ಪ್ರವಾಹ ಪರಿಸ್ಥಿತಿ ನಿಭಾಯಿಸಲು ದುಡ್ಡಿಲ್ಲವೆಂದರೆ ಅಭಿವೃದ್ಧಿ ಕಾರ್ಯ ಹೇಗೆ ಮಾಡ್ತೀರಿ?: ಬಿಎಸ್​ವೈ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಾತನಾಡಿದರೆ ದೇಶ ದ್ರೋಹಿ. ಗಾಂಧೀಜಿ ತತ್ವಗಳ ಬಗ್ಗೆ ಮಾತನಾಡಿದರೆ ದೇಶ ದ್ರೋಹಿ ಎನ್ನುತ್ತಾರೆ. ಕೇವಲ ಆರೆಸ್ಸೆಸ್, ಮೋದಿ ಹಾಗೂ ಶಾ ಅವರನ್ನು ಹೊಗಳಿದರೆ ಮಾತ್ರ ದೇಶ ಪ್ರೇಮಿಗಳಾಗುತ್ತಾರೆ ಎಂದು ಖರ್ಗೆ ವ್ಯಂಗ್ಯ.

news18-kannada
Updated:October 4, 2019, 4:42 PM IST
ಪ್ರವಾಹ ಪರಿಸ್ಥಿತಿ ನಿಭಾಯಿಸಲು ದುಡ್ಡಿಲ್ಲವೆಂದರೆ ಅಭಿವೃದ್ಧಿ ಕಾರ್ಯ ಹೇಗೆ ಮಾಡ್ತೀರಿ?: ಬಿಎಸ್​ವೈ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ಮಲ್ಲಿಕಾರ್ಜುನ ಖರ್ಗೆ
  • Share this:
ಬೆಂಗಳೂರು(ಅ. 04): ಕೇಂದ್ರದಿಂದ ನೆರೆ ಪರಿಹಾರ ತರಲು ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು. ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಕಳುಹಿಸಿದ ವರದಿಯನ್ನು ತಿರಸ್ಕರಿಸಿದ ಕೇಂದ್ರದ ಕ್ರಮವನ್ನೂ ಅವರು ಪ್ರಶ್ನಿಸಿದರು. ರಾಜ್ಯ ಸರ್ಕಾರದ ವರದಿ ಸಮರ್ಪಕವಲ್ಲ ಎಂದನಿಸಿದರೆ ಕೇಂದ್ರವೇ ಒಂದು ತಂಡವನ್ನು ಕಳುಹಿಸಿ ಪರಿಶೀಲಿಸಬಹುದಿತ್ತು. ಏಕಾಏಕಿ ರಾಜ್ಯದ ವರದಿಯನ್ನು ತಿರಸ್ಕರಿಸಲು ಬರಲ್ಲ. ಪ್ರಧಾನಿ ಮೋದಿ ಅವರು ಚಂದ್ರಯಾನದ ಉಡಾವಣೆ ನೋಡೋಕೆ ಬರುತ್ತಾರೆ. ಇಲ್ಲೇ ಅವರು ಪ್ರವಾಹ ಭಾಗಗಳ ವೀಕ್ಷಣೆ ಮಾಡಿ ಪರಿಹಾರ ಘೋಷಣೆ ಮಾಡಬಹುದಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಹಣಕಾಸು ಸಚಿವೆಯು ಇದೇ ಭಾಗದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರಾದರೂ ಕಾಳಜಿ ವಹಿಸಿ ಹಣ ಬಿಡುಗಡೆ ಮಾಡಿಸಬಹುದಿತ್ತು. ಆದರೆ, ಇದ್ಯಾವುದೂ ಆಗಲೇ ಇಲ್. ಕೇಂದ್ರ ಸರ್ಕಾರವನ್ನು ಕೇಳುವ ಧೈರ್ಯವನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ನೆರೆ ಪರಿಹಾರ ಬಿಡುಗಡೆ ಮಾಡಿಸಿ ಎಂದು ಹೇಳಿದ್ದಕ್ಕೆ ಬಿಜೆಪಿ ಶಾಸಕ ಯತ್ನಾಳ್​ಗೆ ಶೋಕಾಸ್ ನೋಟಿಸ್ ನೀಡಿದ ಪಕ್ಷ

ನಾವು ಪರಿಹಾರ ಹಣ ಕೇಳಿದರೆ ಖಜಾನೆ ಖಾಲಿ ಆಗಿದೆ ಎಂದು ಮುಖ್ಯಮಂತ್ರಿ ಹೇಳ್ತಾರೆ. ಇದೂವರೆಗೆ ನೆರೆ ಪೀಡಿತ ಜಿಲ್ಲೆಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಲಾಗಿದೆ ಎನ್ನೋದನ್ನ ಸರ್ಕಾರ ಹೇಳದೇ ಜನರಿಗೆ ವಂಚನೆ ಮಾಡುತ್ತಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ನಿಮ್ಮ ಬಳಿ ದುಡ್ಡು ಇಲ್ಲ ಅಂದರೆ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಂದ ಹಣ ತರುತ್ತೀರಾ? ಎಂದು ರಾಜ್ಯ ಸರ್ಕಾರವನ್ನು ಖರ್ಗೆ ಪ್ರಶ್ನೆ ಮಾಡಿದರು.

ನಮ್ಮ ವಿರುದ್ಧ ಮಾತನಾಡುವಷ್ಟು ಧೈರ್ಯ ಇವರಿಗೆ ಇದೆ. ಆದರೆ, ಮೋದಿಯನ್ನು ಭೇಟಿ ಮಾಡಿ ಒತ್ತಾಯ ಮಾಡುವಷ್ಟು ಧೈರ್ಯ ಇಲ್ಲವಾ? ನಿಮ್ಮ ಮಾತು ನಡೆಯುತ್ತದೆ ಎಂದರೆ ನಿಮ್ಮ ಮುಖಂಡರನ್ನು ಭೇಟಿ ಮಾಡಿ ಪರಿಹಾರ ತನ್ನಿರಿ. ಹಿಂದೆ ನಾವು ಸಾಕಷ್ಟು ಹಣವನ್ನು ಅನುದಾನವನ್ನು ರಾಜ್ಯಕ್ಕೆ ತಂದಿದ್ಧೇವೆ. ಯಾರು ಕೇಳದಿದ್ದರೂ ಹೊಸ ರೈಲು ತಂದೆವು. ರಾಷ್ಟ್ರೀಯ ಹೆದ್ದಾರಿಗೆ ಹಣ ತಂದೆವು. ಇಂಥದ್ದಕ್ಕೆ ಹಣ ತಂದಿಲ್ಲ ಅಂತಿಲ್ಲ. ಆದರೆ, ಇವರು ಪ್ರಧಾನಿ ಜೊತೆ ಮಾತನಾಡಲು ತಯಾರಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರನ್ನು ಖರ್ಗೆ ಲೇವಡಿ ಮಾಡಿದರು.

ಇದನ್ನೂ ಓದಿ: ನನ್ನ ಅವಧಿಯಲ್ಲಿ ಪೂರ್ತಿ ಸಹಕಾರ ನೀಡಿದ್ದ ಮೋದಿಗೆ ಬಿಎಸ್​ವೈ ಮೇಲೆ ವಿಶ್ವಾಸವಿಲ್ಲ; ಸಿಎಂ ಬಗ್ಗೆ ಕುಮಾರಸ್ವಾಮಿ ಲೇವಡಿ

ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ದೇಶ ದ್ರೋಹಿ ಎನ್ನುತ್ತಾರೆ, ಅಮಿತ್ ಶಾ ವಿರುದ್ಧ ಮಾತನಾಡಿದರೆ ದೇಶ ದ್ರೋಹಿ ಎನ್ನುತ್ತಾರೆ. ಗಾಂಧೀಜಿ ತತ್ವಗಳ ಬಗ್ಗೆ ಮಾತನಾಡಿದರೆ ದೇಶ ದ್ರೋಹಿ ಎನ್ನುತ್ತಾರೆ. ಕೇವಲ ಆರೆಸ್ಸೆಸ್, ಮೋದಿ ಹಾಗೂ ಅಮಿತ್ ಶಾ ಅವರನ್ನು ಹೊಗಳಿದರೆ ಮಾತ್ರ ದೇಶ ಪ್ರೇಮಿಗಳಾಗುತ್ತಾರೆ ಎಂದು ಮಾಜಿ ಕೇಂದ್ರ ವಿಪಕ್ಷ ನಾಯಕ ಆರೋಪಿಸಿದರು.ಬಿಜೆಪಿಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು, ವೈದ್ಯ ಕೋರ್ಡ್ ಮುಗಿಯಲು ಐದೂ ಕಾಲು ವರ್ಷ ಬೇಕು ಇವರ ಕಾಲದಲ್ಲಿ ಒಬ್ಬರೂ ಕೂಡ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಲಿಲ್ಲ. ಒಬ್ಬ ಎಂಜಿನಿಯರ್​ಗೆ ಕೆಲಸ ಕೊಡಿಸಲು ಆಗಲಿಲ್ಲ ಎಂದು ವ್ಯಂಗ್ಯ ಮಾಡಿದರು.

(ವರದಿ: ಶ್ರೀನಿವಾಸ ಹಳಕಟ್ಟಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ