Fake Job: ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಪಂಗನಾಮ ಹಾಕಿದ ಭೂಪ ಪೊಲೀಸರ ವಶಕ್ಕೆ

Fake Promise For Job: ಇವನ ಮಾತನ್ನು ನಂಬಿ ಲಕ್ಷಾಂತರ ರೂಪಾಯಿ ನೀಡಿದವರು ದೂರು ನೀಡಿದ್ದ ಕಾರಣ  ಈಗ ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಕೆಲಸ (Job) ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಕೆಎಸ್​ ಆರ್​ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಈ ಬೆನ್ನಲ್ಲೆ ಇದೀಗ ಗ್ರಾಮ ಲೆಕ್ಕಿಗ (Village Accountant) ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಈರಣ್ಣನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಉತ್ತರ ಕರ್ನಾಟಕದವರನ್ನೇ ಟಾರ್ಗೆಟ್​ ಮಾಡ್ತಿದ್ದ

ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಆರೋಪಿ ಹಣ ಪಡೆದು ವಂಚನೆ ಮಾಡುತ್ತಿದ್ದ ಈರಣ್ಣ ತುಮಕೂರು ಜಿಲ್ಲೆಯ ಕಂಪನಹಳ್ಳಿ ನಿವಾಸಿಯಾಗಿದ್ದು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಅಂತ ಜನರಿಗೆ ಪರಿಚಯ ಮಾಡಿಕೊಂಡು ಜನರನ್ನು ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.

ಆರೋಪಿ ಈರಣ್ಣ ವಿಧಾನಸೌಧದ ಬಳಿಯೇ ಕೂಳಿತು ಕೆಲಸ ಕೇಳಿ ಬರುತ್ತಿದ್ದ ಅಭ್ಯರ್ಥಿಗಳನ್ನ ತನ್ನ ಜಾಲದಲ್ಲಿ ಸಿಲುಕಿಸಿಕೊಳ್ಳುತ್ತಿದ್ದ, ಗ್ರಾಮಲೆಕ್ಕಿಗನ ಕೆಲಸ ಕೊಡಿಸ್ತೀನಿ, ಅದಕ್ಕಾಗಿ ಪಿಯುಸಿಯಲ್ಲಿ ಹೆಚ್ಚು ಮಾರ್ಕ್ಸ್​ ಗಳಿಸಿರಬೇಕು. ಹೀಗಾಗಿ ನಕಲಿ ಮಾರ್ಕ್ಸ್​ ಕಾರ್ಡ್​ ತಯಾರಿಸಿಕೊಳ್ಳಿ ಎಂದು ಹೇಳಿ ನಂಬಿಸುತ್ತಿದ್ದ.

ಇದನ್ನೂ ಓದಿ: Nalapad​ ಮೇಲೆ ಹತ್ಯೆ ಪ್ರಯತ್ನ ಆರೋಪ, ಅದೆಲ್ಲಾ ಸುಳ್ಳು, ಅಲ್ಲೇನೂ ನಡೆದೇ ಇಲ್ಲ ಎಂದ ಬಳ್ಳಾರಿ ಕಾಂಗ್ರೆಸ್ ಯುವ​ ಅಧ್ಯಕ್ಷ ಸಿದ್ದು

ಅವನ ಮಾತನ್ನ ನಂಬಿ ಕೆಲಸ ಸಿಗುವ ಆಸೆಯಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ರೆಡಿ ಮಾಡಿಕೊಂಡವರಿಗೆ ಪಂಗನಾಮವೇ ಗತಿ.  ನಯನ ಬೀಳಗಿ, ಶೋಭಾ ಕಲಕೆರೆ, ಸಂಗಮೇಶ್ ವಸ್ತ್ರದ್ , ಅರುಣ್ ಕುಮಾರ್, ಸಿದ್ಧನಗೌಡ ಬಿರಾದರ, ಹುಚ್ಚಯ್ಯ ಸ್ವಾಮಿ, ಶಿವಕುಮಾರ ಗಂಗಾವತಿ, ಎಂಬವರಿಗೆ ಆರೋಪಿ ವಂಚಿಸಿದ್ದು, ಇವರ ಬಳಿ ನಕಲಿ ಮಾರ್ಕ್ಸ್ ಕಾರ್ಡ್ ಮಾಡಿಸಿದ್ದಲ್ಲದೇ ಹುದ್ದೆಗೆ ಅರ್ಜಿಯನ್ನು ಹಾಕಿಸಿದ್ದ.

ಲಕ್ಷಾಂತರ ಕಳೆದುಕೊಂಡ ಅಮಾಯಕರು

ಇವನ ಮಾತನ್ನು ನಂಬಿ ಲಕ್ಷಾಂತರ ರೂಪಾಯಿ ನೀಡಿದವರು ದೂರು ನೀಡಿದ್ದ ಕಾರಣ ಈಗ ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಸಹ ವಿಧಾನಸಭೆ ಪೊಲೀಸರು ಸರ್ಕಾರಿ ಕೆಲಸ ಕೊಡಿಸುತ್ತೀನಿ ಎಂದು ವಂಚಿಸುತ್ತಿದ್ದ ಮಂಡ್ಯ ಮೂಲದ ಆರೋಪಿಯನ್ನು ಬಂಧಿಸಿದ್ದರು. ಮಂಡ್ಯ ಮೂಲದ ಸಂದೀಪ್ ಬಂಧಿತ. ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ. ಪ್ರಾಥಮಿಕ ತನಿಖೆ ವೇಳೆ 20ಕ್ಕೂ ಹೆಚ್ಚು ಜನರಿಗೆ ಹಣ ವಂಚಿಸಿರುವುದಾಗಿ ತಿಳಿದು ಬಂದಿತ್ತು.

ಇದನ್ನೂ ಓದಿ: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಅಕ್ರಮ ಹಣ ವರ್ಗಾವಣೆ: ತನಿಖೆಗಿಳಿದ ED

ಆರೋಗ್ಯ ಇಲಾಖೆಯಲ್ಲಿ ಡೇಟಾ ಅನಾಲಿಸ್ಟ್, ಪ್ರವಾಸೋದ್ಯಮ ಇಲಾಖೆಯಲ್ಲಿ ಎಕ್ಸಿಕ್ಯೂಟಿವ್, ಹೈಕೋರ್ಟ್​​ನಲ್ಲಿ ಡಿ ದರ್ಜೆ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದ. ಆತನ ಮಾತನ್ನ ನಂಬಿ ಹಲವಾರು ಜನರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ಕೆಲಸ‌ ಕೊಡಿಸದೆ ಮೊಬೈಲ್ ಸ್ವಿಚ್ಡ್​​ ಆಫ್ ಮಾಡಿಕೊಂಡಿದ್ದ. ಈ ಸಂಬಂಧ ಸೆ.28 ರಂದು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ವೀಣಾ ಎನ್ನುವವರು  ದೂರು ನೀಡಿದ್ದರು.
Published by:Sandhya M
First published: