ಉಡುಪಿ (ಏ.18): ಪ್ರವಾಸದ (Trip) ವೇಳೆ ಈ ಸೆಲ್ಫಿ (Selfie) ಹುಚ್ಚಾಟ ಅನೇಕರನ್ನು ಬಲಿ ಪಡೆದಿದೆ. ಅಪಾಯ ಎಂದು ಗೊತ್ತಿದ್ರು ಅನೇಕರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ. ಇಂತಹದ್ದೆ ಘಟನೆಯೊಂದು ಮಲ್ಪೆ ಬೀಚ್ (Malpe Beach) ಸಮೀಪ ನಡೆದಿದೆ. ಸೈಂಟ್ ಮೇರಿಸ್ (Saint Marys) ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿದ್ದಾರೆ. ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು (College Student) ಪ್ರವಾಸಕ್ಕೆ ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. GKVK ಕೃಷಿ ಕಾಲೇಜಿನ 68 ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ರು.
ಅವರಲ್ಲಿ ಇಬ್ಬರು ಯುವಕರು ಲೈಫ್ ಗಾರ್ಡ್ ಸಿಬ್ಬಂದಿಗಳ ಸೂಚನೆ ಮೀರಿ ಸೆಲ್ಫಿ ತೆಗೆಯಲು ಹೋಗಿದ್ದಾರೆ. ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 21 ವರ್ಷದ ಸತೀಶ್ ಹಾಗೂ 21 ವರ್ಷದ ಸತೀಶ್ ನೀರು ಪಾಲಾಗಿದ್ದಾರೆ. ಓರ್ವ ಯುವಕನ ಶವವನ್ನು ಲೈಫ್ ಗಾರ್ಡ್ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ನೀರು ಪಾಲಾದ ಮತ್ತೊರ್ವ ಯುವಕನ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಕೆಲದಿನಗಳ ಹಿಂದಷ್ಟೆ ಕೇರಳದ ಇಬ್ಬರು ಸಮುದ್ರ ಪಾಲಾಗಿದ್ರು
ಮಲ್ಪೆ ಬೀಚ್ ಬಳಿಯ ಸೇಂಟ್ ಮೇರಿಸ್ ದ್ವೀಪದ ಸಮುದ್ರದಲ್ಲಿ ಮುಳುಗಿ ಮಲ್ಪೆ ಬೀಚ್ ಬಳಿಯ ಸೇಂಟ್ ಮೇರಿಸ್ ದ್ವೀಪದ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿ ನೀರಿಗೆ ಜಾರಿ ಬಿದ್ದಿದ್ದು, ಇದನ್ನು ಕಂಡ ಇತರ ಇಬ್ಬರು ವಿದ್ಯಾರ್ಥಿಗಳು ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಕೇರಳದ ಕೊಟ್ಟಾಯಂ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಗುರುವಾರ ಮಲ್ಪೆ ಬೀಚ್ ಬಳಿಯ ಸೇಂಟ್ ಮೇರಿಸ್ ದ್ವೀಪದ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿದ್ದು, ಮತ್ತೊಬ್ಬರಿಗಾಗಿ ಶೋಧ ನಡೆಯುತ್ತಿದೆ. ಮೃತರನ್ನು ಅಲೆನ್ ರೆಜಿ(22), ಅಮಲ್ ಸಿ ಅನಿಲ್(22) ಮತ್ತು ಆಂಟೋನಿ (21) ಎಂದು ಗುರುತಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿದ್ದು, ಆ್ಯಂಟನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Mangaluru: ಮೀನು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ: ಐವರ ಸಾವು, ಮೂವರು ಗಂಭೀರ
42 ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಮತ್ತು ಅವರ ಅಧ್ಯಾಪಕರು ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಕ್ಕೆ ಬಂದಿದ್ದರು ಮತ್ತು ವಿದ್ಯಾರ್ಥಿಯೊಬ್ಬ ತನ್ನ ಫೋನ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪ್ರವಾಸಿಗರ ಪ್ರವೇಶ ನಿಷೇಧಿಸಿ ಎಚ್ಚರಿಕೆ ಬೋರ್ಡ್ ಹಾಕಲಾಗಿದ್ದ ಹಗ್ಗ ಕಟ್ಟಿದ ಅಪಾಯ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿ ನೀರಿಗೆ ಜಾರಿ ಬಿದ್ದಿದ್ದು, ಇದನ್ನು ಕಂಡ ಇತರ ಇಬ್ಬರು ವಿದ್ಯಾರ್ಥಿಗಳು ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದಾರೆ.
ಪ್ರೀತಿಗಾಗಿ ಮೊಬೈಲ್ ಟವರ್ ಏರಿದ ಪಾಗಲ್ ಪ್ರೇಮಿ
ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಯುವಕನೊಬ್ಬ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಅಡ್ಯಾರು ಎಂಬಲ್ಲಿ ಘಟನೆ ನಡೆದಿದ್ದು, ಸುಧೀರ್ ಎಂಬಾತನೇ ಹುಚ್ಚಾಟ ನಡೆಸಿದ ಭಗ್ನ ಪ್ರೇಮಿ.
ಇದನ್ನೂ ಓದಿ: Siddaganga Mutt: ಸಿದ್ದಗಂಗಾ ಮಠದಲ್ಲಿ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೇ? ಹೀಗೆ ಮಾಡಿ
ಅಡ್ಯಾರ್ ಬಳಿಯ ನಿವಾಸಿ ಸುಧೀರ್ ಎಂಬಾತ ಬಸ್ ಕ್ಲಿನರ್. ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ನಿರ್ಲಕ್ಷ್ಯ ತೋರಿದರೂ ಸುಧೀರ್ ಪದೇ-ಪದೇ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆಕೆ ನೀನು ನನಗೆ ಇಷ್ಟವಿಲ್ಲ, ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲ ಅಂತ ತಿಳಿಸಿದ್ದಳು ಎನ್ನಲಾಗಿದೆ. ಆದರೂ ಆಕೆ ಹಿಂದೆ ಮು್ಂದೆ ಸುತ್ತಾಡುತ್ತಾ, ಪ್ರೀತಿಸುವಂತೆ ಪೀಡಿಸುತ್ತಿದ್ದ. ಕೊನೆಗೆ ಸುಧೀರ್ ಕಿರುಕುಳ ಸಹಿಸಲು ಸಾಧ್ಯವಾಗದೇ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪರಿಣಾಮ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಧೀರ್ ಟವರ್ ಏರಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ