ನನ್ನನ್ನು ದಲಿತ ಎಂಬ ಕಾರಣಕ್ಕೆ ಸಿಎಂ ಮಾಡುವುದಾದರೆ ಬೇಸರವಾಗುತ್ತದೆ; ಮಲ್ಲಿಕಾರ್ಜುನ್​​​​ ಖರ್ಗೆ

ಕಳೆದ ವರ್ಷ ಸಿದ್ದರಾಮಯ್ಯ ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ದ ಎಂದು ಹೇಳಿಕೆ ನೀಡಿದ್ದರು. ಅಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿದ್ದ ಮಲ್ಲಿಕಾರ್ಜುನ್​​ ಖರ್ಗೆ, ದಲಿತ ಎನ್ನುವ ಕಾರಣಕ್ಕೆ ನನಗೆ ಸಿಎಂ ಸ್ಥಾನ ಕೊಡೋದು ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು.

news18-kannada
Updated:December 4, 2019, 4:16 PM IST
ನನ್ನನ್ನು ದಲಿತ ಎಂಬ ಕಾರಣಕ್ಕೆ ಸಿಎಂ ಮಾಡುವುದಾದರೆ ಬೇಸರವಾಗುತ್ತದೆ; ಮಲ್ಲಿಕಾರ್ಜುನ್​​​​ ಖರ್ಗೆ
ಮಲ್ಲಿಕಾರ್ಜುನ ಖರ್ಗೆ.
  • Share this:
ಬೆಂಗಳೂರು(ಡಿ.04): ಕರ್ನಾಟಕ ವಿಧಾನಸಭಾ ಉಪಚುನಾವಣೆ ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿವೆ. ಕಾಂಗ್ರೆಸ್​​, ಜೆಡಿಎಸ್​​ ಮತ್ತು ಬಿಜೆಪಿ ಉಪಚುನಾವಣೆ ಗೆಲ್ಲಲು ಅಂತಿಮ ಸುತ್ತಿನ ಕಸರತ್ತು ನಡೆಸುತ್ತಿವೆ. ಮೂರು ಪಕ್ಷಗಳ ನಾಯಕರ ರಾಜಕೀಯ ಕೆಸರೆರಚಾಟಗಳು ಮುಂದುವರೆದಿವೆ. ಮತದಾರರ ತೀರ್ಪು ನೀಡುವ ಮುನ್ನವೇ ನಾವೇ ಇಷ್ಟು ಸೀಟು ಗೆಲ್ಲುತ್ತೇವೆ ಎಂಬ ಅಭಿಪ್ರಾಯಕ್ಕೆ ಆಯಾ ಪಕ್ಷದ ರಾಜಕೀಯ ನಾಯಕರು ಬಂದಾಗಿದೆ. ಈ ಚರ್ಚೆಗಳ ನಡುವೆ ನಿಂತು ಹೋಗಿದ್ದ ದಲಿತ ಸಿಎಂ ಕೂಗಿಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.  ಡಿಸೆಂಬರ್​​​ 9ನೇ ತಾರೀಕಿನ ಫಲಿತಾಂಶದ ಬಳಿಕ ಸಿಹಿ ಹಂಚುತ್ತೇನೆ ಎಂಬ ಮಲ್ಲಿಕಾರ್ಜುನ್​​​​​ ಖರ್ಗೆ ಹೇಳಿಕೆಯಿಂದಲೇ ಈ ಚರ್ಚೆ ಶುರುವಾಗಿದೆ.

ರಾಜ್ಯ ರಾಜಕೀಯದಲ್ಲೀಗ ಮತ್ತೆ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಬಾರಿ ಸಿದ್ದರಾಮಯ್ಯ ಬದಲಿಗೆ ಕಾಂಗ್ರೆಸ್​​ನಲ್ಲಿ ಪಕ್ಷದ ಹಿರಿಯ ನಾಯಕರಿಗೆ ಸಿಎಂ ಸ್ಥಾನ ನೀಡಲಾಗುತ್ತದೆ. ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ್​​ ಖರ್ಗೆಗೆ ಸಿಎಂ ಸ್ಥಾನ ಸಿಗಲಿದೆ. ಈ ಮೂಲಕ ದಲಿತ ಸಿಎಂ ಕನಸು ಈಡೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಸ್ವತಃ ಮಲ್ಲಿಕಾರ್ಜುನ್​​ ಖರ್ಗೆ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳ ಮೇಲೆ ಭಾರೀ ಸಿಟ್ಟಾಗಿದ್ದಾರೆ.

ಹೌದು, ಮಾಧ್ಯಮಗಳ ಮುಂದೆಯೇ ದಲಿತ ಸಿಎಂ ವಿಚಾರವಾಗಿ ಮಲ್ಲಿಕಾರ್ಜುನ್​​ ಖರ್ಗೆ ಗರಂ ಆಗಿದ್ದಾರೆ. ಪದೇಪದೇ ನನ್ನ ದಲಿತ ನಾಯಕ ಎಂದು ಏಕೆ ಕರೆಯುತ್ತೀರಾ? ದಲಿತ ಸಿಎಂ ಸ್ಥಾನಕ್ಕೇನು ಮೀಸಲಾತಿ ಇದೆಯಾ? ನನ್ನನ್ನು ದಲಿತ ಎಂದು ಕರೆಯಬೇಡಿ. ನಾನು ದಲಿತ ಎಂಬ ಕಾರಣಕ್ಕೆ ಸಿಎಂ ಮಾಡುವುದಾದರೆ, ಬೇಜಾರು ಆಗುತ್ತಿದೆ. 50 ವರ್ಷದಿಂದ ಕಾಂಗ್ರೆಸ್​​ನಲ್ಲಿ ಇದ್ದೇನೆ. ನನ್ನ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹೀಗಿದ್ದರೂ ನಾನು ದಲಿತ ಸಿಎಂ ಆಗಬೇಕೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಎಸ್​ವೈ ಅಬ್ಬರದ ಪ್ರಚಾರ, ಕಾಂಗ್ರೆಸ್​ ನಾಯಕರ ತಾತ್ಸಾರ, ಗೊಂದಲದಲ್ಲಿದೆ ಜೆಡಿಎಸ್​ ಲೆಕ್ಕಾಚಾರ; ಇದು ಉಪಚುನಾವಣಾ ಸಮಾಚಾರ

ಕಳೆದ ವರ್ಷ ಸಿದ್ದರಾಮಯ್ಯ ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ದ ಎಂದು ಹೇಳಿಕೆ ನೀಡಿದ್ದರು. ಅಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿದ್ದ ಮಲ್ಲಿಕಾರ್ಜುನ್​​ ಖರ್ಗೆ, ದಲಿತ ಎನ್ನುವ ಕಾರಣಕ್ಕೆ ನನಗೆ ಸಿಎಂ ಸ್ಥಾನ ಕೊಡೋದು ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು.

ಹಾಗೆಯೇ ನಾನೊಬ್ಬ ದಲಿತ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ಕೊಡುವುದು ಬೇಡ. ಕಾಂಗ್ರೆಸ್ ಹಿರಿಯ ಮುಖಂಡ ಎಂದು ಅರಿತು ಮುಖ್ಯಮಂತ್ರಿ ಸ್ಥಾನ ನೀಡಿದರೆ ಸ್ವೀಕರಿಸುವೆ. ನಾಲ್ಕು ಐದು ದಶಕಗಳ ಕಾಲ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದ್ದಿದ್ದೇನೆ. ಈ ಹಿಂದೆಯೂ ದಲಿತ ಸಿಎಂ ಪ್ರಸ್ತಾಪವಾಗಿತ್ತು. ಆ ಸಂದರ್ಭದಲ್ಲಿಯೂ ದಲಿತ ಎಂದು ನನಗೆ ಸಿಎಂ ಸ್ಥಾನ ಕೊಡಬೇಡಿ ಎಂದು ನಾನು ಹೇಳಿದ್ದೆ. ಈಗಲೂ ನಾನು ಅದೇ ಮಾತನ್ನು ಹೇಳುತ್ತಿದ್ದೇನೆ. ದಲಿತ ಎನ್ನುವ ಕಾರಣಕ್ಕೆ ಸಿಎಂ ಸ್ಥಾನ ಕೊಡಿ ಎಂದು ಹೈಕಮಾಂಡ್​​ಗೆ ಅರ್ಜಿ ಹಾಕುವುದಿಲ್ಲ ಎಂದು ಕುಟುಕಿದ್ದರು.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ