• Home
  • »
  • News
  • »
  • state
  • »
  • Hubballi: ಯುವಕನ ಮರ್ಮಾಂಗದ ತುದಿ ಕತ್ತರಿಸಿ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ

Hubballi: ಯುವಕನ ಮರ್ಮಾಂಗದ ತುದಿ ಕತ್ತರಿಸಿ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟುಭಯೋತ್ಪಾದಕನೆಂದು ಬಿಂಬಿಸುವುದಾಗಿ ಆರೋಪಿಗಳು ಹೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • Share this:

ಯುವಕನ ಮರ್ಮಾಂಗದ ತುದಿ ಕತ್ತರಿಸಿ ಮುಸ್ಲಿಂ ಧರ್ಮಕ್ಕೆ (Islam Convertion) ಬಲವಂತವಾಗಿ ಮತಾಂತರ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ (Hubballi) ನವನಗರದ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ್ ಗಂಗಾಧರ್ ಎಂಬವರ ಮರ್ಮಾಂಗಕ್ಕೆ ಕತ್ತರಿ ಹಾಕಲು 11 ಜನರು ಮುಂದಾಗಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹ್ಮದ್ ಇಟ್ಬಾಲ್, ರಫಿಕ್, ಶಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಶ್ರೀಧರ್ ದೂರು ದಾಖಲಿಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಶ್ರೀಧರ್ ಅವರನ್ನು ಬೆಂಗಳೂರಿಗೆ (Bengaluru) ಕರೆದುಕೊಂಡು ಹೋಗಿದ್ದಂತೆ.


ಬೆಂಗಳೂರು ನಗರದ ಬನಶಂಕರಿಯ ಮಸೀದಿಯೊಂದರಲ್ಲಿ (Mosque, Banashankari) ಬಲವಂತವಾಗಿ ಬಂಧಿಸಿಟ್ಟಿದ್ದರೆಂಬ ಮಾಹಿತಿಯನ್ನು ಶ್ರೀಧರ್ ಹಂಚಿಕೊಂಡಿದ್ದಾರೆ.


ಮತಾಂತರದ ಬಗ್ಗೆ ಬಲವಂತವಾಗಿ ಸಹಿ


ನಂತರ ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮನವೊಲಿಕೆ ಮಾಡಿ ಮರ್ಮಾಂಗದ ತುದಿ ಕತ್ತರಿಸಿ, ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎಂದು ಶ್ರೀಧರ್ ಆರೋಪಿಸಿದ್ದಾರೆ. ಮತಾಂತರದ ಬಗ್ಗೆ ಬಾಂಡ್ ಪೇಪರ್​​ನಲ್ಲಿ ಶ್ರೀಧರ್ ಅವರ ಸಹಿ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.


Man being forcibly converted to Islam complaint filed in hubballi
ಕಿಮ್ಸ್


ತಿರುಪತಿಯಲ್ಲಿ ತರಬೇತಿ


ಬೆಂಗಳೂರಿನಿಂದ ತಿರುಪತಿಗೆ ಕರೆದೊಯ್ದು ಮುಸ್ಲಿಂ ಧರ್ಮದ ಪ್ರಾರ್ಥನೆ, ಇತರ ಪದ್ಧತಿಗಳ ಕುರಿತು ತರಬೇತಿ ನೀಡಲಾಗಿತ್ತಂತೆ. ಪ್ರತಿವರ್ಷ ಮೂವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಂತೆ ಶ್ರೀಧರ್​ಗೆ ತಾಕೀತು ಮಾಡಿದ್ದಾರಂತೆ.


ಕೈಯಲ್ಲಿ ಪಿಸ್ತೂಲ್ ಹಿಡಿಸಿ ಬೆದರಿಕೆ


ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟುಭಯೋತ್ಪಾದಕನೆಂದು ಬಿಂಬಿಸುವುದಾಗಿ ಆರೋಪಿಗಳು ಹೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಹುಬ್ಬಳ್ಳಿಗೆ ಬಂದಾಗ ಅಪರಿಚಿತನಿಂದ ಹಲ್ಲೆ


ಯವತಿಯೊಬ್ಬಳನ್ನು ಭೇಟಿಯಾಗಲು ಹುಬ್ಬಳ್ಳಿಗೆ ಬಂದಾಗ ಬೈರಿದೇವರಕೊಪ್ಪದಲ್ಲಿ ಅಪರಿಚಿತರಿಂದ ಶ್ರೀಧರ್ ಮೇಲೆ ಹಲ್ಲೆ ನಡೆದಿದೆ. ಸದ್ಯ ಶ್ರೀಧರ್ ಹುಬ್ಬಳ್ಳಿಯ ಕಿಮ್ಸ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹಿಂದಿನ ಘಟನೆಯಿಂದ ಬೇಸತ್ತು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Man being forcibly converted to Islam complaint filed in hubballi
ಹುಬ್ಬಳ್ಳಿ


ಇದನ್ನೂ ಓದಿ:  House Robbery: ಮದುವೆ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಬಂದು ಮನೆಯನ್ನೇ ದೋಚಿದ್ರು!


ಹಿಂದೂ ಪತ್ನಿಯನ್ನು ಕೊಚ್ಚಿದ ಇಜಾಜ್, ವಿವಾದಾತ್ಮಕ ಹೇಳಿಕೆ ನೀಡಿದ ಮುತಾಲಿಕ್


ಗದಗ ದಲ್ಲಿ ನಡೆದ ಗೃಹಿಣಿ ಕೊಲೆ ಯತ್ನ (Murder Attempt) ಪ್ರಕರಣ ದಿನ ಕಳೆದಂತೆ ರಾಜಕೀಯ (Politics) ಸ್ವರೂಪ ಪಡೆಯಲಾರಂಭಿಸಿದೆ. ಪ್ರೀತಿ ಮಾಡಿ, ಮದುವೆಯಾಗಿ ಈ ರೀತಿ ಹಿಂಸೆ ಕೊಡ್ತಿರೋದ್ರ ಹಿಂದೆ ಲವ್ ಜಿಹಾದ್ (Love Jihad) ಷಡ್ಯಂತ್ರವಿದೆ ಎಂದು ಆರೋಪಿಸಿರೋ ಪ್ರಮೋದ ಮುತಾಲಿಕ್ (Pramod Muthalik), ಆರೋಪಿ ಒಂದು ವೇಳೆ ಜೈಲಿನಿಂದ ಹೊರ ಬಂದ್ರೆ ನಾವೇ ಕೊಚ್ಚಿ ಹಾಕ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರೋಪಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಲಾಗಿದೆ.


ಪ್ರೀತಿಸಿ ಮದುವೆಯಾಗಿದ್ದ ಜೋಡಿ


ಇಜಾಜ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಅಪೂರ್ವಳಿಗೆ ಒಂದು ಮಗುವೂ ಇದೆ. ಇಜಾಜ್ ಗೆ ಈಗಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದರು ಎಂಬ ಮಾಹಿತಿ ಗೊತ್ತಾಗಿತ್ತು. ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ರಿಂದ ಕುಪಿತಗೊಂಡು ಇಜಾರ್ಜ್ ಅಪೂರ್ವಳ ಕೊಲೆಗೆ ಯತ್ನಿಸಿದ್ದ


ಇದನ್ನೂ ಓದಿ:  Gadag: ಹಾಡಹಗಲೇ ಪತ್ನಿ ಮೇಲೆ ಡೆಡ್ಲಿ ಅಟ್ಯಾಕ್, 23 ಬಾರಿ ಮನಸೋ ಇಚ್ಚೆ ಮಚ್ಚಿನಿಂದ ಇರಿದು ಹಲ್ಲೆ


ಹುಬ್ಬಳ್ಳಿಯಲ್ಲಿ ಮಹಿಳೆಯ ಬರ್ಬರ ಹತ್ಯೆ:


ರೌಡಿಶೀಟರ್ ಕೊಲೆ ಹಸಿರಾಗಿರುವಾಗಲೇ, ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರವಾಗಿ ಹತ್ಯೆಗೈದಿರೋ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ. ಸುಮಾ ಎನ್ನುವಾಕೆಯೇ ಕೊಲೆಯಾದ ಮಹಿಳೆ. ದಾವಣಗೆರೆಯ ಸುಮಾ ಹಾಗೂ ಬಳ್ಳಾರಿ ಮೂಲದ ರಾಮಣ್ಣ ದಂಪತಿಗಳಾಗಿದ್ದು, ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ಪತಿ ರಾಮಣ್ಣ ನೇ ಕುಡಿದ ಮತ್ತಿನಲ್ಲಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

Published by:Mahmadrafik K
First published: