• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Exclusive: ಸಿದ್ದುಗೆ ಟಕ್ಕರ್, ಕುಪೇಂದ್ರ ರೆಡ್ಡಿಗೆ ಬಂಪರ್! ಮಲ್ಲಿಕಾರ್ಜುನ್ ಖರ್ಗೆ, ದೇವೇಗೌಡರಿಂದ ಹೊಸ ದಾಳ

Exclusive: ಸಿದ್ದುಗೆ ಟಕ್ಕರ್, ಕುಪೇಂದ್ರ ರೆಡ್ಡಿಗೆ ಬಂಪರ್! ಮಲ್ಲಿಕಾರ್ಜುನ್ ಖರ್ಗೆ, ದೇವೇಗೌಡರಿಂದ ಹೊಸ ದಾಳ

ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಿದ್ದರಾಮಯ್ಯ

ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಿದ್ದರಾಮಯ್ಯ

ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಲು ಹಿರಿಯ ಕಾಂಗ್ರೆಸ್ ನಾಯಕ (Senior Congress Leader) ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಭಾರೀ ಪ್ಲಾನ್ ಮಾಡಿದ್ದಾರೆ ಎಂಬ ಎಕ್ಸ್‌ಕ್ಲೂಸಿವ್ (Exclusive) ವಿಚಾರ ನ್ಯೂಸ್ 18ಗೆ ಲಭ್ಯವಾಗಿದೆ.

ಮುಂದೆ ಓದಿ ...
 • Share this:

ಬೆಂಗಳೂರು: ರಾಜಕೀಯ ಪಕ್ಷಗಳಲ್ಲಿ (Political Party) ರಾಜ್ಯಸಭೆ ಚುನಾವಣೆಯ (Rajyasabha Election) ಕಾವು ಏರುತ್ತಾ ಇದೆ. ಸಂಸತ್ತಿನ (Parliament) ಮೇಲ್ಮನೆಯ 57 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಅದೇ ದಿನವೇ ಮತ ಎಣಿಕೆ (Counting) ನಡೆದು, ಫಲಿತಾಂಶ (Result) ಘೋಷಣೆಯಾಗಲಿದೆ. ಇತ್ತ ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಲು ಹಿರಿಯ ಕಾಂಗ್ರೆಸ್ ನಾಯಕ (Senior Congress Leader) ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಭಾರೀ ಪ್ಲಾನ್ ಮಾಡಿದ್ದಾರೆ ಎಂಬ ಎಕ್ಸ್‌ಕ್ಲೂಸಿವ್ (Exclusive) ವಿಚಾರ ನ್ಯೂಸ್ 18ಗೆ (News18) ಲಭ್ಯವಾಗಿದೆ. ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾಗಾಂಧಿ (Sonia Gandhi) ಅವರನ್ನು ದೆಹಲಿಯ (Delhi) ಅವರ ನಿವಾಸದಲ್ಲಿ ಮಲ್ಲಿಕಾರ್ಜುನ್ ಖರ್ಗೆ ನಿನ್ನೆ ಬೆಳಗ್ಗೆ ಭೇಟಿಯಾಗಿದ್ದಾರೆ (Meet) ಎನ್ನಲಾಗಿದೆ. ಹಾಗಿದ್ರೆ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಉದ್ದೇಶವೇನು? ಉಭಯ ನಾಯಕರು ಚರ್ಚಿಸಿದ್ದೇನು? ಕಾಂಗ್ರೆಸ್ ಚುನಾವಣಾ ತಂತ್ರವನ್ನೇ ಚೇಂಜ್ ಮಾಡ್ತಾರಾ ಹಿರಿಯ ನಾಯಕ? ಮಲ್ಲಿಕಾರ್ಜುನ್ ಖರ್ಗೆ ಈ ನಡೆಯ ಹಿಂದೆ ಇರುವವರು ಯಾರು? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ


4ನೇ ಅಭ್ಯರ್ಥಿ ವಿಚಾರಕ್ಕೆ ಕಾಂಗ್ರೆಸ್‌ನಲ್ಲಿ ಟ್ವಿಸ್ಟ್


ರಾಜ್ಯಸಭೆ ನಾಲ್ಕನೆ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಬಿಗ್ ಟ್ವಿಸ್ಟ್ ಉಂಟಾಗಿದೆ. ಸೀಕ್ರೆಟ್ ಆಪರೇಷನ್ ನಡೆಸಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಉಲ್ಟಾ ಮಾಡಿ, ಅವರಿಗೆ ಟಕ್ಕರ್ ಕೊಡೋದಕ್ಕೆ ಖರ್ಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.


ಸೋನಿಯಾ ಗಾಂಧಿ ಭೇಟಿಯಾದ ಮಲ್ಲಿಕಾರ್ಜುನ್ ಖರ್ಗೆ


ನಿನ್ನೆ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ ಖರ್ಗೆ, ಸೋನಿಯಾ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.


ಇದನ್ನೂ ಓದಿ: Siddaramaiah: ಸಿದ್ದರಾಮೋತ್ಸವ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ! ಇದರ ಹಿಂದಿರೋ ಲೆಕ್ಕಾಚಾರವೇ ಬೇರೆ


ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರ ಲಾಬಿ


ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಪರ ಮಲ್ಲಿಕಾರ್ಜುನ್ ಖರ್ಗೆ ಸೈಲೆಂಟಾಗಿ ಲಾಬಿ ಮಾಡಿದ್ದಾರೆ. ಕುಪ್ಪೇಂದ್ರ ರೆಡ್ಡಿಗೆ ಬೆಂಬಲ ನೀಡಿದರೆ ಒಳ್ಳೆಯದು, ಜಾತ್ಯಾತೀತ ಶಕ್ತಿಗಳು ಒಗ್ಗಟ್ಟಾಗಿ ಇರಬೇಕು ಅನ್ನೋ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ರೀತಿ ಲಾಬಿ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿಖಾನ್ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಸೂಚಿಸಿ ಅಂತ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.


ಖರ್ಗೆ ನಿರ್ಧಾರದ ಹಿಂದೆ ದೇವೇಗೌಡರ ನೆರಳು


ಖರ್ಗೆ ಹಾಗೂ ಸೋನಿಯಾ ಗಾಂಧಿ ಭೇಟಿ ಹಿಂದೆ ಎಚ್‌.ಡಿ. ದೇವೇಗೌಡರ ಸಲಹೆ ಇದೆ ಎನ್ನಲಾಗಿದೆ. ಖರ್ಗೆ ಭೇಟಿ ಮಾಡಿ ಚರ್ಚೆ ಮಾಡುವಂತೆ ದೇವೇಗೌಡರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮೂಲಕ ಕುಪೇಂದ್ರ ರೆಡ್ಡಿಯವರು ಖರ್ಗೆ ಭೇಟಿ ಮಾಡಿದ್ದರು.


ಸೋನಿಯಾ ಗಾಂಧಿ ಬೆಂಬಲ ಕೇಳಿದ್ದ ದೇವೇಗೌಡ


ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸೂಚನೆ ಮೇರೆಗೆ ಖರ್ಗೆ ಭೇಟಿ ಮಾಡಿ ಕುಪೇಂದ್ರ ರೆಡ್ಡಿ ಮಾತನಾಡಿದ್ದಾರೆ. ಇದಾದ ಬಳಿಕ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿದ ದೇವೇಗೌಡರು, ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.  ಕುಪ್ಪೇಂದ್ರ ರೆಡ್ಡಿ ಪರ ಸೋನಿಯಾ ಅವರ ಬೆಂಬಲ ಕೊಡಿಸಿದರೆ ಮುಂದೆ ಸೂಕ್ತ ಸಂದರ್ಭದಲ್ಲಿ ನಾನು ನಿಮ್ಮ ಜೊತೆ ಇರ್ತೀನಿ ಎಂದಿದ್ದಾರೆ.


ಖರ್ಗೆ ಲಾಬಿಗೆ  ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯೋ ಸಾಧ್ಯತೆ


2023ರಲ್ಲಿ ಅತಂತ್ರ ವಿಧಾನಸಭೆ ಆದರೆ, ಖರ್ಗೆ ಸಿಎಂ ಆಗೋ ಅವಕಾಶ ಸಿಕ್ಕರೆ ದೇವೇಗೌಡರ ಅಗತ್ಯವಾಗುತ್ತದೆ ಅಂತ ಖರ್ಗೆಗೆ ಆಪ್ತರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಸಲಹೆ ಮೇರೆಗೆ ರಾಜ್ಯ ನಾಯಕರ ಗಮನಕ್ಕೂ ಬಾರದೆ ಜೆಡಿಎಸ್ ಅಭ್ಯರ್ಥಿ ಪರ ಖರ್ಗೆ ಲಾಬಿ ಮಾಡಿದ್ದಾರೆ. ಈ ಲಾಬಿಯಿಂದಾಗಿ ಇದೀಗ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಕಣದಿಂದ ಔಟ್ ಆಗುವ ಸಾಧ್ಯತೆ ಇದೆ.


ಇದನ್ನೂ ಓದಿ: CM ಅಂದ್ರೆ Common Man ಅಂತ ಮತ್ತೆ ಪ್ರೂವ್ ಮಾಡಿದ ಬಸವರಾಜ ಬೊಮ್ಮಾಯಿ! ಮಕ್ಕಳೊಂದಿಗೆ ಮಗುವಾದ ನಾಡದೊರೆ


ಸಿದ್ದರಾಮಯ್ಯಗೆ ಭಾರೀ ಮುಖಭಂಗ ಸಾಧ್ಯತೆ

top videos


  ಒಂದು ವೇಳೆ ಈ ಪ್ಲಾನ್ ವರ್ಕ್ ಔಟ್ ಆದರೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಾಳೆಯೇ ನಾಮಪತ್ರ ವಾಪಸ್ ಪಡೆಯಬೇಕಾಗುತ್ತದೆ. ಇನ್ನು ಖರ್ಗೆ ದಾಳಕ್ಕೆ ರಾಜ್ಯ ನಾಯಕರು ಕಂಗಾಲಾಗಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯಗೆ ಶಾಕ್ ಆಗಿದ್ದು, ಖರ್ಗೆ ಪ್ಲಾನ್ ಸಕ್ಸಸ್ ಆದರೆ ಸಿದ್ದರಾಮಯ್ಯಗೆ ಮುಖಭಂಗ ಆಗಲಿದೆ.

  First published: