುಖ್ಯವಾಗಿ ಬೆಂಗಳೂರು ಟ್ರಾಪಿಕ್ ಪೋಲಿಸರು ಈ ವೀಡಿಯೋವನ್ನು ಹೆಲ್ಮೆಟ್ ಧರಿಸುವ ಕುರಿತಾಗಿ ವಾಹನ ಚಾಲಕರಿಗೆ ಸಂದೇಶ ರವಾನಿಸಲು ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: Heart Warming Story: ಗಂಡ ಬಸ್ ಡ್ರೈವರ್ ಹೆಂಡತಿ ಕಂಡಕ್ಟರ್! 20 ವರ್ಷದ ಲವ್ಸ್ಟೋರಿ, ಲವ್ಲೀ ಆಗಿದೆ ಲೈಫ್ ಜರ್ನಿ
ಇತ್ತೀಚಿನ ದಿನಗಳಲ್ಲಿ ಬೈಕ್ ಓಡಿಸುವುದು ಒಂದು ರೀತಿಯ ಕ್ರೇಜ್ ಆಗಿದೆ. ಆದರೆ ಜನ ತಲೆ ಕೂದಲು ಉದುರುತ್ತೆ ಅಥವಾ ಮತ್ಯಾವುದೋ ಕಾರಣಗಳಿಂದ ಹೆಲ್ಮೆಟ್ ಧರಿಸಲು ತೋರುತ್ತಾರೆ. ಇದರಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ವಾಹನ ಓಡಿಸುವಾಗ ಮುಖ್ಯವಾಗಿ ಹೆಲ್ಮೆಟ್ ಧರಿಸಬೇಕು ಒಂದು ವೇಳೇ ಅಪಘಾತವಾದರೂ ಆ ಸಂದರ್ಭದಲ್ಲಿ ಆಗುವ ಅಪಾಯದ ಮಟ್ಟವನ್ನು ತಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ