ಪ್ರೀತಿಸಿ ಮದುವೆಯಾದ (Love Marriage) ಜೋಡಿಯ (Couple) ಒಂದು ವರ್ಷದ ಪ್ರೀತಿ ಅಂತ್ಯ ಕಂಡಿದೆ. ಕುಡಿತ ಅನ್ನೋದು ಎರಡು ಮನಸ್ಸನ್ನ ಒಡೆದಿದೆ. ಪತಿಯ ಚಿತ್ರಹಿಂಸೆ ಗೆ ಬೇಸತ್ತ ಪತ್ನಿ ತನ್ನ ತಾಯಿ ಜೊತೆ ಸೇರಿ ವರದಕ್ಷಿಣೆ ಕಿರುಕುಳ (Dowry Harassment) ದಾಳ ಬಳಸಿ ಪತಿಯ ಕುಟುಂಬವನ್ನೇ ಜೈಲುಪಾಲು ಮಾಡಿದ್ದಾಳೆ. ಉಡುಪಿ ಜಿಲ್ಲೆಯಲ್ಲಿ ಹರಿದಾಡಿದ ಅದೊಂದು ವೀಡಿಯೋ (Viral Video) ತಂದೆ ಮಗ ಜೈಲು (Prison) ಪಾಲಾಗುವಂತೆ ಮಾಡಿದೆ. ಪತಿ ಹಾಗೂ ಮಗನ ಸ್ಥಿತಿ ಕಂಡು ಆ ತಾಯಿ ಕಣ್ಣೀರಲ್ಲೇ ದಿನದೂಡುತ್ತಿದ್ದಾರೆ. ಹೌದು.. ಸಾಮಾಜಿಕ ಜಾಲತಾಣದಲ್ಲಿ ಪತ್ನಿಯನ್ನೇ ಸಿಗರೇಟ್ ನಿಂದ ಸುಡುವ ಯತ್ನ ಮಾಡುವ ಚಿತ್ರಹಿಂಸೆ ವೀಡಿಯೋ ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.
ಪತಿಯಿಂದ ಚಿತ್ರಹಿಂಸೆಗೆ ಒಳಗಾಗಿದ್ದ ಪತ್ನಿ ಪ್ರಿಯಾಂಕಾ ಕುಂದಾಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರನ್ನ ದಾಖಲಿಸಿದ್ದಳು. ಇದರ ಬೆನ್ನಲ್ಲೇ ಚಿತ್ರಹಿಂಸೆ ನೀಡಿದ ಪತಿ ಮಹಾಶಯ ಪ್ರದೀಪ್ ನ ಬಂಧನವೂ ಆಯ್ತು. ಜೊತೆಗೆ ಮಾವ ಪ್ರಕಾಶ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಸೊಸೆಯಿಂದ ಸುಳ್ಳು ದೂರು ದಾಖಲು
ಈ ಬಂಧನದ ಬೆನ್ನಲ್ಲೇ ಬಂಧನದ ಹಿಂದಿನ ಅಸಲಿ ಕಹಾನಿಯನ್ನ ನ್ಯೂಸ್ 18 ಕನ್ನಡದೊಂದಿಗೆ ಪ್ರದೀಪ್ ತಾಯಿ ಶೋಭಾ ಕಂಬನಿಯೊಂದಿಗೆ ಹಂಚಿಕೊಂಡಿದ್ದಾರೆ. ಮಾನಸಿಕ ಮಗನನ್ನೇ ಬಂಧಿಸಲಾಗಿದೆ ಜೊತೆಗೆ ನನ್ನ ಪತಿಯನ್ನೂ ಬಂಧಿಸಲಾಗಿದೆ. ನಾನು ಈಗ ಏಕಾಂಗಿ . ಪತಿ ಹಾಗೂ ಮಗನನ್ನ ಬಿಡಿಸಿ ಬರಲು ಹಣವಿಲ್ಲ. ನನ್ನ ಮಗ ಮಾಡಿದ್ದು ತಪ್ಪು. ಆದರೆ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ನನ್ನ ಸೊಸೆಗೂ ಗೊತ್ತು. ಈವರೆಗೂ ಸೊಸೆಯನ್ನ ಮಗಳಂತೆ ನೋಡಿಕೊಂಡಿದ್ದೆ. ಆದರೆ ತಾಯಿ ಮನೆಯ ಮಾತನ್ನ ಕೇಳಿ ವರದಕ್ಷಿಣೆ ಸುಳ್ಳು ದೂರನ್ನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ನನ್ನ ಮಗನೇ ಸಾಲ ಮಾಡಿ ಮಾಂಗಲ್ಯ ಮಾಡಿಸಿದ್ದ. ಸಾಲದ ಮೊದಲ ಕಂತನ್ನು ಕಟ್ಟಿದ್ದಾನೆ. ವರದಕ್ಷಿಣೆ ಶಬ್ದ ಈವರೆಗೆ ನಮ್ಮ ಕುಟುಂಬ ಬಳಸಿಲ್ಲ. ಮದುವೆಯಾದ ಮೇಲೆ ನನ್ನ ಮಗ ಮಾನಸಿಕ ಸಮಸ್ಯೆಗೆ ಜಾರಿದ್ದಾನೆ. ಲವ್ ಮ್ಯಾರೇಜ್ ಬಗ್ಗೆ ಮನಸ್ಸಿಗೆ ಆಳವಾಗಿ ತೆಗೆದುಕೊಂಡಿದ್ದ. ಮದುವೆಯಾದ ಮೇಲೆ ಮುಂಬೈಗೆ ಓಡಿ ಹೋಗಲು ನಿರ್ಧರಿಸಿದ್ದ . ಆದರೆ ನಿರ್ಧಾರ ಬದಲಿಸಿ ನಮ್ಮೊಂದಿಗೆ ಚೆನ್ನಾಗಿದ್ದ.
ಮಗ ಮಾನಸಿಕ ರೋಗಿ, ಅದು ಆಕೆಗೂ ಗೊತ್ತು
ಬರ ಬರುತ್ತಾ ಮಾನಸಿಕ ರೋಗಿಯಾಗಿದ್ದಾನೆ. ಆದರೆ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಸಮಯ ಕುಡಿಯಬಾರದೆಂದು ವೈದ್ಯರು ಹೇಳಿದ್ದರು. ವಿಪರೀತ ಕುಡಿತ ಮತ್ತೆ ಮಾನಸಿಕ ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ. ಕುಡಿದಾಗ ಮಾನಸಿಕ ಸಮಸ್ಯೆ ಉಲ್ಬಣಿಸುತ್ತೆ. ಹೀಗೆ ಪತ್ನಿಯ ತಾಯಿ ಅವಮಾನ ಮಾಡಿದರೆಂದು ಕುಡಿದು ಬಂದು ಅತ್ತೆಯನ್ನ ಹೆದರಿಸಲು ಚಿತ್ರಹಿಂಸೆ ಕೊಡುವ ರೀತಿ ಈ ವೀಡಿಯೋ ಮಾಡಿದ್ದಾನೆ.
ಈ ವೇಳೆ ನಾನು ಕೂಡ ತಡೆದಿದ್ದೆ. ಆದರೆ ಎಂದೂ ಸಿಗರೇಟ್ ನಿಂದ ಸುಟ್ಟಿಲ್ಲ ಯಾವತ್ತು ಹಲ್ಲೆ ನಡೆಸಿಲ್ಲ ಎಂದು ಅಳಲನ್ನ ಹೊರಹಾಕಿದ್ರು.
ಆತನ ಜೊತೆ ಬದುಕಲಾರೆ, ವಿಚ್ಛೇದನ ಕೊಡ್ತೀನಿ
ಇನ್ನು ದೂರುದಾರೆ ಪತ್ನಿ ಮಾತ್ರ ಪತಿ ಜೊತೆ ಬಾಳಲು ಸಾಧ್ಯವೇ ಇಲ್ಲ ಅಂದಿದ್ದಾಳೆ. ವಿಚ್ಚೇದನ ನೀಡೋದು ಶತ ಸಿದ್ದ ಅಂದಿದ್ದಾಳೆ ಪ್ರಿಯಾಂಕ. ಒಂದು ವರ್ಷ ಪ್ರೀತಿಸಿ ಮದುವೆಯಾಗಿ ಖುಷಿಯಾಗಿದ್ದೇವು. ಆದರೆ ಒಂದು ತಿಂಗಳಿನಿಂದ ಕುಡಿದ ವಿಪರೀತವಾಗಿ ಹಲ್ಲೆ ಮಾಡುತ್ತಿದ್ದ. ಕುಡಿತ ನಿಲ್ಲಿಸಲು ಚಿಕಿತ್ಸೆ ನೀಡಲಾಗುತ್ತಿದೆ ಆದರೂ ಕುಡಿತ ಕಡಿಮೆಯಾಗಿಲ್ಲ.
ಕುಡಿದಾಗ ಹಲ್ಲೆ ಮಾಡುತ್ತಿದ್ದ. ಗರ್ಬಿಣಿ ಅಂದರೂ ಸಿಗರೇಟ್ ನಿಂದು ಸುಟ್ಟು, ಹಲ್ಲೆ ನಡೆಸುತ್ತಿದ್ದ. ಹೊಟ್ಟೆಯಲ್ಲಿ ಮಗು ಸಾಯಲಿ. ಒಂದು ವರದಕ್ಷಿಣೆ ತರಬೇಕು ಇಲ್ಲ ಮಗು ಸಾಯಬೇಕು ಎಂದೆಲ್ಲ ಹೇಳಿದ್ದಾನೆ. ಹೀಗಾಗಿ ಪತಿಯ ಜೊತೆ ಬದುಕಲು ಸಾದ್ಯವಿಲ್ಲ. ಇಷ್ಟು ದಿನದ ಚಿತ್ರಹಿಂಸೆ ಸಾಕು ಅಂತ ಪ್ರಿಯಾಂಕ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆ.
ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಪ್ರದೀಪ್ ಕುಟುಂಬ
ಒಟ್ಟಾರೆ ಒಂದು ವರ್ಷದ ಪ್ರೀತಿಗೆ ಈ ಕುಡಿತದ ಚಟ ಎಳ್ಳು ನೀರು ಬಿಟ್ಟಿದೆ. ಕುಡಿತದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತೇನೆಂದು ಅರಿವಿದ್ದರೂ ಕುಡಿದು ರಂಪಾಟ ಮಾಡಿದ ಪ್ರದೀಪ್ ತನ್ನ ಕುಟುಂಬವನ್ನೇ ಕಣ್ಣೀರಲ್ಲಿ ದಿನಕಳೆಯುವಂತೆ ಮಾಡಿದ್ದಾನೆ.
ಇತ್ತ ಜಾತಿ ಪ್ರೇಮಕ್ಕೆ ಗಂಟುಬಿದ್ದ ಅತ್ತೆ ಅಳಿಯನ ಮಾನಸಿಕತೆಯನ್ನ ಚಿವುಟಿ ಮಗಳ ಜೀವನ ಹಾಳು ಮಾಡಿರುವುದು ವಿಪರ್ಯಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ