ಚಿಕ್ಕಮಗಳೂರು (ಫೆ.24): ಮಲೆನಾಡಿನ ಜೀವನ ಭಾಗವಾಗಿದ್ದ ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಸೇವೆ ಬಂದ್ ಮಾಡಿದ ನೌಕರರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕಳೆದ ಏಂಟು ದಿನಗಳಿಂದ ಧರಣಿ ನಡೆಸುತ್ತಿದ್ದರು. ಈಗ ಸರ್ಕಾರದಿಂದ ಭರವಸೆ ಸಿಕ್ಕ ಹಿನ್ನೆಲೆ ಈ ಧರಣಿಯನ್ನು ಕೈ ಬಿಟ್ಟಿದ್ದಾರೆ.
ಕಾರ್ಮಿಕರೇ ಕಟ್ಟಿ ಬೆಳಸಿದ ಸಂಸ್ಥೆ ಆರ್ಥಿಕ ಮುಕ್ಕಟ್ಟಿಗೆ ಒಳಗಾಗಿದ್ದು, ಆರು ಕೋಟಿ ಸಹಾಯ ನೀರಿಕ್ಷಿಸಿದ್ದರು. ಈ ಕುರಿತು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಕಳೆದ ಒಂದು ವಾರದಿಂದ ಕೊಪ್ಪ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ನೌಕರರು ಧರಣಿ ನಡೆಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿಟಿ ರವಿ ಸೇರಿದಂತೆ ಹಲವರು ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕಾರ್ಮಿಕರಿಂದ ನಡೆಸಿ ಮಾದರಿಯಾಗಿದ್ದ ಸಂಸ್ಥೆ ಮುಚ್ಚಲು ಬಿಡುವುದಿಲ್ಲ. ಬ್ಯಾಂಕ್ನಿಂದ ಸಾಲ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು.
ಇದಾದ ಬಳಿಕ ಮಾಜಿ ಸಚಿವ ಡಿಎಸ್ ಜೀವರಾಜ್ ಖುದ್ದು ಪ್ರತಿಭಟನಾಕಾರರನ್ನು ಭೇಟಿಯಾಗಿ ಮುಷ್ಕರ ನಿಲ್ಲಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ: ಆರ್ಥಿಕ ಸಂಕಷ್ಟ; ಇತಿಹಾಸದ ಪುಟ ಸೇರಿದ ಮಲೆನಾಡಿನ ಸಹಕಾರ ಸಾರಿಗೆ ಬಸ್
ಮುಷ್ಕರ ಅಂತ್ಯವಾದರೂ ಸರ್ಕಾರದಿಂದ ನೆರವು ಸಿಕ್ಕ ಮೇಲಷ್ಟೇ ಬಸ್ ಸಂಚಾರ ಆರಂಭ ಮಾಡಲಾಗುವುದು. ಅಲ್ಲಿಯವರೆಗೂ ಯಾವುದೇ ಬಸ್ ಸಂಚಾರವಿರುವುದಿಲ್ಲ. ಮುಷ್ಕರ ಮಾತ್ರ ಅಂತ್ಯಗೊಳಿಸಲಾಗಿದೆ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ