'ಬೀದಿಗೆ ಬಂದ್ರೆ ನೀನು, ನಿನ್ನ ಮನೆಗೆ ಬರುವೆ ನಾನು' ಎಂದು ರಸ್ತೆ ಮೇಲೆ ಬರೆದರೂ ಬೀದಿ ಅಡ್ಡಾಡುವುದನ್ನು ತಪ್ಪಿಸದ ಜನ

ಇನ್ನು ದೇಶದಾದ್ಯಂತ ಲಾಕ್ ಡೌನ್ ಆದೇಶವಿದ್ದರೂ ಜನರು ಓಡಾಡೋದು ಮಾತ್ರ ನಿಂತಿಲ್ಲ. ಹೀಗಾಗಿ ಅವಶ್ಯಕವಾಗಿ ಓಡಾಡುವ ಸವಾರರ ಗಮನ ಸೆಳೆಯಲು ಈ ಪ್ರಯತ್ನ ಮಾಡಿರುವುದಾಗಿ ಮಾಲೂರು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೂರಿನಲ್ಲಿ ಪುರಸಭೆ ಅಧಿಕಾರಿಗಳು ರಸ್ತೆ ಮೇಲೆ ಬರೆದಿರುವ ಎಚ್ಚರಿಕೆ ಸಂದೇಶ.

ಮಾಲೂರಿನಲ್ಲಿ ಪುರಸಭೆ ಅಧಿಕಾರಿಗಳು ರಸ್ತೆ ಮೇಲೆ ಬರೆದಿರುವ ಎಚ್ಚರಿಕೆ ಸಂದೇಶ.

 • Share this:
  ಕೋಲಾರ: ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡದಂತೆ ದೇಶವ್ಯಾಪಿ 21 ದಿನಗಳ ಕಾಲ ಸುದೀರ್ಘ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ  ಜನರು ಹೊರಗೆ ಓಡಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಕೋಲಾರ ಜಿಲ್ಲಾಡಳಿತ ಕೂಡ ಅನಗತ್ಯವಾಗಿ ಜನರು ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತಿದೆ.

  ಈಗಾಗಲೇ ಪೊಲೀಸ್ ಇಲಾಖೆಯಿಂದ ಅಡ್ಡಾದಿಡ್ಡಿಯಾಗಿ ಓಡಾಡ್ತಿದ್ದ ಬೈಕ್ ಗಳನ್ನ ಜಪ್ತಿ ಮಾಡಿದ್ದು ಗಂಭೀರ ಎಚ್ಚರಿಕೆ ನೀಡಿ ವಾಪಸ್ ನೀಡಲಾಗಿದೆ. ಆದರೂ ಕೋಲಾರ ಜಿಲ್ಲೆಯಲ್ಲಿ ಎಂದಿನಂತೆ ಬೆಳಗ್ಗೆ ಸಂಜೆ ದ್ವಿಚಕ್ರ ವಾಹನಗಳು ಓಡಾಡುವ ದೃಶ್ಯಗಳು ಮಾಮೂಲಿಯಾಗಿ ಕಂಡುಬಂದಿದೆ. ಹೀಗಾಗಿ ಜಿಲ್ಲೆಯ ಮಾಲೂರು ಪಟ್ಟಣದ ಪುರಸಭೆ ವತಿಯಿಂದ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಾಹನ ಸವಾರರಿಗೆ ರಸ್ತೆಗಿಳಿಯದಂತೆ ಅರಿವು ಮೂಡಿಸಲಾಗುತ್ತಿದೆ.

  ಮಾಲೂರು ಪಟ್ಟಣದ ಪ್ರಮುಖ ಬೀದಿಗಳಾದ ಮಾರಿಕಾಂಬಾ ವೃತ್ತ, ಬಾಲಾಜಿ ವೃತ್ತ, ಮಾಸ್ತಿ ಸರ್ಕಲ್ ನಲ್ಲಿ ಕೊರೋನಾ ವೈರಸ್ ಆಕೃತಿಯ ಬೃಹತ್ ಚಿತ್ರಗಳನ್ನ ಬಿಡಿಸಲಾಗಿದ್ದು, ಇದರ ಜೊತೆಗೆ "ಬೀದಿಗೆ ಬಂದ್ರೆ ನೀನು, ನಿನ್ನ ಮನೆಗೆ ಬರುವೆ ನಾನು" ಎಂಬ ಎಚ್ಚರಿಕೆಯ ಸಂದೇಶವನ್ನು ಬರೆಸಲಾಗಿದೆ. ಮಾಲೂರು ಪಟ್ಟಣದ ಚಿತ್ರಕಲಾಕಾರರು ನೆನ್ನೆಯಿಂದ ಚಿತ್ರಗಳನ್ನು ಬಿಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ. ಇನ್ನು ದೇಶದಾದ್ಯಂತ ಲಾಕ್ ಡೌನ್ ಆದೇಶವಿದ್ದರೂ ಜನರು ಓಡಾಡೋದು ಮಾತ್ರ ನಿಂತಿಲ್ಲ. ಹೀಗಾಗಿ ಅವಶ್ಯಕವಾಗಿ ಓಡಾಡುವ ಸವಾರರ ಗಮನ ಸೆಳೆಯಲು ಈ ಪ್ರಯತ್ನ ಮಾಡಿರುವುದಾಗಿ ಮಾಲೂರು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನು ಓದಿ: ಟ್ಯಾಕ್ಸ್ ಕಟ್ಟಿದ್ದಕ್ಕೂ ಸಾರ್ಥಕ: ಗುಣಮುಖರಾದ ಕೊರೋನಾ ರೋಗಿ ವೆಂಕಟ ರಾಘವನ್ ಅನುಭವಗಳು

  ಎಷ್ಟೇ ಹೇಳಿದರೂ ಕೇರ್ ಮಾಡದ ಸವಾರರು

  ಮಾಲೂರಿನ ಪ್ರಮುಖ ಬೀದಿಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದು ಹಲವು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಎಂದಿನಂತೆ ಬೆಳಗ್ಗೆ ಹಾಗು ಸಂಜೆ ಅನಗತ್ಯವಾಗಿ ಓಡಾಡುವ ದೃಶ್ಯಗಳು ಮಾಲೂರಿನಲ್ಲಿ ಕಂಡುಬಂದಿದೆ. ಈಗಾಗಲೇ ಪೊಲೀಸರು ಲಾಠಿ ರುಚಿಯ ಜೊತೆಗೆ ರಸ್ತೆಯಲ್ಲಿ ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡಿದ್ದಾಗಿದೆ. ಆದರೂ ವಾಹನ ಸಾವಾರರು ಅಲ್ಲಲ್ಲಿ ಓಡಾಟದ ದೃಶ್ಯಗಳು ಕಂಡುಬಂದಿದೆ. ಸದ್ಯ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಯಾವುದು ದಾಖಲಾಗಿಲ್ಲ. ಅಧಿಕಾರಿಗಳು ಲಾಕ್ ಡೌನ್ ಎಚ್ಚರಿಕೆಯನ್ನು ಪಾಲಿಸಲು ಹಲವು ಕ್ರಮಗಳನ್ನ ಜರುಗಿಸಿದ್ದು ಸಾರ್ವಜನಿಕರು ವೈರಸ್ ಸೋಂಕಿನ ಗಂಭೀರತೆ ಅರಿಯದೆ ಓಡಾಟ ನಡೆಸಿದರೆ ಅಗತ್ಯ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಎಚ್ಚರಿಕೆ ನೀಡಿದ್ದಾರೆ.

  ವರದಿ: ರಘುರಾಜ್

   
  First published: