ಆ ಒಬ್ಬ ಮುಖಂಡ ಯೆಸ್ ಅಂದಿದ್ದರೆ ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯುವ ನಿರ್ಧಾರಕ್ಕೆ ಬರುತ್ತಿರಲಿಲ್ಲವಾ?

ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ಬಗೆಹರಿಸೋಣ ಎಂಬ ಭರವಸೆ ನೀಡಿದ್ದರು. ಹಾಗೆಯೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೂಡ ಜಾಧವ್ ಮನವೊಲಿಸುವ ಯತ್ನ ಮಾಡಿದ್ದರು. ಕೊನೆಗೂ ಯಾವುದಕ್ಕೂ ಜಗ್ಗದ ಖರ್ಗೆ ಜಾಧವ್​​ ಕಾಂಗ್ರೆಸ್​​ ತೊರೆದರೇ ತೊರೆಯಲಿ ಬಿಡಿ ಎಂದರು.

Ganesh Nachikethu
Updated:February 11, 2019, 11:35 AM IST
ಆ ಒಬ್ಬ ಮುಖಂಡ ಯೆಸ್ ಅಂದಿದ್ದರೆ ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯುವ ನಿರ್ಧಾರಕ್ಕೆ ಬರುತ್ತಿರಲಿಲ್ಲವಾ?
ಮಲ್ಲಿಕಾರ್ಜುನ ಖರ್ಗೆ, ಉಮೇಶ್​​ ಜಾಧವ್​​
Ganesh Nachikethu
Updated: February 11, 2019, 11:35 AM IST
ಬೆಂಗಳೂರು(ಫೆ.11): ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಕಾಂಗ್ರೆಸ್ಸಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅತ್ತ ಕಲ್ಬುರ್ಗಿ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಬಳಿ ಯಾವುದೇ ಸಮರ್ಥ ಅಭ್ಯರ್ಥಿಯಿಲ್ಲದೇ ಚಿಂಚೊಳ್ಳಿ ಕಾಂಗ್ರೆಸ್​ ಶಾಸಕ ಉಮೇಶ್​​ ಜಾಧವ್​​ರನ್ನು ಸೆಳೆಯೋಕೆ ಬಿ.ಎಸ್​ ಯಡಿಯೂರಪ್ಪನವರು ಮುಂದಾಗಿದ್ದಾರೆ; ಇತ್ತ ಕಾಂಗ್ರೆಸ್​​ ತೊರೆದು ಬಿಜೆಪಿಗೆ ಹೋದರೆ ಹೋಗಲಿ ಬಿಡಿ ಎಂದು ಜಾಧವ್​​ ಬಗ್ಗೆ ಸ್ವಪಕ್ಷದ ನಾಯಕರೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಶಾಸಕ ಉಮೇಶ್​​ ಜಾಧವ್​​ರನ್ನು ಕಾಂಗ್ರೆಸ್ಸಿನಲ್ಲಿ ಉಳಿಸಲು ಆ ಒಬ್ಬ ಮುಖಂಡರು ಪ್ರಯತ್ನ ಮಾಡಿದ್ದರೂ ಸಾಕಿತ್ತು. ಜಾಧವ್ ಅವರು ಕಾಂಗ್ರೆಸ್​​ನಲ್ಲಿಯೇ ಉಳಿಯುತ್ತಿದ್ದರು. ಉಮೇಶ್ ಜಾಧವರಿಗೆ ಕೊನೆ ಕ್ಷಣದವರೆಗೂ ಕಾಂಗ್ರೆಸ್​ನಲ್ಲೇ ಉಳಿಸುವ ಪ್ರಯತ್ನ ನಡೆದಿತ್ತು. ಆದರೆ, ಇದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಒಪ್ಪಿಗೆ ಬೇಕಿತ್ತು. ಅವರು ಒಪ್ಪಿದಿದ್ರೆ ಜಾಧವ್​​​ ಅವರು ಪಕ್ಷದಲ್ಲೇ ಇರಲು ನಿರ್ಧರಿಸುತ್ತಿದ್ದರು. ಈ ನಾಯಕ ಬನ್ನಿ ಎಂದು ಕರೆದಿದ್ದರೆ ಜಂಟಿ ಅಧಿವೇಶನಕ್ಕೂ ಜಾಧವ್​​ ಹಾಜರಾಗುತ್ತಿದ್ದರು ಎನ್ನಲಾಗುತ್ತಿದೆ.

ಯೆಸ್ ಎನ್ನಬೇಕಿದ್ದ ಆ ಮುಖಂಡ ಬೇರಾರೂ ಅಲ್ಲ, ಮಲ್ಲಿಕಾರ್ಜುನ ಖರ್ಗೆ. ಹಿರಿಯ ಕಾಂಗ್ರೆಸ್​​ ನಾಯಕ ಮಲ್ಲಿಕಾರ್ಜು ಖರ್ಗೆಯವರು ನಿರ್ಲಕ್ಷ್ಯ ಮಾಡಿದ್ದೇ ಜಾಧವ್ ರಾಜೀನಾಮೆಗೆ ಮುಂದಾಗಿರುವುದಕ್ಕೆ ಕಾರಣವಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ಬಗೆಹರಿಸೋಣ ಎಂಬ ಭರವಸೆ ನೀಡಿದ್ದರು. ಹಾಗೆಯೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೂಡ ಜಾಧವ್ ಮನವೊಲಿಸುವ ಯತ್ನ ಮಾಡಿದ್ದರು. ಕೊನೆಗೂ ಯಾವುದಕ್ಕೂ ಜಗ್ಗದ ಖರ್ಗೆ ಜಾಧವ್​​ ಕಾಂಗ್ರೆಸ್​​ ತೊರೆದರೇ ತೊರೆಯಲಿ ಬಿಡಿ ಎಂದರು. ಹೀಗಾಗಿಯೇ ಜಾಧವ್​​ ಪಕ್ಷ ತೊರೆಯುವ ಪರಿಸ್ಥಿತಿ ಬಂದಿದೆ ಎನ್ನುತ್ತಿವೆ ಕಾಂಗ್ರೆಸ್​​ ಮೂಲಗಳು.

ಉಮೇಶ್​​ ಜಾಧವ್​ ಕಾಂಗ್ರೆಸ್​​​ ತೊರೆದು​​ ಬಿಜೆಪಿ ಹೋಗಲಿದ್ದಾರೆ ಎಂಬ ಚರ್ಚೆ ಹಳೆಯದ್ದೇ. ಜಾಧವ್​​ ಕಾಂಗ್ರೆಸ್‌ ತ್ಯಜಿಸುವ ಮಾತುಗಳು ಇತ್ತೀಚೆಗೆ ತುಸು ಹೆಚ್ಚೇ ಕೇಳಿ ಬರುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ಈಗಾಗಲೇ ಜಾಧವ್​​ ಹಲವು ಬಾರಿ ಸಂಸದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಲಾಗಿದ್ದು, ಬಿಜೆಪಿಗೆ ಹೋಗುವ ನಿರ್ಧಾರ ಕೈಗೊಂಡಿದ್ದು ಇದೇ. ಬಳಿಕ ತಮ್ಮ ನಿಲುವು ಬದಲಿಸಿಕೊಂಡ ಜಾಧವ್​​ ಕಾಂಗ್ರೆಸ್ಸಿನಲ್ಲಿಯೇ ಉಳಿಯುವುದಾಗಿ ಘೋಷಿಸಿದ್ದರು. ಇನ್ನೊಂದೆಡೆ ಬಿಜೆಪಿ ಮಾತ್ರ ಜಾಧವ್​​ರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇತ್ತು.

ಇದನ್ನೂ ಓದಿ: ಉತ್ತರಪ್ರದೇಶ ಮೇಲೆ ಕಾಂಗ್ರೆಸ್​​​ ಹದ್ದಿನ ಕಣ್ಣು; ಇಂದಿನಿಂದ ಪ್ರಿಯಾಂಕಾ ಗಾಂಧಿ ಅಸಲಿ ರಾಜಕೀಯ ಶುರು!

ಸುಮಾರು ದಿನಗಳ ಹಿಂದೆಯೇ ಹಿರಿಯ ಕಾಂಗ್ರೆಸ್​​ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕ ಡಾ. ಉಮೇಶ್​ ಜಾಧವ್​​ರ ನಡುವೇ ಬಿರುಕು ಮೂಡಿತ್ತು. ಅದಾದ ನಂತರ ತನ್ನ ತಂದೆಯ ವಿರುದ್ಧವಾಗಿಯೇ ನಿಂತಿದ್ದ ಎಂಬ ಕಾರಣಕ್ಕೆ ಜಾಧವ್​​ರನ್ನು ಸಚಿವ ಪ್ರಿಯಾಂಕ್‌ ಖರ್ಗೆ ದ್ವೇಷಿಸಲಾರಂಭಿಸಿದರು. ಮೇಲ್ನೋಟಕ್ಕೆ ಖರ್ಗೆ ಮತ್ತು ಜಾಧವ್​​ ನಡುವೇ ಯಾವುದೇ ಭಿನ್ನಾಭಿಪ್ರಾಯ ಇಲ್ಲಂದತೇ ಕಂಡರು; ಇಬ್ಬರ ಮಧ್ಯೆ ವೈಯಕ್ತಿಕ ಪ್ರತಿಷ್ಠೆಯ ಕಾರಣಕ್ಕೆ ಕದನ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತಿಷ್ಠೆ ಮರೆತು ಪಕ್ಷದ ಸಂಘಟನೆಗಾಗಿ ದುಡಿಯಬೇಕಿದ್ದ ಈ ಕಾಂಗ್ರೆಸ್​​ ನಾಯಕರು ಮಾನಸಿಕವಾಗಿ ಹಲವು ದಿನಗಳಿಂದ ದೂರ ಉಳಿದಿದ್ಧಾರೆ. ಕಾಂಗ್ರೆಸ್​​ ಹೈಕಮಾಂಡ್​ ಬಳಿ ತಾವು ಚೆನ್ನಾಗಿದ್ದೇವೆ ಎಂಬಂತೆ ನಡೆದುಕೊಳ್ಳಲಾಗುತ್ತಿದೆ. ಜಾಧವ್​​ ಮಾತ್ರ ಇಲ್ಲಿನ ಖರ್ಗೆ ವಿರುದ್ಧ ನಿಲ್ಲಲಾಗದೇ ಬಿಜೆಪಿ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಜಾಧವ್​​ ಜತೆಗೆ ಮಾತನಾಡಿ ಮತ್ತೆ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಯತ್ನಿಸಬೇಕಿದ್ದ ಖರ್ಗೆ ಮಾತ್ರ 'ಹೋದರೆ ಹೋಗಲಿ' ಎಂಬಂತೆ ವರ್ತಿಸುತ್ತಿದ್ದಾರೆ.
Loading...

ಇನ್ನು ಇತ್ತೀಚೆಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದ ಉಮೇಶ್ ಜಾಧವ್, ತಮಗೆ ನೀಡಿದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷಗಾಧಿ ಕೂಡ ಸ್ವೀಕರಿಸಲಿಲ್ಲ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಜತೆಗೆ ಚರ್ಚಿಸುತ್ತೇನೆ ಎಂದಿದ್ದ ಜಾಧವ್, ಏಕಾಏಕಿ ಗಾಯಬ್ ಆಗಿದ್ದರು. ಒಂದಷ್ಟು ದಿನಗಳು ಕಾಂಗ್ರೆಸ್​​ನ ಯಾವುದೇ ನಾಯಕರ ಯಾರ ಸಂಪರ್ಕಕ್ಕೂ ಸಿಗದೆ, ಅಜ್ಞಾತ ಸ್ಥಳದಲ್ಲಿದ್ದರು.

ಈ ರೀತಿಯ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದರೂ, ಜಾಧವರನ್ನು ದೂಷಿಸುವ ಇಲ್ಲವೆ ಮನವೊಲಿಸುವ ಗೋಜಿಗೆ ಮಲ್ಲಿಕಾರ್ಜುನ ಖರ್ಗೆ ಹೋಗಲೇ ಇಲ್ಲ. ಈ ಮಧ್ಯೆ 'ಆಪರೇಷನ್‌ ಕಮಲಕ್ಕೆ ಜಾಧವ ಬಲಿಯಾಗಿದ್ದಾರೆ. ₹50 ಕೋಟಿಗೆ ಚಿಂಚೋಳಿ ಕ್ಷೇತ್ರದ ಮತದಾರರನ್ನು ಮಾರಿಕೊಂಡಿದ್ದಾರೆ' ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಕಾಂಗ್ರೆಸ್​​ ಮುಳ್ಳನ್ನು ಮುಳ್ಳಿನಿಂದ ತೆಗೆಯುವ ತಂತ್ರಗಾರಿಕೆ'ಯನ್ನು ಹೆಣೆಯುತ್ತಿದೆ. ಎರಡು ವಾರ ಅಜ್ಞಾತ ಸ್ಥಳದಲ್ಲಿದ್ದ ಜಾಧವ್​​, ಕೊನೆಗೂ ಕ್ಷೇತ್ರಕ್ಕೆ ಮರಳಿದ್ದಾರೆ. ಇವರನ್ನು ಮನವೊಲಿಸುವ ಪ್ರಯತ್ನ ನಡೆಯುತ್ತಲೇ ಕಾಂಗ್ರೆಸ್ಸಿನಿಂದ ನಡೆಯುತ್ತಿದೆ.

ಇದನ್ನೂ ಓದಿ:  ಬಿಎಸ್​ವೈ ಪೊಳ್ಳುತನದ ಬಗ್ಗೆ ಜನರಿಗೆ ಗೊತ್ತು; ಆಪರೇಷನ್​​ ಕಮಲ ಮಾಡಲಿ, ಸರ್ಕಾರ ಸುಭದ್ರವಾಗಿದೆ; ಎಚ್​​.ಡಿ ರೇವಣ್ಣ!

ಈ ನಡುವೇ ಉಮೇಶ್ ಜಾಧವ ಬಿಜೆಪಿ ಸೇರುತ್ತಾರೆ ಎನ್ನಲಾಗುತ್ತಿದೆ. ಬಿಜೆಪಿಯವರು ಉಮೇಶ್​​ ಜಾಧವರನ್ನು ಸೆಳೆದರೇ ಕಲ್ಬುರ್ಗಿ ಜಿಲ್ಲೆಯಲ್ಲಿ ಖರ್ಗೆ ಪ್ರಾಬಲ್ಯವನ್ನು ಕುಗ್ಗಿಸಬಹುದು ಎಂದು ಯೋಚಿಸಿದಂತಿದೆ. ಹೀಗಾಗಿ ಲೋಕಸಭೆಯಲ್ಲಿ ಖರ್ಗೆ ವಿರುದ್ಧವೇ ಜಾಧವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ ಸಂಸದ ಖರ್ಗೆ ಅವರು ಕರೆದು ಮಾತನಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಬದಲಿಗೆ ಜಾಧವ್​ರನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ಸಿಗರು.

ಹಾಗೆಯೇ ಒಂದು ವೇಳೆ ಕಾಂಗ್ರೆಸ್ಸಿನಿಂದ ಹೊರಬಂದರೇ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು. ಇಲ್ಲಿ ಸೋತರೆ ಚಿಂಚೋಳಿ ಕ್ಷೇತ್ರದಿಂದಲೇ ಹೇಗಿದ್ದರೂ ಬಿಜೆಪಿಯಿಂದ ಮತ್ತೆ ವಿಧಾನಸಭೆಗೆ ಸ್ಪರ್ಧಿಸಬಹುದು ಎಂಬುದು ಜಾಧವ್​​ರ​​ ಉದ್ದೇಶ ಎನ್ನುತ್ತಿವೆ ಕಾಂಗ್ರೆಸ್​​ ಆಪ್ತ ಮೂಲಗಳು.

-----------------
ಬಿಎಸ್ವೈ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...