'ದೊಡ್ಡ ಹುಲಿ' ಖರ್ಗೆಗೆ ಖೆಡ್ಡಾ ತೋಡಲು ಮುಂದಾದ ಮಾಲೀಕಯ್ಯ ಗುತ್ತೇದಾರ್​

news18
Updated:September 6, 2018, 6:32 PM IST
'ದೊಡ್ಡ ಹುಲಿ' ಖರ್ಗೆಗೆ ಖೆಡ್ಡಾ ತೋಡಲು ಮುಂದಾದ ಮಾಲೀಕಯ್ಯ ಗುತ್ತೇದಾರ್​
news18
Updated: September 6, 2018, 6:32 PM IST
ಶಿವರಾಮ ಅಸುಂಡಿ, ನ್ಯೂಸ್​ 18 ಕನ್ನಡ

ಕಲಬುರ್ಗಿ (ಸೆ.6): ದೊಡ್ಡ ಹುಲಿಯನ್ನು ಕೆಡವಲು ಖೆಡ್ಡಾ ತೋಡಬೇಕಾಗಿರುವುದು ಅನಿವಾರ್ಯವಾಗುತ್ತದೆ. ಅದೇ ರೀತಿ ಹಿರಿಯ ನಾಯಕ, ಕೇಂದ್ರ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಟ್ಟಿ ಹಾಕಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವುದಾಗಿ ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್​​  ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಹೈದ್ರಾಬಾದ್​ ಕರ್ನಾಟಕದ ಪ್ರಭಾವಿ ನಾಯಕ. ಅವರನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಅಖಾಡ ಸಿದ್ಧ ಮಾಡಲಾಗುತ್ತಿದ್ದು, ಇದಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ಅವರ ಎದುರಾಳಿಯಾಗಿ ನಿಲ್ಲಿಸಲು ತೀರ್ಮಾನಿಸಲಾಗಿದೆ.  ಹಾಗೇಂದ ಮಾತ್ರಕ್ಕೆ ನಾನೇ ಖರ್ಗೆ ಎದುರು ನಿಲ್ಲುತ್ತೇನೆ ಎಂದಲ್ಲ ಎಂದು ಕೂಡ ತಿಳಿಸಿದರು.

ಇದು ನನ್ನ ಮತ್ತು ಮಲ್ಲಿಕಾರ್ಜುನ ನಡುವಿನ ಯುದ್ಧವಲ್ಲ. ರಾಷ್ಟ್ರಮಟ್ಟದಲ್ಲಿ ಮೋದಿ ವರ್ಸಸ್​ ರಾಹುಲ್ ಗಾಂಧಿ.  ಅದರ ಭಾಗವಾಗಿ ಈ ಯುದ್ಧ. ನಮ್ಮ ಗುರಿ ಏನಿದ್ದರೂ ಹೈದ್ರಾಬಾದ್​ ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಲ್ಲಿ ತುಳಿಯುವ ಪ್ರವೃತ್ತಿ ಹೆಚ್ಚು. ಇದೇ ಉದ್ದೇಶದಿಂದ ನಾನು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದೆ.  ಮಾಜಿ ಸಚಿವ ಬಾಬುರಾವ್​ ಚಿಂಚನಸೂರು ಕೂಡ ಇದೇ ಉದ್ದೇಶದಿಂದ ಬಿಜೆಪಿ ಸೇರಿದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾಂಗ್ರೆಸ್​ ನಾಯಕರು ಬಿಜೆಪಿ ಸೇರಲಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್​ ಅತೃಪ್ತರನ್ನು ನಮ್ಮತ್ತ ಸೆಳೆದುಕೊಳ್ಳುತ್ತಿದ್ದೇವೆ ಎಂದರು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ