• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಾಜ್ಯಸಭೆಯಲ್ಲಿ ನೂತನ ವಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸಾಧ್ಯತೆ

ರಾಜ್ಯಸಭೆಯಲ್ಲಿ ನೂತನ ವಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸಾಧ್ಯತೆ

ಸೋನಿಯಾ ಗಾಂಧಿ ಜೊತೆ ಮಲ್ಲಿಕಾರ್ಜುನ ಖರ್ಗೆ

ಸೋನಿಯಾ ಗಾಂಧಿ ಜೊತೆ ಮಲ್ಲಿಕಾರ್ಜುನ ಖರ್ಗೆ

ಗುಲಾಂ ನಬಿ ಆಜಾದ್ ಅವರ ರಾಜ್ಯಸಭಾ ಸ್ಥಾನದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲು ಕಾಂಗ್ರೆಸ್ ನಿರ್ಧರಿಸಿದೆ. ವಿಪಕ್ಷ ನಾಯಕನಾಗಿ ಖರ್ಗೆ ನೇಮಕ ಮಾಡುವಂತೆ ಕೋರಿ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದೆ.

ಮುಂದೆ ಓದಿ ...
  • News18
  • 2-MIN READ
  • Last Updated :
  • Share this:

ನವದೆಹಲಿ(ಫೆ. 12): ಕಳೆದ ಬಾರಿಯ ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಆಡಳಿತ ಪಕ್ಷವನ್ನ ಹುರಿದು ಮುಕ್ಕುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಅವರ ಸ್ಥಾನವನ್ನು ಖರ್ಗೆ ತುಂಬಲಿದ್ದಾರೆ. ವಿಪಕ್ಷ ನಾಯಕರಾಗಿದ್ದ ಆಜಾದ್ ಅವರ ರಾಜ್ಯಸಭಾ ಸ್ಥಾನದ ಅವಧಿ ಫೆ. 15ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನೂತನ ವಿಪಕ್ಷ ನಾಯಕನ ಸ್ಥಾನವನ್ನ ಆಯ್ಕೆ ಮಾಡುತ್ತಿದೆ. ಆಜಾದ್ ನಿವೃತ್ತರಾದ ಬಳಿಕ ಖರ್ಗೆ ಅವರನ್ನ ರಾಜ್ಯಸಭೆ ವಿಪಕ್ಷ ನಾಯಕನಾಗಿ ನೇಮಕ ಮಾಡುವಂತೆ ಕೋರಿ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಛೇರ್ಮನ್ ಎಂ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.


ಮಲ್ಲಿಕಾರ್ಜುನ ಖರ್ಗೆ ಅವರು 2014-19ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿ ತಮ್ಮ ವಾಗ್ಝರಿ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಶೇ. 10ಕ್ಕಿಂತಲೂ ಕಡಿಮೆ ಸ್ಥಾನ ಬಂದ ಹಿನ್ನೆಲೆಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನ ಸಿಕ್ಕಿಲ್ಲ. ಆದರೂ ಕೂಡ ಖರ್ಗೆ ಅವರು ತಮ್ಮ ಮೊನಚು ಮಾತುಗಳ ದಾಳಿ ಮೂಲಕ ಸರ್ಕಾರವನ್ನ ನಿರಂತರವಾಗಿ ಕಂಗೆಡಿಸಿ ಸೈ ಎನಿಸಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಕಲಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆ ಬಳಿಕ ಅವರನ್ನ ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಆರಿಸಿ ಕಳುಹಿಸಿದೆ. ಈಗ ಗುಲಾಂ ನಬಿ ಆಜಾದ್ ಅವರ ಸ್ಥಾನವನ್ನ ಖರ್ಗೆ ತುಂಬುವುದು ಹೆಚ್ಚೂಕಡಿಮೆ ಖಚಿತವಾಗಿದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ, ರಸ್ತೆ ಬಳಿ ಗಾಡಿ ಪಾರ್ಕಿಂಗ್​ಗೆ ಶುಲ್ಕ; ಜನರಿಗೆ ಹೊಸ ಪಾರ್ಕಿಂಗ್ ನೀತಿ ಶಾಕ್


ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಲು ಕಾಂಗ್ರೆಸ್​ನ ಹಿರಿಯ ನಾಯಕರ ದಂಡೇ ಇತ್ತು. ಪಿ. ಚಿದಂಬರಂ, ಕಪಿಲ್ ಸಿಬಲ್ ಅವರಂಥ ಘಟಾನುಘಟಿಗಳು ವಿಪಕ್ಷ ನಾಯಕರಾಗುವ ನಿರೀಕ್ಷೆಯೂ ಇತ್ತು. ಆದರೆ, ಸೋನಿಯಾ ಗಾಂಧಿ ಅವರು ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಣಿ ಹಾಕಿರುವುದು ಗಮನಾರ್ಹ ಎನ್ನಲಾಗುತ್ತಿದೆ.

top videos
    First published: