• Home
  • »
  • News
  • »
  • state
  • »
  • Fraud Case: ಕಂಪನಿಗೆ  4.41 ಕೋಟಿ ರೂ. ವಂಚಿಸಿ ದುಬೈಗೆ ಹಾರಲು ಯತ್ನಿಸಿದ ಯುವಕ..! ಕೊನೆಗೂ ಸಿಕ್ಕಿಬಿದ್ದ

Fraud Case: ಕಂಪನಿಗೆ  4.41 ಕೋಟಿ ರೂ. ವಂಚಿಸಿ ದುಬೈಗೆ ಹಾರಲು ಯತ್ನಿಸಿದ ಯುವಕ..! ಕೊನೆಗೂ ಸಿಕ್ಕಿಬಿದ್ದ

ರಭವ್ಯ ಹರೇನ್

ರಭವ್ಯ ಹರೇನ್

ಇಲ್ಲೊಬ್ಬ ಆಸಾಮಿ ಕೆಲಸಕ್ಕೆಂದು ಸೇರಿದ್ದ ಕಂಪನಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ದುಬೈಗೆ ಹಾರಲು ಸಿದ್ಧತೆ ನಡೆಸಿದ್ದ ವಂಚಕನ ಪೊಲೀಸರ ಸೆರೆಯಾಗಿದ್ದಾನೆ.

  • Share this:

ಬೆಳಗಾವಿ (ಏಪ್ರಿಲ್.08): ದಿನೇದಿನೇ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ವಂಚಕರು ಸಹ ಹೈಟೆಕ್ ಆಗುತ್ತಿದ್ದಾರೆ. ಇಲ್ಲೊಬ್ಬ ಆಸಾಮಿ ಕೆಲಸಕ್ಕೆಂದು ಸೇರಿದ್ದ ಕಂಪನಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ. ಪೊಲೀಸ್ ಠಾಣೆ(Police station)ಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ದುಬೈ(Dubai)ಗೆ ಹಾರಲು ಸಿದ್ಧತೆ ನಡೆಸಿದ್ದ ವಂಚಕನ ಪೊಲೀಸರ ಸೆರೆಯಾಗಿದ್ದಾನೆ.  ಹೆಸರು ಭವ್ಯಹರೇನ್(26) ದೇಸಾಯಿ. ಮಹಾರಾಷ್ಟ್ರದ ಮುಂಬೈನ ಮಸ್ಕತಿ ಮಹಲ್ ನಿವಾಸಿ. ಬೆಳಗಾವಿ ತಾಲೂಕಿನ ದೇಸೂರು ಗ್ರಾಮದ ಬಳಿ ಎಂ.ಜಿ.ಆಟೋಮೋಟಿವ್ ಬಸ್ ಆ್ಯಂಡ್ ಕೋಚ್ ಕಂಪನಿಯಲ್ಲಿ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರಿದ್ದ.


ಕಂಪನಿಗೆ ಕೆಲಸಕ್ಕೆ ಸೇರಿದ ಬಳಿಕ ಅಲ್ಲಿನ ಮೇಲಾಧಿಕಾರಿಗಳ ವಿಶ್ವಾಸ ಗಳಿಸಿದ್ದ ಈ ಭವ್ಯಹರೇನ್ ಸುಳ್ಳು ದಾಖಲೆಪತ್ರ ಸೃಷ್ಟಿಸಿ ಕಂಪನಿಗೆ ಸೇರಿದ ಬರೋಬ್ಬರಿ 4 ಕೋಟಿ 41 ಲಕ್ಷ ರೂಪಾಯಿ ಹಣವನ್ನು ಆರ್‌ಟಿಜಿಎಸ್ ಮೂಲಕ ತನ್ನ ಹಾಗೂ ತನ್ನ ಪತ್ನಿಯ ಖಾತೆಗೆ‌ ವರ್ಗಾಯಿಸಿಕೊಂಡಿದ್ದ.


ನಕಲಿ ಇಮೇಲ್ ಕಳುಹಿಸಿ ಪರಿಚಯಸ್ಥರ ವಿವಿಧ ಬ್ಯಾಂಕ್ ಅಕೌಂಟ್ ಗೆ ಆರಟಿಜಿಎಸ್ ಮೂಲಕ ಹಣ ವರ್ಗಾವಣೆ


ಹಲವು ಕಂಪನಿಗಳೊಂದಿಗಿನ  ವ್ಯವಹಾರವನ್ನೇ ದಾಳವಾಗಿಸಿಕೊಂಡಿದ್ದ ಈತ ನಕಲಿ ಇಮೇಲ್ ಕಳುಹಿಸಿ ಪರಿಚಯಸ್ಥರ ವಿವಿಧ ಬ್ಯಾಂಕ್ ಅಕೌಂಟ್ ಗೆ ಆರಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದ. ‌ಆಗ ಪೇಮೆಂಟ್ ಆಗಿಲ್ಲ ಎಂದು ಆಯಾ ಕಂಪನಿಯಿಂದ ಶಾಖೆಯ ಮುಖ್ಯಸ್ಥ ಪ್ರಕಾಶ ಸರ್ವಿ ಗಮನಕ್ಕೆ ಬರುತ್ತೆ. ತಕ್ಷಣ ಪ್ರಕಾಶ್ ಸರ್ವಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ‌‌‌.


ಆನಲೈನ್ ವಂಚನೆ ಹಿನ್ನೆಲೆ ಬೆಳಗಾವಿ ಸಿಇಎನ್ ಠಾಣೆಗೆ ಪ್ರಕರಣ ವರ್ಗಾವಣೆ


ಆನಲೈನ್ ವಂಚನೆ ಹಿನ್ನೆಲೆ ಬೆಳಗಾವಿ ಸಿಇಎನ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿರುತ್ತೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು ತನಿಖೆಗಿಳೀತಾರೆ.
ಎಂ.ಜಿ. ಆಟೋಮೋಟಿವ್ ಬಸ್ & ಕೋಚ್ ಪ್ರೈವೆಟ್ ಲಿಮಿಟೆಡ್ ನ ಪ್ರಕಾಶ್ ಸುರ್ವಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Malpe Beachನಲ್ಲಿ ಸೆಲ್ಫಿ ಹುಚ್ಚಾಟ, ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು


ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ


ಐಪಿಸಿ ಸೆಕ್ಷನ್ 465, 466 467, 468, 471, 406, 420 IPC ಅಡಿ ಪ್ರಕರಣ ದಾಖಲಿಸುತ್ತಾರೆ. ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ ಮಾಡಿದಂತಹ ಭವ್ಯಹರೇನ್ ದೇಸಾಯಿ, ಆತನ ಪತ್ನಿ ಉರ್ಜಾ ಶೈಲೇಶ್ ಶಹಾ, ಸಂಬಂಧಿ ಹರೇನ್ ವಿನೋದರಾಯ್ ದೇಸಾಯಿ ಹಾಗೂ ನಾಲ್ಕು ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಿಸುತ್ತಾರೆ. ಬಳಿಕ ಈ ಭವ್ಯಹರೇನ್ ಹಣ ವರ್ಗಾವಣೆ ಮಾಡಿದ ಖಾತೆಗಳನ್ನೆಲ್ಲಾ ಫ್ರೀಜ್ ಮಾಡಿ ಆತನ ಬಂಧನಕ್ಕೆ ಬಲೆ ಬೀಸುತ್ತಾರೆ‌‌.


ಲುಕ್ ಔಟ್ ನೋಟಿಸ್ ಜಾರಿ


ಇನ್ನು ಆರೋಪಿ ಭವ್ಯಹರೇನ್ ದೇಸಾಯಿ ದೇಶ ಬಿಟ್ಟು ಹೋಗದಂತೆ ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡ್ತಾರೆ. ಇದೇ ವೇಳೆ ಆರೋಪಿ ಭವ್ಯಹರೇನ್ ದೇಸಾಯಿ ಮುಂಬೈ ಏರ್‌ಪೋರ್ಟ್‌ನಿಂದ ದುಬೈನ ಶಾಹರ್ಜಾಗೆ ಹಾರಲು ಪ್ಲ್ಯಾನ್ ಮಾಡಿರ್ತಾನೆ.
ಬೆಳಗಾವಿ ಸಿಇಎನ್ ಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ಬರುತ್ತೋ ಮುಂಬೈ ಏರ್‌ಪೋರ್ಟ್‌ಗೆ ತೆರಳಿ ಆರೋಪಿಯ ನ್ನು ಬಂಧಿಸಿ ಬೆಳಗಾವಿಗೆ ಕರೆ ತಂದಿದ್ದಾರೆ‌.


ಇದನ್ನೂ ಓದಿ: Kolar: ಈ ಮುಸ್ಲಿಂ ಶಿಲ್ಪಿಯ ಕೈಯಲ್ಲಿ ರೂಪುಗೊಳ್ಳುತ್ತವೆ ಹಿಂದೂ ದೇವರು! ಎಲ್ಲರಿಗೂ ಇವರೇ ಅಚ್ಚುಮೆಚ್ಚು


10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಸಿಇಎನ್ ಟೀಮ್  ಸದ್ಯ ಆರೋಪಿ ಬಳಿ 2 ಕೋಟಿ 50 ಲಕ್ಷ ರೂಪಾಯಿಯಷ್ಟು ಹಣ ರಿಕವರಿ ಮಾಡಿದ್ದಾರೆ. ಬಳಿಕ ಬೆಳಗಾವಿ ಜೆಎಂಎಫಸಿ ನ್ಯಾಯಾಲಯಕ್ಕೆ ಆರೋಪಿ ಹಾಜರು ಪಡಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಇನ್ನು ವಂಚನೆ ಮಾಡಿ ಪಡೆದ ಹಣವನ್ನು ಆರೋಪಿ ಭವ್ಯಹರೇನ್ ಶೇರ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿದ್ದೂ ಸಹ ಗೊತ್ತಾಗಿದೆ.

Published by:Divya D
First published: