ಮಾಲೂರಿಗೆ ಕೆಸಿ ವ್ಯಾಲಿ ಯೋಜನೆ ನೀರು ಹರಿಸುವಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಕೆವೈ ನಂಜೇಗೌಡ

ಕೆಲವು ತಿಂಗಳ ಹಿಂದೆ ಕೋಲಾರದ ನರಸಾಪುರ ಕೆರೆಯಿಂದ ಮಾಲೂರು ತಾಲೂಕಿನ ಭಾಗವಾದ 60 ಎಮ್ ಎಲ್ ಡಿ ನೀರನ್ನ ಹರಿಸಲು ಅಧಿಕೃತವಾಗಿ ಚಾಲನೆ ನೀಡಿದ್ದರು.  ಈಗ ಒಪ್ಪಂದದಂತೆ ಮಾಲೂರಿಗೆ ನೀರು ಹರಿಸದೆ  ತಾರತಮ್ಯ ಮಾಡಲಾಗುತ್ತಿದೆ

ನರಸಾಪುರ ಕೆರೆ ವೀಕ್ಷಿಸಿದ ಶಾಸಕರು

ನರಸಾಪುರ ಕೆರೆ ವೀಕ್ಷಿಸಿದ ಶಾಸಕರು

 • Share this:
  ಕೋಲಾರ (ಫೆ.26): ಜಿಲ್ಲೆಯ ಪಾಲಿಗೆ ವರದಾನವಾಗಿರೊ ಕೆಸಿ ವ್ಯಾಲಿ ಯೋಜನೆ ನೀರನ್ನು ಮಾಲೂರಿಗೆ ಹರಿಸುವಲ್ಲಿ ತಾರತಮ್ಯ ಮಾಡಲಾಗಿದೆ. ಒಪ್ಪಂದದಂತೆ ಇನ್ನು ಐದು ದಿನಗಳಲ್ಲಿ ನೀರು ಹರಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಶಾಸಕ ಕೆವೈ ನಂಜೇಗೌಡ ಎಚ್ಚರಿಕೆ ನೀಡಿದ್ದಾರೆ. 

  ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬೆಳ್ಳಂದೂರು ಕೆರೆಯಿಂದ ಕೋಲಾರದ ಲಕ್ಷ್ಮೀಸಾಗರ ಕೆರೆಗೆ 290 ಎಮ್​ಎಲ್​ಡಿ ನೀರನ್ನ ಪ್ರತಿದಿನ ಎರಡು ಹಂತದಲ್ಲಿ ಶುದ್ದೀಕರಿಸಿ  ಹರಿಸಲಾಗುತ್ತಿದೆ. ಇದಾದ ಬಳಿಕ ನರಸಾಪುರ ಕೆರೆ ಮೂಲಕ ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರ ತಾಲೂಕಿನ ಕೆರೆಗಳಿಗೆ ನೀರನ್ನು ಪಂಪ್ ಹೌಸ್ ಮೂಲಕ ಹರಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಕೋಲಾರದ ನರಸಾಪುರ ಕೆರೆಯಿಂದ ಮಾಲೂರು ತಾಲೂಕಿನ ಭಾಗಕ್ಕೆ 60 ಎಮ್​ಎಲ್​ಡಿ ನೀರನ್ನ ಹರಿಸಲು ಅಧಿಕೃತವಾಗಿ ಚಾಲನೆ ನೀಡಿದ್ದರು.  ಈಗ ಒಪ್ಪಂದದಂತೆ ಮಾಲೂರಿಗೆ ನೀರು ಹರಿಸದೆ  ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

  ನರಸಾಪುರ ಕೆರೆಯಿಂದ ಮಾಲೂರಿನ ಶಿವಾರಪಟ್ಟಣ ಕೆರೆ ತುಂಬಿ ಅಲ್ಲಿಂದ ನೀರನ್ನ ಪಂಪ್ ಮಾಡಲು ಪಂಪ್ ಹೌಸ್ ಸಹ ನಿರ್ಮಾಣ ಮಾಡಲಾಗಿದೆ. ಆದರೆ ನಿಗದಿತ ಪ್ರಮಾಣದಲ್ಲಿ ನೀರು ಇಲ್ಲಿಯವರೆಗೂ ಬಂದಿಲ್ಲ ಎಂದು ದೂರಿದರು.

  ಮಾಲೂರು ಕ್ಷೇತ್ರದ ಜನರು ನೀರಿಲ್ಲದೆ ಪರಿತಪಿಸುವಂತೆ ಆಗಿದೆ. ಇನ್ನು ಐದು ದಿನದಲ್ಲಿ ತಾಲೂಕಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ 10 ಸಾವಿರು ರೈತರೊಂದಿಗೆ ಜಿಲ್ಲಾಧಿಕಾರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೆ.ವೈ. ನಂಜೇಗೌಡ ಎಚ್ಚರಿಕೆ ನೀಡಿದರು.

  ಇದನ್ನು ಓದಿ: ಕೆ ಸುಧಾಕರ್​ ಸಚಿವರಾಗುತ್ತಿದ್ದಂತೆ ಕಂದವಾರ ಕರೆಗೆ ಹರಿದ ಎಚ್​ಎನ್​ ವ್ಯಾಲಿ ನೀರು; ಜಿಲ್ಲೆಯ ಜನರಲ್ಲಿ ಸಂತಸ

  ಇದೇ ವೇಳೆ, ನರಸಾಪುರ ಕೆರೆ ಪಂಪ್ ಹೌಸ್​ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಅವರು,  ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮಾಲೂರು ತಾಲೂಕಿಗೆ ಘೋಷಣೆಯಾದ ಅನುದಾನವನ್ನು ಸರ್ಕಾರ ಕಡಿತಗೊಳಿಸಿತ್ತು. ಈಗ ನೀರು ಹರಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ದ ಬೇಸರ ಹೊರಹಾಕಿದರು.

  (ವರದಿ: ರಘುರಾಜ್​)
  First published: