• Home
  • »
  • News
  • »
  • state
  • »
  • Suicide: ಹೆಣ್ಣು ಮಗುವಾಗಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ತಂದೆ, ಕೋಲಾರದಲ್ಲೊಂದು ವಿಚಿತ್ರ ಘಟನೆ

Suicide: ಹೆಣ್ಣು ಮಗುವಾಗಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ತಂದೆ, ಕೋಲಾರದಲ್ಲೊಂದು ವಿಚಿತ್ರ ಘಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kolar News: ಸಾಮಾನ್ಯವಾಗಿವಾಗಿ ನಾವು ಹೆಣ್ಣು ಮಗು ಹುಟ್ಟಿದ ಕಾರಣ ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆಯ ಪ್ರಕರಣ ನೋಡಿರುತ್ತೇವೆ, ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

  • Share this:

ಕಾಲ ಎಷ್ಟು ಬದಲಾದರೂ ವರದಕ್ಷಿಣೆ ಕಿರುಕುಳ (Dowry), ಹೆಣ್ಣು ಮಗು (Girl Child) ಹುಟ್ಟಿದರೆ ಹೀನಾಯವಾಗಿ ನೋಡುವ ಅನಾಚಾರಗಳು ಮಾತ್ರ ಬದಲಾಗುವುದಿಲ್ಲ. ಅದಕ್ಕೆ ನಮ್ಮ ದೇಶದಲ್ಲಿ (Country) ಹಾಗೂ ರಾಜ್ಯದಲ್ಲಿ ದಿನಕ್ಕೆ ಒಂದು ಉದಾಹರಣೆಯಂತೂ ಸಿಗುತ್ತದೆ. ಹೆಣ್ಣು ಮಗು ಹುಟ್ಟಿದ ಕಾರಣ ಗಂಡನಿಂದ ಕಿರುಕುಳ, ಅತ್ತೆಯ ಅಮಾನವೀಯ ವರ್ತನೆ ಎಲ್ಲವೂ ಇನ್ನೂ ಸಮಾಜದಲ್ಲಿ ಹಾಗೆಯೇ ಉಳಿದಿದೆ. ಹೆಣ್ಣು ಹಾಗೂ ಗಂಡು ಒಂದೇ ಎಂದು ಎಷ್ಟು ಹೇಳಿದರೂ ಸಹ, ಸಮಾನತೆಯ ಬಗ್ಗೆ ಮಹಾನ್ ವ್ಯಕ್ತಿಗಳು ಉದ್ದುದ್ದು ಭಾಷಣ ಮಾಡಿದರೂ ಸಹ ಜನ ಬದಲಾಗುವ ಯಾವುದೇ ಲಕ್ಷಣ ಕಾಣುವುದಿಲ್ಲ. ಸಾಮಾನ್ಯವಾಗಿವಾಗಿ ನಾವು ಹೆಣ್ಣು ಮಗು ಹುಟ್ಟಿದ ಕಾರಣ ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆಯ ಪ್ರಕರಣ ನೋಡಿರುತ್ತೇವೆ, ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


4ನೇ ಮಗು ಸಹ ಹೆಣ್ಣೆಂದು ಆತ್ಮಹತ್ಯೆ


ಹೌದು, ಈ ಸುದ್ದಿ ಆಶ್ಚರ್ಯವಾದರೂ ಸತ್ಯ. ಕೇವಲ ಹೆಣ್ಣು ಮಕ್ಕಳೇ ಆಯಿತು ಎಂದು ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.  ಹೆಣ್ಣು ಮಗು ಹುಟ್ಟಿದೆ ಎಂದು ಬೇಸತ್ತು ಮಗುವಿನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ 38 ವರ್ಷದ ಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ.


ಇನ್ನು ಕಳೆದ 3 ದಿನದ ಹಿಂದಷ್ಟೇ ಪತ್ನಿಗೆ ಹೆರಿಗೆಯಾಗಿತ್ತು. ಈಗಾಗಲೇ ಇದ್ದ 3 ಹೆಣ್ಣು ಮಕ್ಕಳ ನಂತರ 4 ನೇ ಮಗು ಸಹ ಹೆಣ್ಣು ಮಗುವಾದ ಹಿನ್ನಲೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ಮೂಲಗಳ ಪ್ರಕಾರ 4 ಹೆಣ್ಣು ಮಕ್ಕಳೆಂದು ಕೆಲ ಸ್ನೇಹಿತರು ಚುಡಾಯಿಸಿದ್ದರು ಎಂದು ಲೋಕೇಶ್​ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.


ಈ ಮೊದಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಲೋಕೇಶ್​


ಅಲ್ಲದೇ, ಈಗಾಗಲೇ 3 ಹೆಣ್ಣು ಮಕ್ಕಳಿದ್ದು, ಈಗ ನಾಲ್ಕನೆಯದೂ ಹೆಣ್ಣಾಗಿದೆ. ನನಗೆ ಮಕ್ಕಳನ್ನ ಸಾಕಲು ಆಗೋಲ್ಲ ಎಂದು ಭಾವಿಸಿ ಮನೆಯಲ್ಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ, ಮೂರನೇಯ ಬಾರಿ ಹೆಣ್ಣು ಮಗುವಾದಾಗಲೇ ಲೋಕೇಶ್​ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನುವ ಮಾಹಿತಿ ಸಹ ಇದ್ದು, ಗಂಡು ಮಗುವಿನ ನಿರೀಕ್ಷೆ ಹುಸಿಯಾದ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಇಂದೂ ಮಳೆ ಬರುತ್ತಾ? ಹೀಗಿರಲಿದೆ ಹವಾಮಾನ


ಇತ್ತ ಹೆಣ್ಣು ಹುಟ್ಟಿತೆಂದು ಆತ್ಮಹತ್ಯೆ, ಅತ್ತ ಹನಿ ಟ್ರ್ಯಾಪ್ ಮಾಡಿದ ಯುವತಿ


ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಸದ್ದಿಲ್ಲದೇ ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಯುವಕನೊಬ್ಬನನ್ನು ಕರೆದು ಸುಲಿಗೆ ಮಾಡಲು ಯತ್ನಿಸಿದ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ದಿಲೀಪ್ ಕುಮಾರ್ ಎಂಬ ವ್ಯಕ್ತಿ ಹನಿಟ್ರ್ಯಾಪ್ ನಡೆಸಲಾಗಿದೆ ಎಂದು ದೂರು ದಾಖಲಿಸಿದ್ದಾರೆ.


ಪ್ರಿಯಾ ಎಂಬ ಹೆಸರಿನ ಯುವತಿ ದಿಲೀಪ್ ಕುಮಾರ್ಗೆ ಮೆಸೇಜ್ ಮಾಡಿ ಪರಿಚಯಿಸಿಕೊಂಡಿದ್ದಳು. ಭೇಟಿಯಾಗುವುದಾಗಿ ಒತ್ತಾಯಿಸಿ ಅಕ್ಟೋಬರ್ 27ರಂದು ಮನೆಗೆ ಕರೆಸಿಕೊಂಡಿದ್ದಳು. ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿದ್ದ ಪ್ರಿಯಾಳ ಮನೆಗೆ ಹೋಗಿದ್ದ ದಿಲೀಪ್ ಕುಮಾರ್, ಮನೆ ಒಳಗಡೆ ಪ್ರವೇಶಿಸುತ್ತಿದ್ದಂತೆ ನಾಲ್ವರು ಯುವಕರು ಚಾಕು ತೋರಿಸಿ ಹಣ ಮೊಬೈಲ್ ಕೊಡುವಂತೆ ಬೆದರಿಸಿದ್ದರು.


ಇದನ್ನೂ ಓದಿ: ಅಧ್ಯಕ್ಷರಾದ ನಂತರ ಮೊದಲ ಬಾರಿ ರಾಜ್ಯಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಭರ್ಜರಿ ಸ್ವಾಗತಕ್ಕೆ ಕೈ ನಾಯಕರ ತಯಾರಿ


ಬಳಿಕ ದಿಲೀಪ್ ಕುಮಾರ್ ಪಕ್ಕ ಯುವತಿಯನ್ನ ನಿಲ್ಲಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹನಿಟ್ರ್ಯಾಪ್​ನಿಂದ ಬೇಸತ್ತು ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದ ದಿಲೀಪ್ ಕುಮಾರ್ ದೂರಿನ ಅನ್ವಯ ಯುವತಿಯನ್ನ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Published by:Sandhya M
First published: