RSS ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ, ಓರ್ವ ಆರೋಪಿ ಅರೆಸ್ಟ್! ಇತ್ತ ಬೆಂಗಳೂರಲ್ಲೂ ಬಿಗಿ ಭದ್ರತೆ

ಆರ್‌ಎಸ್ಎಸ್‌ ಕಚೇರಿಗಳನ್ನು ಸ್ಫೋಟಿಸುತ್ತೇವೆ ಅಂತ ಅನಾಮಧೇಯ ವ್ಯಕ್ತಿಯೊಬ್ಬ ವಾಟ್ಸಾಪ್‌ಗಳಲ್ಲಿ ಸಂದೇಶ ಹರಿ ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಲಕ್ನೋ, ಕರ್ನಾಟಕದ ಆರ್‌ಎಸ್‌ಎಸ್‌ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಇನ್ನು ಈ ಅನಾಮಧೇಯ ಕರೆಯ ಜಾಡು ಹಿಡಿದ ಪೊಲೀಸರು, ಇದೀಗ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.  

ಆರ್​ಎಸ್​ಎಸ್​ ಸಂಗ್ರಹ ಚಿತ್ರ

ಆರ್​ಎಸ್​ಎಸ್​ ಸಂಗ್ರಹ ಚಿತ್ರ

  • Share this:
ತಮಿಳುನಾಡು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಚೇರಿಗಳನ್ನು (Office) ಸ್ಫೋಟಿಸುವುದಾಗಿ (Blast) ಬೆದರಿಕೆ (threat) ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ (Uttar Pradesh) ಲಕ್ನೋ (Lucknow) ಹಾಗೂ ಕರ್ನಾಟಕದಲ್ಲಿರುವ (Karnataka) ಆರ್‌ಎಸ್ಎಸ್‌ ಕಚೇರಿಗಳನ್ನು ಸ್ಫೋಟಿಸುತ್ತೇವೆ ಅಂತ ಅನಾಮಧೇಯ ವ್ಯಕ್ತಿಯೊಬ್ಬ (Unknown Person) ವಾಟ್ಸಾಪ್‌ಗಳಲ್ಲಿ (WhatsApp) ಸಂದೇಶ (Message) ಹರಿ ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಲಕ್ನೋ, ಕರ್ನಾಟಕದ ಆರ್‌ಎಸ್‌ಎಸ್‌ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಬಿಗಿ ಭದ್ರತೆ (Security) ಹೆಚ್ಚಿಸಲಾಗಿತ್ತು. ಇನ್ನು ಈ ಅನಾಮಧೇಯ ಕರೆಯ ಜಾಡು ಹಿಡಿದ ಪೊಲೀಸರು (Police), ಇದೀಗ ತಮಿಳುನಾಡಲ್ಲಿ (Tamil Nadu) ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.  

ಆರ್‌ಎಸ್ಎಸ್‌ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ

ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿಗಳನ್ನು ಸ್ಫೋಟಿಸಲಾಗುವುದು ಎಂದು ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಸಂದೇಶ ಕಳಿಸಿದ್ದಕ್ಕಾಗಿ ವ್ಯಕ್ತಿ ಒಬ್ಬನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ಸ್ಥಳಗಳಿಗೆ ಬಾಂಬ್ ಬೆದರಿಕೆ

ಉತ್ತರ ಪ್ರದೇಶದ ರಾಜಧಾನಿ ಲಖನೌದ ಅಲಿಗಂಜ್‌ನಲ್ಲಿರುವ ಆರ್‌ಎಸ್‌ಎಸ್ ಕಚೇರಿ ಸೇರಿದಂತೆ ಕರ್ನಾಟಕದ 4 ಸ್ಥಳಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ.ನೀಲಕಂಠ ಮಣಿ ಪೂಜಾರಿ ಅವರಿಗೆ ವಾಟ್ಸಪ್ ನಲ್ಲಿ ಈ ಬೆದರಿಕೆ ಸಂದೇಶ ಬಂದಿತ್ತು.

ಇದನ್ನೂ ಓದಿ: Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು

ಮೂರು ಭಾಷೆಗಳಲ್ಲಿ ಬೆದರಿಕೆ ಸಂದೇಶ

ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಮೂರು ಭಾಷೆಗಳಲ್ಲಿ ಕಳುಹಿಸಲಾದ ಸಂದೇಶದಲ್ಲಿ ಲಖನೌ, ನವಾಬ್‌ಗಂಜ್ ಸೇರಿದಂತೆ ಕರ್ನಾಟಕದ 4 ಸ್ಥಳಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಬಳಿಕ ನೀಲಕಂಠ ಅವರು ಮಡಿಯಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಂಧಿತ ಆರೋಪಿ


ತಮಿಳುನಾಡಲ್ಲಿ ಆರೋಪಿ ಬಂಧನ

ಉತ್ತರ ಪ್ರದೇಶ ಪೊಲೀಸರ ಸುಳಿವಿನ ಮೇರೆಗೆ ತಮಿಳುನಾಡು ಪೊಲೀಸರು ಪುದುಕೊಟ್ಟೈ ಜಿಲ್ಲೆಯಲ್ಲಿ ಎಟಿಎಸ್ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ರಾಜ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.

ಸೈಬರ್ ಸೆಲ್‌ ಸಹಾಯದಿಂದ ಆರೋಪಿ ಪತ್ತೆ

ಬಂಧಿತ ವ್ಯಕ್ತಿ ಲಕ್ನೋ, ಉನ್ನಾವ್ ಮತ್ತು ಉತ್ತರ ಪ್ರದೇಶದ ಇತರ ಪಟ್ಟಣಗಳಲ್ಲಿ ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಸೈಬರ್ ಸೆಲ್ ಸಹಾಯದಿಂದ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಲು ಬಳಸಿದ ಸಂಖ್ಯೆಯನ್ನು ಪತ್ತೆಹಚ್ಚಲಾಗಿದೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.

4 ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸೋ ಬೆದರಿಕೆ

ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಮೂರು ಭಾಷೆಗಳಲ್ಲಿ ಕಳುಹಿಸಲಾದ ಸಂದೇಶದಲ್ಲಿ ಲಖನೌ, ನವಾಬ್‌ಗಂಜ್ ಸೇರಿದಂತೆ ಕರ್ನಾಟಕದ 4 ಸ್ಥಳಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಬಳಿಕ ನೀಲಕಂಠ ಅವರು ಮಡಿಯಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತಮಿಳುನಾಡಿನಲ್ಲಿ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆಂದು ಯುಪಿ ಎಟಿಎಸ್ ತಿಳಿಸಿದೆ.

ಇದನ್ನೂ ಓದಿ: Evening Digest: ಚಡ್ಡಿ ತೆಗೆದುಕೊಂಡು ಹೋದವ್ರು ಅಂದರ್, ಎಎಪಿ ಸೇರಿದ ಚಂದ್ರು! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ ಓದಿ

ಆರ್‌ಎಸ್ಎಸ್‌ ಕಚೇರಿಗಳಿಗೆ ಪೊಲೀಸ್ ಬಿಗಿ ಭದ್ರತೆ

ಇನ್ನು ಬೆದರಿಕೆ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯದ ಪ್ರಮುಖ ಆರ್‌ಎಸ್‌ಎಸ್‌ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನು ಕರ್ನಾಟಕ ರಾಜ್ಯದ  ಎಲ್ಲಾ ಆರ್‌ಎಸ್‌ಎಸ್ ಕಚೇರಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆಯನ್ನು ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಆರ್‌ಎಸ್‌ಎಸ್ ಕಚೇರಿಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
Published by:Annappa Achari
First published: