ಗದಗ(ಜು.21): ಕ್ಷುಲ್ಲಕ ಕಾರಣವನ್ನ ಮನಸ್ಸಿಗೆ ಹಚ್ಚಿಕೊಂಡು ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ (Thungabhadra River) ವ್ಯಕ್ತಿಯೊಬ್ಬ ಹಾರಿರುವ ಘಟನೆ ನಡೆದಿದೆ. ಹೌದುಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಮೇಲೆ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡರಗಿ ಪಟ್ಟಣದ ಗೊಂದಳಿ ಓಣಿಯ ವಿಶ್ವನಾಥ್ ಗಣಾಚಾರಿ (26) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೂ ಮುಂಚೆ ಸೆಲ್ಫಿ ವಿಡಿಯೋ ಮಾಡಿರೋ ವಿಶ್ವ ಆತ್ಮಹತ್ಯೆಗೆ ಕಾರಣವನ್ನ ಸ್ಪಷ್ಟವಾಗಿ ತಿಳಿಸಿಲ್ಲ.
1 ನಿಮಿಷ 55 ಸೆಕೆಂಡ್ ನ ಸೆಲ್ಫಿ ವಿಡಿಯೋದಲ್ಲಿ ನೀವು ಅನ್ಯಾಯ ಮಾಡಿದ್ದೀರಿ. ನೀವು ಮಾಡಿದ ದ್ರೋಹ ಮರೆಯಲ್ಲ ಅಂತಾ ರೆಕಾರ್ಡ್ ಮಾಡಿದ್ದಾರೆ. ನನಗೆ ಈಜು ಬರುತ್ತೆ. ಈಜುತ್ತೇನೆ. ಇಲ್ಲ ನಕ್ಷತ್ರ ಮುಟ್ಟುತ್ತೇನೆ ಅಂತಾ ರೆಕಾರ್ಡ್ ಮಾಡಿಟ್ಟು ನದಿಗೆ ಹಾರಿದ್ದಾನೆ. ನದಿಗೆ ಜಿಗಿದಿದ್ದ ವಿಶ್ವನನ್ನ ಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಶವದ ಶೋಧ ನಡೆಸಿದ್ರು. ಕತ್ತಲಾದ ಹಿನ್ನೆಲೆ ಶೋಧಕಾರ್ಯ ಸ್ಥಗಿತವಾಗಿದ್ದು ಬೆಳಗ್ಗೆ ಮತ್ತೆ ಶೋಧ ನಡೆಯಲಿದೆ.
ಕ್ರಿಕೆಟ್ ಟೂರ್ನಿ ಆಯೋಜನೆ
ಗೊಂಧಳಿ ಸಮಾಜದಿಂದ ರಾಜ್ಯಾದ್ಯಂತ ಕ್ರಿಕೆಟ್ ಟೂರ್ನಿಗಳನ್ನ ಆಯೋಜನೆ ಮಾಡ್ಲಾಗುತ್ತೆ. ವಿಶ್ವನಾಥ್ ಕ್ರಿಕೆಟ್ ಆಟಗಾರ ಜೊತೆಗೆ ಗೊಂಧಳಿ ಸಮಾಜದ ಯುವಕ. ಎರಡು ತಿಂಗಳ ಹಿಂದೆ ಹಾವೇರಿಯಲ್ಲಿ ಗೊಂಧಳಿ ಸಮಾಜದ ವತಿಯಿಂದ ಕ್ರಿಕೆಟ್ ಆಯೋಜನೆ ಮಾಡಲಾಗಿತ್ತು.
ತೀವ್ರ ಕಿರಿಕಿರಿಯಾದ ವಿಚಾರ
ಕ್ರಿಕೆಟ್ ಟೂರ್ನಿಯನ್ನ ಶಿವಮೊಗ್ಗ ಟೀಮ್ ಗೆದ್ದಿತ್ತು, ಗೆದ್ದ ಟೀಮ್ ನಲ್ಲಿ ಬೇರೆ ಸಮಾಜದ ವ್ಯಕ್ತಿ ಆಟವಾಡಿದ್ದ ಅನ್ನೋ ಗುಮಾನಿ ವಿಶ್ವನಿಗೆ ಇತ್ತು. ಈ ವಿಷಯವನ್ನ ವಿಶ್ವನಾಥ್ ಸೋತ ಟೀಮ್ ನ ಜೊತೆಗೆ ಚರ್ಚಿಸಿದ್ದ. ಈ ವಿಷಯ ಸಮಾಜದ ವಾರ್ಸಾಪ್ ಗ್ರೂಪ್ ನಲ್ಲಿ ಭಾರೀ ಚರ್ಚೆಯಾಗಿತ್ತಂತೆ. ಎಲ್ಲೆಡೆ ಚರ್ಚೆಯಾಗ್ತಿದ್ದ ವಿಷಯ ವಿಶ್ವನಾಥನಿಗೆ ತೀವ್ರ ಕಿರಿಕಿರಿಯಾಗಿತ್ತು.
ವಿಶ್ವನಾಥ್ ನನ್ನ ಕ್ರಿಕೆಟ್ ಟೀಮ್ ನಿಂದ ಹೊರಗಿಡುವ ನಿರ್ಧಾರ
ಸಮಾಜದ ಟೀಮ್ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಕ್ಕೆ ವಿಶ್ವನಾಥ್ ನನ್ನ ಕ್ರಿಕೆಟ್ ಟೀಮ್ ನಿಂದ ಹೊರಗಿಡುವ ನಿರ್ಧಾರವನ್ನ ತಂಡದ ನಾಯಕ ನಾಗರಾಜ್ ಬೀಸೆ ಮಾಡಿದ್ರು. ಐದು ಮ್ಯಾಚ್ ಹೊರಗಿರುವಂತೆ ಹೇಳಲಾಗಿತ್ತಂತೆ.. ಇದ್ರಿಂದ ವಿಶ್ವ ತುಂಬಾ ನೊಂದು ಹೋಗಿದ್ದ. ಮುಂದಿನ ತಿಂಗಳು ವಿಜಯಪುರದಲ್ಲಿ ಟೂರ್ನಿ ನಡೆಯಬೇಕಿತ್ತು. ಅದೇ ಚಿಂತೆಯಲ್ಲಿದ್ದ ವಿಶ್ವನಾಥ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೆಜಿಎಫ್ ಆರ್‌ಟಿಒ ಅಧಿಕಾರಿಗಳಿಂದ ತಡರಾತ್ರಿವರೆಗೂ ವಸೂಲಿ! ರಹಸ್ಯ ಕಾರ್ಯಾಚರಣೆಯಲ್ಲಿ ಲಂಚಾವತಾರ ಬಯಲು
ಇನ್ನು ಘಟನಾ ಸ್ಥಳಕ್ಕೆ ಮುಂಡರಗಿ ಸಿಪಿಐ ಸುನೀಲ ಸವದಿ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಅಷ್ಟೇ ಅಲ್ಲದೆ ರಕ್ಷಣಾ ಕಾರ್ಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದಿದ್ದಾರೆ. ನೀರಿನ ಹರಿಯುವ ಜಾಸ್ತಿ ಇರುವ ಕಾರಣ ಕತ್ತಲಾಗಿರುವ ಕಾರಣ ಮರಳಿ ಬಂದಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿ ಬಿಟ್ಟಿರುವ ಕಾರಣ ನೀರಿನ ರಭಸ ಜೋರಾಗಿದೆ.
ರಭಸದ ನೀರಿನಲ್ಲಿ ಈಜುವುದು ಸವಾಲು
ಮಳೆಗಾಲದಲ್ಲಿ ನದಿಗಳು ಅತ್ಯಂತ ರಭಸದಿಂದ ಹರಿಯುವ ಕಾರಣ ಎಷ್ಟೇ ಈಜು ಗೊತ್ತಿದ್ದವರಾದರೂ ನಿರಾಧಾರವಾಗಿ ನೀರಿನಲ್ಲಿ ಈಜಿ ಬದುಕುವುದು ಕಷ್ಟದ ಮಾತು. ಇಂಥಹ ಸಂದರ್ಭದಲ್ಲಿ ಈಜು ಗೊತ್ತಿದ್ದರೂ ಬಹಳಷ್ಟು ಸಲ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ