ಲೋಕಸಭೆಯಲ್ಲೂ ಪ್ರತಿಧ್ವನಿಸಿತು ಆಪರೇಷನ್ ಕಮಲ ಆಡಿಯೋ; ಮೋದಿ, ಶಾ ವಿರುದ್ಧ ಕಿಡಿಕಾರಿದ ಖರ್ಗೆ, ಗೌಡ

ಸ್ಪೀಕರ್, ಜಡ್ಜ್​ಗಳನ್ನು ಬುಕ್ ಮಾಡಿದ್ದೇವೆ ಎಂದು ಕರ್ನಾಟಕದ ಬಿಜೆಪಿಯವರು ಹೇಳಿದ್ದರೆನ್ನಲಾದ ಆಡಿಯೋವೊಂದು ಲೋಕಸಭೆಯಲ್ಲೂ ಜೋರು ಸದ್ದು ಮಾಡಿದೆ.

Vijayasarthy SN | news18
Updated:February 11, 2019, 6:28 PM IST
ಲೋಕಸಭೆಯಲ್ಲೂ ಪ್ರತಿಧ್ವನಿಸಿತು ಆಪರೇಷನ್ ಕಮಲ ಆಡಿಯೋ; ಮೋದಿ, ಶಾ ವಿರುದ್ಧ ಕಿಡಿಕಾರಿದ ಖರ್ಗೆ, ಗೌಡ
ಮಲ್ಲಿಕಾರ್ಜುನ ಖರ್ಗೆ
Vijayasarthy SN | news18
Updated: February 11, 2019, 6:28 PM IST
- ಧರಣೀಶ್ ಬೂಕನಕೆರೆ,

ನವದೆಹಲಿ(ಫೆ. 11): ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದಾರೆ ಎನ್ನೋ ಆಡಿಯೋ ವಿಚಾರ ಇವತ್ತು ಲೋಕಸಭೆಯಲ್ಲೂ ಚರ್ಚೆಯಾಯಿತು. ಯಡಿಯೂರಪ್ಪ ಅವರ ಆಡಿಯೋ ವಿಷಯ ಪ್ರಸ್ತಾಪಿಸಿದ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಖರ್ಗೆ ಮತ್ತು ದೇವೇಗೌಡ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡರು‌. ಇನ್ನೊಂದು ಕಡೆ ಕೇಂದ್ರ ಸಚಿವ ಸದಾನಂದಗೌಡ ಬಿಜೆಪಿಯನ್ನು ಸಮರ್ಥಿಸಿಕೊಳ್ಳೋ ಪ್ರಯತ್ನ ಮಾಡಿದರು.

ಇದನ್ನೂ ಓದಿ: ಬೆಳಗಾವಿ ಲೋಕಸಮರದಲ್ಲಿ ನಾಲ್ಕನೇ ಬಾರಿ ಜಯ ಸಾಧಿಸಲಿದ್ದಾರ ಬಿಜೆಪಿಯ ಸುರೇಶ್​ ಅಂಗಡಿ?

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ನನ್ನದೇ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಗುರುಮಠಕಲ್ ಶಾಸಕರಿಗೂ ಆಮಿಷ ಒಡ್ಡಿದ್ದಾರೆ. ಶಾಸಕರೊಬ್ಬರ ಮಗನ ಮೂಲಕ ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಷ್ಟೇಯಲ್ಲದೆ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಸ್ಪೀಕರ್​ಗೆ 50 ಕೋಟಿ ರೂಪಾಯಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಕಾನೂನು ತೊಡಕು ಬಂದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಧಿಶರನ್ನು ನಿಭಾಯಿಸುತ್ತೇವೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಂದ ನ್ಯಾಯಧಿಶರನ್ನು ನಿಭಾಯಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.

ಖರ್ಗೆ ಆರೋಪಕ್ಕೆ ಧ್ವನಿಗೂಡಿಸಿದ ದೇವೇಗೌಡ‌:

ಖರ್ಗೆ ಬಳಿಕ ಮಾತಿಗಿಳಿದ ಹೆಚ್.ಡಿ. ದೇವೇಗೌಡ, ದೇಶದ ಇತಿಹಾಸದಲ್ಲೇ ಆಪರೇಷನ್ ಮಾಡುವುದನ್ನು ಆರಂಭಿಸಿದ್ದೇ ಬಿಜೆಪಿ. ಈಗ ಮತ್ತೆ ಅದೇ ಕೆಲಸ ಶುರುಮಾಡಿಕೊಂಡಿದೆ. ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡಲಾಗುತ್ತಿದೆ. ಆಡಿಯೋದಲ್ಲಿ ಬಿಜೆಪಿಯ ಈ ಕುಕೃತ್ಯ ಬಯಲಾಗಿದ್ದು ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
Loading...

ಆಡಿಯೋ ಪ್ರಕರಣ ಸಮರ್ಥಿಸಿಕೊಂಡ ಸದಾನಂದಗೌಡ:

ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರ ತೀವ್ರ ವಾಗ್ದಾಳಿಗೆ ಪ್ರತಿಯಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಡಿಯೋ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿರುವ ಜಗಳ ಮುಚ್ಚಿಡಲು ಬಿಜೆಪಿ ಮೇಲೆ ಆರೋಪ ಮಾಡಲಾಗುತಿದೆ. ಆಡಿಯೋವನ್ನು ತನಿಖೆಗೆ ಒಳಪಡದೆ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಖರ್ಗೆ ಮತ್ತು ದೇವೇಗೌಡರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಡಿವಿಎಸ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಿಎಂಟಿಸಿ ಬಸ್​ಗೆ ಬೈಕ್​ ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರ ದಾರುಣ ಸಾವು

ಇದಲ್ಲದೆ ಸಂಸತ್ತಿನ ಹೊರಗಡೆ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಕೂಡ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದರು. ‌ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದರು.

ಹೆಚ್.ಡಿ. ಕುಮಾರಸ್ವಾಮಿ ಮೊನ್ನೆ ಬಿಡುಗಡೆ ಮಾಡಿದ ಈ ಆಡಿಯೋ ಇವತ್ತು ಕರ್ನಾಟಕ ವಿಧಾನಸಭೆಯಲ್ಲಿ ಗಹನ ಚರ್ಚೆಗೆ ಕಾರಣವಾಯಿತು. ಸಂಸದರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಅವರಿಗೆ 50 ಕೋಟಿ ರೂ ಕೊಡಲಾಗಿದೆ. ನರೇಂದ್ರ ಮೋದಿ, ಅಮಿತ್ ಶಾ ಮಟ್ಟದಲ್ಲಿ ನ್ಯಾಯಾಧೀಶರನ್ನೂ ಒಪ್ಪಿಸಲಾಗಿದೆ ಎಂದೆಲ್ಲಾ ಮಾತುಗಳನ್ನಾಡಿರುವುದು ಈ ಆಡಿಯೋದಿಂದ ತಿಳಿದುಬಂದಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ವಿಧಾನಸಭೆಯಲ್ಲಿ ಭಾವುಕರಾದ ಸನ್ನಿವೇಶ ನಿರ್ಮಾಣವಾಯಿತು. ಈ ಆಡಿಯೋ ಪ್ರಕರಣವನ್ನು ಎಸ್​ಐಟಿಯಿಂದ ತನಿಖೆ ನಡೆಸುವ ಸಾಧ್ಯತೆ ಇದೆ.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...