ಯಾದಗಿರಿ: ಅವರಿಬ್ಬರೂ ಸ್ನೇಹಿತರು (Friends) ಪರಸ್ಪರ ಕಷ್ಟಕ್ಕೆ ಒಬ್ಬರಿಗೊಬ್ಬರು ಸಾಥಿಯಾಗುತ್ತಿದ್ದರು. ಆದರೆ ಅತಿಯಾದ ನಂಬಿಕೆಗೆ ಈಗ ಸ್ನೇಹಿತ ದ್ರೋಹ (Cheating) ಬಗೆದಿದ್ದು ಗೆಳೆಯ ಪ್ರಾಣ ಕಳೆದುಕೊಂಡಿದ್ದಾನೆ. ಯಾದಗಿರಿ ತಾಲೂಕಿನ ಹೆಡಗಿಮುದ್ರಾ (Hedagimudra Village, Yadagiri) ಗ್ರಾಮದಲ್ಲಿ ಸ್ನೇಹಿತನ ಮೋಸದಾಟಕ್ಕೆ ಈಗ ಸ್ನೇಹಿತ ರಾಮ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಧ್ರಪ್ರದೇಶದ (Andhra Pradesh) ಮೂಲದ ರೈತ (Farmer) ರಾಮ ಮೋಹನ್ ಹೆಡಗಿಮುದ್ರಾ ಗ್ರಾಮದಲ್ಲಿ 22 ಎಕರೆ ಕೃಷಿ ಭೂಮಿ ಲೀಸ್ ಗೆ ಪಡೆದು ಕೃಷಿ (Agriculture) ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದನು. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಭತ್ತ (Paddy) ಬೆಳೆ ಬೆಳೆದಿದ್ದನು. ಈ ಬಾರಿ ಉತ್ತಮ ಇಳುವರಿ ಬಂದಿತ್ತು. ಭತ್ತ ಮಾರಾಟ ಮಾಡಿದ ಹಣದಲ್ಲಿ ನೆಮ್ಮದಿಯ ಜೀವನ ನಡೆಸಬೇಕೆಂದಿದನು. ಆದರೆ ಭತ್ತ ಮಾರಾಟ ಮಾಡಿದ ಹಣದಲ್ಲಿಯೇ ಗೆಳೆಯ ಮೋಸದಾಟ ಮಾಡಿ ಪಂಗನಾಮ ಹಾಕಿದ್ದಾನೆ.
ರೈತ ರಾಮ ಮೋಹನ್ ಹಾಗೂ ಸ್ನೇಹಿತ ಜಿ.ರಮೇಶ್ ನಡುವೆ ಹಣಕಾಸಿನ ವ್ಯವಹಾರ ಇತ್ತು. ಒಬ್ಬರಿಗೊಬ್ಬರು ಕಷ್ಟ ಕಾರ್ಪಣೆಗಳಿಗೆ ನೆರವು ಆಗುತ್ತಿದ್ದರು. ಆದರೆ ಸ್ನೇಹಿತನ ಮೇಲೆ ಅತಿಯಾದ ನಂಬಿಕೆ ಹೊಂದಿ ರಮೇಶ್ ಮೇಲೆ ನಂಬಿ ರಾಮ ಮೋಹನ್ ಕೆಟ್ಟಿದ್ದಾನೆ.
ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ!
ಡೆತ್ ನೋಟ್ ಬರೆದಿಟ್ಟು ರೈತ ರಾಮ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಡಗಿಮುದ್ರಾ ಗ್ರಾಮದಲ್ಲಿ ಲೀಸ್ ಗೆ ಪಡೆದ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜಿ.ರಮೇಶ್ ಹಣ ನೀಡದೇ ಮೋಸ ಮಾಡಿದ್ದು, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆಂದು ಡೆತ್ ನೋಟ್ ಬರೆಯಲಾಗಿದೆ. ಈ ಪತ್ರವನ್ನು ಸಂಬಂಧಿಕರಿಗೆ ಮೊಬೈಲ್ ನಲ್ಲಿ ಡೆತ್ ನೋಟ್ ಕಳುಹಿಸಿದ್ದಾನೆ. ಈ ವೇಳೆ ಹುಡುಕುವಾಗ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!
ಭತ್ತದ ಹಣ ನೀಡದೇ ಮೋಸ!
ರೈತ ರಾಮ ಮೋಹನ್ ಹೊಲದಲ್ಲಿ ಬೆಳೆದಿದ್ದ ಭತ್ತ ಸ್ನೇಹಿತ ಜಿ.ರಮೇಶ್ ಮೂಲಕ ಲಾಲ್ ಸೇಟ್ ಗೆ ಮಾರಾಟ ಮಾಡಲಾಗಿತ್ತು. ಆದರೆ ಲಾಲ್ ಸೇಟ್ 9 ಲಕ್ಷ ರೂ ಹಣವನ್ನು ಜಿ.ರಮೇಶಗೆ ಪಾವತಿ ಮಾಡಿದನು. ಆದರೆ ರಮೇಶ್ ಸ್ನೇಹಿತನಿಗೆ ಹಣ ನೀಡದೇ ಮೋಸ ಮಾಡಿದನು.
ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ರಮೇಶ್ ಹಣ ನೀಡದೇ ಸ್ನೇಹಿತ ರೈತ ರಾಮ ಮೋಹನ್ ಗೆ ಮೋಸ ಮಾಡಿದನು. ಸ್ನೇಹಿತನ ಮೋಸದಾಟಕ್ಕೆ ರೈತ ರಾಮ್ ಮೋಹನ್ ಮನನೊಂದಿದನು.
ಕುಟುಂಬಸ್ಥರಿಗೂ ವಿಷಯ ಹೇಳದ ರಾಮಮೋಹನ್
ಈ ಬಗ್ಗೆ ಕುಟುಂಬಸ್ಥರ ಜೊತೆ ರಾಮ ಮೋಹನ್ ಯಾವುದೇ ನೋವು ಹೇಳಿಕೊಂಡಿರಲಿಲ್ಲ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶ್ 4.5 ಲಕ್ಷ ರೂ ನೀಡದೆ ಮೋಸ ಮಾಡಿದ್ದಾನೆ.
ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಹಣ ನೀಡುವ ವಿಚಾರ ಕುಟುಂಬದ ಸದಸ್ಯರಿಗೆ ತಿಳಿಸಿದ್ರೆ ನ್ಯಾಯ ಪಂಚಾಯತ ಮೂಲಕವಾದರು ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಎಕಾಏಕಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದಕ್ಕೆ ಮೃತ ರೈತ ರಾಮ್ ಮೋಹನ್ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಇದನ್ನೂ ಓದಿ: Chitradurga: ನಕಲಿ ಚಿನ್ನ ಕೊಟ್ಟು ಪರಾರಿಯಾಗಲು ಯತ್ನಿಸಿದ್ದ ವಂಚಕರು ಪೊಲೀಸರ ಖೆಡ್ಡಾಗೆ ಬಿದ್ದಿದ್ದೇಗೆ?
ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.
ಮಗನಿಂದ ತಾಯಿಯ ಮೇಲೆ ಅತ್ಯಾಚಾರ
ಮಗನೇ ಹೆತ್ತ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ನಸುಕಿನಲ್ಲಿ ಘಟನೆ ನಡೆದಿದ್ದು, ನಂತರ ಬೆಳಕಿಗೆ ಬಂದಿದೆ. 36 ವರ್ಷದ ಮಗ ಗುರುವಾರ ನಸುಕಿನ ಜಾವ ತಾಯಿ ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ. ಕಿರುಚಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಬಿಡದೇ ತಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ