Crie ಹುಬ್ಬಳ್ಳಿ: ಹಸುವಿನ ಕರು (Calf) ಜೊತೆ ವ್ಯಕ್ತಿಯೋರ್ವ ಲೈಂಗಿಕ ಕ್ರಿಯೆ ನಡೆಸಿದ ಅಮಾನವೀಯ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ (Byahatti village, Hubballi) ಗ್ರಾಮದಲ್ಲಿ ನಡೆದಿದೆ. ಮಾರುತಿ ಎಂಬವರಿಗೆ ಸೇರಿದ್ದ ಕರುವಿನ ಮೇಲೆ ಅದೇ ಗ್ರಾಮದ ಬುಡ್ಡಸಾಬ್ ಎಂಬಾತ ಅತ್ಯಾಚಾರಗೈದಿದ್ದಾನೆ. ಕರುವಿನ ಮೇಲೆ ಅತ್ಯಾಚಾರ ಮಾಡುವುದನ್ನು ಕಂಡು ಮಕ್ಕಳು ಗಾಬರಿಯಿಂದ ಕೂಗಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರು ವಿಕೃತ ಕಾಮಿ ಬುಡ್ಡೇಸಾಬ್ನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ.
ಚಲಿಸುವ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಪಾರ್ಕ್ ನಲ್ಲಿ (Park) ಕುಳಿತಿದ್ದ ಯುವತಿಯನ್ನು ಕಿಡ್ನಾಪ್ (Kidnapped) ಮಾಡಿದ ಪರಿಚಿತರು, ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮಾರ್ಚ್ 25ರಂದು ಘಟನೆ ನಡೆದಿದ್ದು, ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಮಾರ್ಚ್ 25ರ ಶನಿವಾರ ರಾತ್ರಿ 9:30 ರ ಸಮಯದಲ್ಲಿ ಬೆಂಗಳೂರಿನ ಹೃದಯ ಭಾಗದ ಕೋರಮಂಗಲದ (Koramangala) ನ್ಯಾಷನಲ್ ಗೇಮ್ಸ್ ವಿಲೇಜ್ (National Games Village) ಬಳಿಯ ಪಾರ್ಕ್ನಲ್ಲಿ ಕುಳಿತಿದ್ದ ಯುವತಿ ಇದೀಗ ನರಕಯಾತನೆ ಅನುಭವಿಸಿದ್ದಾಳೆ.
ಪರಿಚಿತ ನಾಲ್ವರು ಕಾಮುಕರು ಆಕೆಯ ಮೇಲೆ ಮೃಗದಂತೆ ಎರಗಿ ರಾತ್ರಿಯಿಡಿ ಅತ್ಯಾಚಾರ ಎಸಗಿ ನಡುರಸ್ತೆಯಲ್ಲೇ ದೂಡಿ ಹೋಗಿದ್ದಾರೆ.
ಪಾರ್ಕ್ನಿಂದ ಕಿಡ್ನಾಪ್
ಪೊಲೀಸರು ನೀಡಿರುವ ಮಾಹಿತಿಯಂತೆ ಕೆಎ 01 ಎಂಬಿ 6169 ನಂಬರಿನ ಮಾರುತಿ ಸುಜುಕಿ 800 ಕಾರು ಘಟನೆಯ ಭೀಕರತೆ ಹೇಳುತ್ತಿದೆ. ಹರಿದಿರುವ ಕಾರಿನ ಸೀಟ್ ಗಳು ಅತ್ಯಾಚಾರದ ಭಯಾನಕತೆಯನ್ನು ಬಿಚ್ಚಿಡುತ್ತಿದೆ. ಮಾರ್ಚ್ 25ರ ರಾತ್ರಿ ಯುವತಿಯೊಬ್ಬಳು ನ್ಯಾಷನಲ್ ಗೇಮ್ಸ್ ವಿಲೇಜ್ನ ಪಾರ್ಕ್ನಲ್ಲಿ ಸ್ನೇಹಿತನ ಜೊತೆಗೆ ಕುಳಿತಿದ್ದಳು.
ಇದನ್ನೂ ಓದಿ: Dowry: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ; ಕಲಬುರಗಿಯಲ್ಲಿ ತಂದೆಯಿಂದಲೇ ಮಗಳ ಅತ್ಯಾಚಾರ
ಆಗ ಅಲ್ಲಿಗೆ ಆಗಮಿಸಿದ್ದ ಸತೀಶ್ ಎಂಬಾತ ಯುವತಿ ಜೊತೆ ಮಾತನಾಡುತ್ತಾ ಸ್ನೇಹಿತರಾದ, ವಿಜಯ್, ಶ್ರೀಧರ್, ಕಿರಣ್ ಕರೆಸಿಕೊಂಡು ಏಕಾಏಕಿ ಯುವತಿಯ ಬಾಯಿಮುಚ್ಚಿ ಕಾರಲ್ಲಿ ಹಾಕಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ