Belagavi Murder: ಹೆಂಡತಿ, ಮಕ್ಕಳಿದ್ದ ಮನೆಯಲ್ಲಿ ವ್ಯಕ್ತಿಯನ್ನು ‌ಕೊಂದವರು ಯಾರು? ಬರ್ಬರ ಕೊಲೆಯ ಸುತ್ತ ಅನುಮಾನದ ಹುತ್ತ!

ಇತ್ತ ಮನೆಗೆ ಹೊರಗಿನಿಂದ ಯಾರೇ ಬಂದ್ರೂ ಗೇಟ್ ಬಳಿ ನಾಯಿ ಇತ್ತು. ಮಧ್ಯರಾತ್ರಿ ವೇಳೆಗೆ ಅಪರಿಚಿತರು ಬಂದ್ರೇ ಸಹಜವಾಗಿ ನಾಯಿ ಬೊಗಳುತ್ತೆ. ಆದ್ರೆ ಇಲ್ಲಿ ನಾಯಿ ಕೂಡ ಬೊಗಳಿಲ್ಲ ಅಂತೆ, ಇತ್ತ ಮಧ್ಯರಾತ್ರಿ ಸುಧೀರ್ ಮನೆಯಲ್ಲಿ ಶಬ್ದ ಬಂದಿದ್ದು ಅಕ್ಕಪಕ್ಕದ ಮನೆಯವರ ಗಮನಕ್ಕೆ ಬಂದಿದೆ.

ಕೊಲೆಯಾದ ಸುಧೀರ್

ಕೊಲೆಯಾದ ಸುಧೀರ್

  • Share this:
ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿ (Belagavi City Camp) ಕಳೆದ ರಾತ್ರಿ ಬೆಡ್ ರೂಮ್​​ನಲ್ಲಿ ಮಲಗಿದ್ದ ಸುಧೀರ್ ಕಾಂಬಳೆ(57)ಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಎಲ್ಲೆಂದರಲ್ಲಿ ಇರಿದು ಬರ್ಬರವಾಗಿ ಹತ್ಯೆ (Murder) ಮಾಡಿದ್ದಾರೆ. ಸುಧೀರ್ ಒಂದು ರೂಮ್​​ನಲ್ಲಿ ಮಲಗಿದ್ರೇ ಇನ್ನೊಂದು ಕೊಠಡಿಯಲ್ಲಿ ಹೆಂಡತಿ ರೋಹಿಣಿ ಹಾಗೂ ಮೂವರು ಮಕ್ಕಳು ಮಲಗಿದ್ದಾರೆ. ಶನಿವಾರ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಸುಧೀರ್ ಬೆಡ್ ರೂಮ್ (Bedroom) ಬಾಗಿಲು ತೆಗೆದಿತ್ತು. ಆತ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದ (Dead Body). ತಕ್ಷಣ ಅಕ್ಕಪಕ್ಕದವರನ್ನ ಕರೆದ ರೋಹಿಣಿ ವಿಚಾರ ತಿಳಿಸಿದ್ದಾಳೆ.ಇನ್ನೂ ಸ್ಥಳೀಯರು ಕ್ಯಾಂಪ್ ಪೊಲೀಸರಿಗೂ (Police) ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಆತನ ಕೈ ಮೇಲೆ ಆದ ಗಾಯ ನೋಡಿ ತಾನೇ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂದುಕೊಂಡಿದ್ದರು. ಎಫ್ಎಸ್ಎಲ್ ಟೀಂ ಬಂದು ನೋಡಿದಾಗ ದೇಹದ ಉಳಿದ ಕಡೆಯೂ ಎಲ್ಲೆಂದರಲ್ಲಿ ಇರಿದಿದ್ದು ಗೊತ್ತಾಗಿ ಇದು ಕೊಲೆ ಅಂತ ಪೊಲೀಸರಿಗೆ ಗೊತ್ತಾಗಿದೆ.

ಕೊಲೆಯಾದ ರೂಮ್ ಲಾಕ್!

ಇತ್ತ ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಸಿಪಿ ರವೀಂದ್ರ ಗಡಾದಿ ಪರಿಶೀಲನೆ ನಡೆಸಿ ಮಾಹಿತಿಯನ್ನ ಪಡೆದುಕೊಂಡರು. ನಂತರ ಶವವನ್ನ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಿದ ಪೊಲೀಸರು ಇಡೀ ಮನೆಯನ್ನ ಪರಿಶೀಲನೆ ನಡೆಸಿ ಕೊಲೆಯಾದ ರೂಮ್ ಲಾಕ್ ಮಾಡಿದ್ರು.

ಸುಧೀರ್ ಕೊಲೆಯಾದ ವಿಚಾರ ತನಗೆ ಗೊತ್ತೇ ಇಲ್ಲ ಅಂತಾ ಪತ್ನಿ ರೋಹಿಣಿ ಹೇಳ್ತಿದ್ದಾಳೆ. ಯಾರೋ ಬಂದು ಕೊಲೆ ಮಾಡಿ ಹೋಗಿರಬಹುದು ಪಕ್ಕದ ರೂಮ್​​ನಲ್ಲಿ ಮಲಗಿದ್ದ ನಮಗೆ ಏನು ಗೊತ್ತಾಗಿಲ್ಲ ಅಂತಾ ಪೊಲೀಸರ ಮುಂದೆ ಹೇಳಿದ್ದಾರೆ.

ಪಕ್ಕದ ಕೋಣೆಯಲ್ಲಿ ಮಲಗಿದ್ದವರಿಗೆ ಏನೂ ಕೇಳಿಸಲಿಲ್ಲವಂತೆ!

ಇಪ್ಪತ್ತು ವರ್ಷದ ಮಗಳು ಸೇರಿದಂತೆ ನಾಲ್ಕು ಜನ ಒಂದೇ ರೂಮ್ ನಲ್ಲಿ ಮಲಗಿದ್ರೂ ಬರ್ಬರವಾಗಿ ಹತ್ಯೆಯಾಗುವಾಗ ಸುಧೀರ್ ಕಿರುಚಾಡಲೇಬೇಕು. ಈ ವೇಳೆ ಪಕ್ಕದ ರೂಮ್​​ನಲ್ಲೇ ಮಲಗಿದ್ದ ಇವರಿಗೆ ಕೇಳಿಸಿಲ್ಲ ಅನ್ನೋದು ಅನುಮಾನಕ್ಕೆ ಕಾರಣವಾಗಿದೆ.

man brutally murdered in house at belagavi csb mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  BDA Scam: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ವಿರುದ್ಧ FIR ದಾಖಲು

ನಾಯಿ ಸಹ ಬೊಗಳಲಿಲ್ಲ ಯಾಕೆ?

ಇತ್ತ ಮನೆಗೆ ಹೊರಗಿನಿಂದ ಯಾರೇ ಬಂದ್ರೂ ಗೇಟ್ ಬಳಿ ನಾಯಿ ಇತ್ತು. ಮಧ್ಯರಾತ್ರಿ ವೇಳೆಗೆ ಅಪರಿಚಿತರು ಬಂದ್ರೇ ಸಹಜವಾಗಿ ನಾಯಿ ಬೊಗಳುತ್ತೆ. ಆದ್ರೆ ಇಲ್ಲಿ ನಾಯಿ ಕೂಡ ಬೊಗಳಿಲ್ಲ ಅಂತೆ, ಇತ್ತ ಮಧ್ಯರಾತ್ರಿ ಸುಧೀರ್ ಮನೆಯಲ್ಲಿ ಶಬ್ದ ಬಂದಿದ್ದು ಅಕ್ಕಪಕ್ಕದ ಮನೆಯವರ ಗಮನಕ್ಕೆ ಬಂದಿದೆ.

ಕೊಲೆಗೆ ಕುಟುಂಬಸ್ಥರು ಸಾಥ್ ನೀಡಿದ್ರಾ?

ಈ ವೇಳೆ ಮನೆಯಿಂದ ಆಚೆ ಬಂದು ಕೆಲವರು ನೋಡಿದ್ದಾರೆ. ಏನೂ ಇರದಿದ್ದಕ್ಕೆ ಸುಮ್ಮನೆ ಮಲಗಿದ್ದಾರೆ. ಹೀಗೆ ಹಲವು ಅನುಮಾನಗಳು ಪೊಲೀಸರಿಗೆ ಕಾಡುತ್ತಿದ್ದು ಕುಟುಂಬಸ್ಥರೇ ಎನಾದ್ರೂ ಮಾಡಿದ್ರಾ ಅನ್ನೋ ಆಯಾಮದಲ್ಲಿ ಜತೆಗೆ ಹೊರಗಿನಿಂದ ಯಾರಾದ್ರೂ ಬಂದು ಕೊಲೆ ಮಾಡಿದ್ದು ಇದಕ್ಕೆ ಕುಟುಂಬಸ್ಥರು ಸಾಥ್ ನೀಡಿದ್ರಾ ಅನ್ನೋ ಆಯಾಮದಲ್ಲಿ ಕ್ಯಾಂಪ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

man brutally murdered in house at belagavi csb mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Karnataka Assembly Elections: ಹಾಲಿ ಸಚಿವರ ಕ್ಷೇತ್ರದಲ್ಲಿ ಪೈಪೋಟಿ ಹೇಗಿದೆ? ಗೋವಿಂದರಾಜನಗರದ ಚಿತ್ರಣ ಇಲ್ಲಿದೆ

ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರಿಂದ ತನಿಖೆ

ಸುಧೀರ್ ಸಹೋದರ ಅರುಣ್ ದೂರು ನೀಡಿದ್ದು ಇದರನ್ವಯ ಎರಡು ಆಯಾಮದಲ್ಲಿ ತನಿಖೆ ನಡೆಸಲಾಗ್ತಿದೆ. ಎರಡು ವರ್ಷದ ಹಿಂದೆ ದುಬೈನಿಂದ ಆಗಮಿಸಿದ್ದ ಸುಧೀರ್ ಇಲ್ಲೇ ರಿಯಲ್ ಎಸ್ಟೇಟ್ ಏಜೆನ್ಸಿ ನಡೆಸುತ್ತಿದ್ದ. ಹಣದ ವ್ಯವಹಾರವನ್ನೂ ಕೂಡ ಹೊರಗೆ ಮಾಡಿದ್ದ ಈತ ಆಗಾಗ ಮನೆಯಲ್ಲೂ ಜಗಳವಾಡುತ್ತಿದ್ದನಂತೆ.

ಒಟ್ಟಾರೆ ಸುಧೀರ್ ಕೊಲೆಯಲ್ಲಿ ಸಾಕಷ್ಟು ಅನುಮಾನಗಳು ಮನೆಯವರತ್ತ ತೋರಿಸುತ್ತಿದ್ದು ಸದ್ಯ ಪೊಲೀಸರ ತನಿಖೆಯಿಂದಷ್ಟೇ ಪ್ರಕರಣದ ಸಂತ್ಯಾಂಶ ಹೊರಬಲಿದೆ.-
Published by:Mahmadrafik K
First published: