ಕೋಲಾರ: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಲೂರಿನ ರಾಮೇಗೌಡ

ಮಾಜಿ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡರ ವಿರುದ್ದ ಕುಮಾರಸ್ವಾಮಿ ಹೆಸರೇಳದೆ ಕಿಡಿಕಾರಿದರು. ಸಣ್ಣ ವಯಸ್ಸಿನಲ್ಲೆ ಶಾಸಕರಾದರೂ ಅದನ್ನ ಉಳಿಸಿಕೊಳ್ಳಲಿಲ್ಲ, ನಮ್ಮ ಮಾತಿಗೆ ಕಿವಿಗೊಡದೆ ಸಿಕ್ಕ ಅವಕಾಶ ಕಳೆದುಕೊಂಡಿದ್ದಾರೆ. ಇನ್ನೂ 20 ವರ್ಷ ರಾಜಕೀಯ ಜೀವನ ಇರುತ್ತಿತ್ತು ಎಂದು ಮಂಜುನಾಥ್ ಗೌಡರ ಹೆಸರೇಳದೆ ಕಿಡಿಕಾರಿದರು.

ಜೆಡಿಎಸ್​ ಸೇರ್ಪಡೆಯಾದ ಮಾಲೂರಿನ ರಾಮೇಗೌಡ

ಜೆಡಿಎಸ್​ ಸೇರ್ಪಡೆಯಾದ ಮಾಲೂರಿನ ರಾಮೇಗೌಡ

  • Share this:
ಕೋಲಾರ(ಮಾ.01): ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಪಾಳಯ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದ, ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಮುಖಂಡ ಜಿಇ ರಾಮೇಗೌಡ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.  ರಾಮನಗರದ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದು, ಮಾಲೂರು ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಾಡಲು ಕುಮಾರಸ್ವಾಮಿ ಅವರು ಒಪ್ಪಿಗೆಯನ್ನೂ ನೀಡಿದ್ದಾರೆ. ಜಿಲ್ಲೆಯ ಎಮ್ ಎಲ್ ಸಿ ಗೋವಿಂದರಾಜು, ಶಾಸಕ ಜೆಕೆ ಕೃಷ್ಣಾರೆಡ್ಡಿ, ಚೌಡರೆಡ್ಡಿ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿರುವ ಕುಮಾರಸ್ವಾಮಿ ಎಲ್ಲರ ಸಮಕ್ಷಮದಲ್ಲಿ, ಮುಂದಿನ ಜೆಡಿಎಸ್ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ.

ರಾಮೇಗೌಡರಿಗೆ ಹೊಗಳಿಕೆ, ಮಾಜಿ ಶಾಸಕ ಮಂಜುನಾಥ್ ಗೌಡರನ್ನ ತೆಗಳಿದ ಎಚ್. ಡಿ. ಕುಮಾರಸ್ವಾಮಿ

ರಾಮೇಗೌಡರನ್ನ ಪಕ್ಷಕ್ಕೆ ಬರಮಾಡಿಕೊಂಡು ಎಲ್ಲರನ್ನು ಉದ್ದೇಶಿಸಿ ಮಾತನಾಡಿದ, ಮಾಜಿ ಸಿಎಂ ಕುಮಾರಸ್ವಾಮಿ, ರಾಮೇಗೌಡ 2008 ರಲ್ಲೇ ಜೆಡಿಎಸ್ ಗೆ ಬರಬೇಕಿದ್ದವರು. ಒಳ್ಳೆಯ ನಡತೆ ವಿನಯತೆ ಉಳ್ಳವರು. ಎಲ್ಲಾ ಜಿಲ್ಲಾ ಮುಖಂಡರು ಒಕ್ಕೂರಲು ನಿರ್ಧಾರ ಕೈಗೊಂಡು ನಿರ್ಧಾರ ತಿಳಿಸಿದರೆ, ನನ್ನದೇನು ಅಭ್ಯಂತರ ಇರಲ್ಲ. ಪಕ್ಷದ ಕಾರ್ಯಕರ್ತರಿಂದ ಜೆಡಿಎಸ್ ಉಳಿದಿದೆ ಎಂದು ಹೇಳಿದರು.

ಸಿರಿಧಾನ್ಯದ ಬಿಸಿಯೂಟ ನೀಡುವ ಬಗ್ಗೆ ಬಜೆಟ್‌ನಲ್ಲಿ ಸೇರಿಸಲು ಸಿಎಂಗೆ ಒತ್ತಾಯ ಮಾಡಿದ್ದೇನೆ; ಬಿ.ಸಿ. ಪಾಟೀಲ್

ಇನ್ನು ಇದೇ ವೇಳೆ ಮಾಜಿ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡರ ವಿರುದ್ದ ಕುಮಾರಸ್ವಾಮಿ ಹೆಸರೇಳದೆ ಕಿಡಿಕಾರಿದರು. ಸಣ್ಣ ವಯಸ್ಸಿನಲ್ಲೆ ಶಾಸಕರಾದರೂ ಅದನ್ನ ಉಳಿಸಿಕೊಳ್ಳಲಿಲ್ಲ, ನಮ್ಮ ಮಾತಿಗೆ ಕಿವಿಗೊಡದೆ ಸಿಕ್ಕ ಅವಕಾಶ ಕಳೆದುಕೊಂಡಿದ್ದಾರೆ. ಇನ್ನೂ 20 ವರ್ಷ ರಾಜಕೀಯ ಜೀವನ ಇರುತ್ತಿತ್ತು ಎಂದು ಮಂಜುನಾಥ್ ಗೌಡರ ಹೆಸರೇಳದೆ ಕಿಡಿಕಾರಿದರು.

ಇನ್ನು ಮಂಜುನಾಥ್ ಗೌಡರನ್ನ ಮತ್ತೊಮ್ಮೆ ಪಕ್ಷಕ್ಕೆ ಆಹ್ವಾನಿಸುವ ಮಾತಿಲ್ಲ ಎಂದು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಮಾಲೂರು ಹಾಲಿ ಶಾಸಕ ನಂಜೆಗೌಡ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾದರೂ, ಜೆಡಿಎಸ್ ಟಿಕೆಟ್ ಮಾತ್ರ ರಾಮೇಗೌಡರಿಗೂ ಕೊಡುವುದಾಗಿ ತಿಳಿಸಿದ್ದಾರೆ.

ನಂಜೇಗೌಡರು ಕಾಂಗ್ರೆಸ್ ಬಿಟ್ಟು ಬರುವ ಮಾತಿಲ್ಲ ಆದರೂ ಅವರು ನನ್ನ ಸ್ನೇಹಿತರು ಎಂದಿರುವ ಕುಮಾರಸ್ವಾಮಿ, ರಾಜಕೀಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು ಎಲ್ಲದಕ್ಕಿಂತಲೂ ಹೆಚ್ಚೆಂದು ಹೇಳಿದ್ದಾರೆ

ಇಂದು ಕುರುಡುಮಲೆ ದೇಗುಲಕ್ಕೆ ಭೇಟಿ ನೀಡಲಿರುವ ಕೈ ಪಡೆ

ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಚುನಾವಣೆ ಹಿನ್ನಲೆ, ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಇಂದು ಕೋಲಾರದ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣೆ ಕಾರ್ಯಕ್ರಮಗಳಿಗೆ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಕ್ಕೆ ಕುರುಡುಮಲೆ ವಿನಾಯಕ ದೇಗುಲಕ್ಕೆ ಭೇಟಿ ನೀಡಿ, ಮಾರ್ಚ್ 3 ರಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಕಾರ್ಯಕ್ರಮ ಯಶಸ್ವಿಯಾಗಲೆಂದು ಪೂಜೆ ಸಲ್ಲಿಸಲಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್‍ಎ ಮಂಜುನಾಥ್, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಜನರು ರೋಸಿಹೋಗಿದ್ದು, ಕಾಂಗ್ರೆಸ್ ಪರವಾಗಿ ಜನರ ಒಲವು ಹೆಚ್ಚಾಗ್ತಿದೆ, ಈ ಹಿನ್ನಲೆ ಸ್ಥಳೀಯ ಚುನಾವಣೆಗೆ ಕೋಲಾರ ಕಾಂಗ್ರೆಸ್ ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.
Published by:Latha CG
First published: