ನನಗೆ ಸಿಎಂ ಆಗಿ ಎಂದು ಹೈಕಮಾಂಡ್ ಹೇಳಿಲ್ಲ, ಈಗ ಈ ಚರ್ಚೆ ಅನವಶ್ಯಕ; ಮಲ್ಲಿಕಾರ್ಜುನ ಖರ್ಗೆ​

ಕುಮಾರಸ್ವಾಮಿ ಹೇಳಿಕೆ ಕುರಿತು ನಾನು ತಲೆ ಕೆಡಿಸಿಕೊಂಡಿಲ್ಲ. ಆದರೆ, ಈ ರೀತಿಯ ಮಾತುಗಳಿಂದ ಪಕ್ಷ ಹಾಗೂ ಮೈತ್ರಿಯಲ್ಲಿ ಒಡಕು ಮೂಡಿ ವೈಮನಸ್ಸು ಮೂಡುತ್ತದೆ. 

Seema.R | news18
Updated:May 17, 2019, 1:07 PM IST
ನನಗೆ ಸಿಎಂ ಆಗಿ ಎಂದು ಹೈಕಮಾಂಡ್ ಹೇಳಿಲ್ಲ, ಈಗ ಈ ಚರ್ಚೆ ಅನವಶ್ಯಕ; ಮಲ್ಲಿಕಾರ್ಜುನ ಖರ್ಗೆ​
ಮಲ್ಲಿಕಾರ್ಜುನ ಖರ್ಗೆ
Seema.R | news18
Updated: May 17, 2019, 1:07 PM IST
ಕಲಬುರಗಿ (ಮೇ.17): ರಾಜ್ಯದಲ್ಲಿ ಕಳೆದು ಮೂರು ನಾಲ್ಕು ದಿನಗಳಿಂದ ಸದ್ದು ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂಬ ಹೇಳಿಕೆಗೆ ಸ್ವತಃ ಸಂಸದ ಖರ್ಗೆ ಅವರೇ ತೆರೆ ಎಳೆಯಲು ಮುಂದಾಗಿದ್ದಾರೆ. ನನಗೆ ಸಿಎಂ ಆಗಿ ಎಂದು ಹೈ ಕಮಾಂಡ್ ಎಂದೂ ತಿಳಿಸಿಲ್ಲ. ಹೀಗಾಗಿ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಗಿರುವ ಅನುಭವಕ್ಕೆ ಎಂದೋ ಸಿಎಂ ಆಗಬೇಕಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ  ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿತ್ತು. ಸಿದ್ದರಾಮಯ್ಯ -ಖರ್ಗೆ ನಡುವಿನ ಮುನಿಸಿಗೆ ತುಪ್ಪ ಸುರಿಯುವ ಸಲುವಾಗಿ ಈ ಹೇಳಿಕೆಯನ್ನು ಉದ್ದೇಶ ಪೂರ್ವಕವಾಗಿ ಸಿಎಂ  ಹೇಳಿದ್ದಾರೆ ಎಂಬ ಚರ್ಚೆಗಳು ಮೂಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಸಿಎಂ ರೇಸ್​ನಲ್ಲಿ ರೇವಣ್ಣ ಅವರನ್ನು ಎಳೆದು ತಂದ್ದಿದ್ದರು. ಈ ಚರ್ಚೆ ರಾಜ ರಾಜಕಾರಣದಲ್ಲಿ ಮತ್ತೊಮ್ಮೆ ದಲಿತ ಸಿಎಂ ಚರ್ಚೆ ಹುಟ್ಟು ಹಾಕಿತ್ತು.

ಈ ಎಲ್ಲಾ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಈ ವಿಚಾರವಾಗಿ ನಾನು ಎಂದೂ ತಲೆ ಕೆಡಿಸಿಕೊಂಡಿಲ್ಲ. ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ಇದನ್ನು ಓದಿ: ಖರ್ಗೆ - ಸಿದ್ದು ಮಧ್ಯೆ ಕಿಡಿಹೊತ್ತಿಸಲು ಬಂದು ಬೆಪ್ಪಾದ ಎಚ್​ಡಿಕೆ; ರೇವಣ್ಣಗೂ ಸಿಎಂ ಆಗುವ ಅರ್ಹತೆಯಿದೆ ಎಂದ ಸಿದ್ದರಾಮಯ್ಯ

ಕುಮಾರಸ್ವಾಮಿ ಹೇಳಿಕೆ ಕುರಿತು ನಾನು ತಲೆ ಕೆಡಿಸಿಕೊಂಡಿಲ್ಲ. ಆದರೆ, ಈ ರೀತಿಯ ಮಾತುಗಳಿಂದ ಪಕ್ಷ ಹಾಗೂ ಮೈತ್ರಿಯಲ್ಲಿ ಒಡಕು ಮೂಡಿ ವೈಮನಸ್ಸು ಮೂಡುತ್ತದೆ. ನಾವು ಎಲ್ಲರೂ ಸೇರಿ ಹೈಕಮಾಂಡ್ ತಿರ್ಮಾನದಂತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಈ ಕುರಿತು ಚರ್ಚೆ ಅನವಶ್ಯಕ ಎಂದರು.

ಫಲಿತಾಂಶ ದಿನದಂದು ಪ್ರಧಾನಿ ಆಯ್ಕೆಫಲಿತಾಂಶದ ದಿನದಂದು ಮಹಾಘಟ್​ಬಂಧನ್​ ನಾಯಕರಿಗೆ ಸೋನಿಯಾ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮುಖಂಡರನ್ನು ಕರೆಸಿ ಸೋನಿಯಾ ಗಾಂಧಿ ಮಾತನಾಡಲಿದ್ದಾರೆ. ಫಲಿತಾಂಶ ಬಂದ ಮೇಲೆ ಸಂಖ್ಯಾ ಬಲ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಘಟಬಂಧನ್​ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ನಾವೇ ಪ್ರಧಾನಿ ಆಗುತ್ತೇವೆ ಎಂದು ಹೇಳಿದರೆ ಬೇರೆಯವರಿಗೆ ತಪ್ಪಾಗಲಿದೆ. ಮಹಾಘಟಬಂದನ್​ ನಲ್ಲಿರುವ ಪಕ್ಷಗಳ ಮುಖಂಡರ ಅಭಿಪ್ರಾಯ ಪಡೆದು, ಪ್ರಧಾನಿ ಅಭ್ಯರ್ಥಿ ವಿಚಾರದ ಬಗ್ಗೆ ಗುಲಾಂ ನಬಿ ಆಜಾದ್ ತಿಳಿಸಲಿದ್ದಾರೆ ಎಂದರು.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ