HOME » NEWS » State » MALEKUDIYA COMMUNITY PEOPLE OPPOSE TO KUKKE SUBRAHMANYA TEMPLE DEVELOPMENT COMMITTEE AKP LG

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿಗೆ ವಿರೋಧ; ಅವಕಾಶ ಕಲ್ಪಿಸದ ಸರ್ಕಾರದ ವಿರುದ್ಧ ಮಲೆಕುಡಿಯ ಜನಾಂಗ ಆಕ್ರೋಶ

ಹಿಂದಿನಿಂದಲೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸ್ಥಳೀಯ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗಕ್ಕೆ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಆದರೆ ಇದೀಗ ಸರಕಾರ ಕ್ಷೇತ್ರದ ಅಭಿವೃದ್ಧಿ ಸಮಿತಿಯಲ್ಲಿ ಅವಕಾಶ ಕಲ್ಪಿಸದಿರುವುದು ಮಲೆಕುಡಿಯ ಜನಾಂಗದಲ್ಲಿ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.

news18-kannada
Updated:November 1, 2020, 8:04 AM IST
ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿಗೆ ವಿರೋಧ; ಅವಕಾಶ ಕಲ್ಪಿಸದ ಸರ್ಕಾರದ ವಿರುದ್ಧ ಮಲೆಕುಡಿಯ ಜನಾಂಗ ಆಕ್ರೋಶ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
  • Share this:
ದಕ್ಷಿಣ ಕನ್ನಡ(ನ.01): ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಶ್ರೀಮಂತ ದೇಗುಲವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತಕ್ಕಾಗಿ ಅಭಿವೃದ್ಧಿ ಸಮಿತಿಯನ್ನು ರಚಿಸಿದೆ. ಸಮಿತಿಯ ಆರು ಸದಸ್ಯರನ್ನು ಈಗಾಗಲೇ ಧಾರ್ಮಿಕ ಧತ್ತಿ ಇಲಾಖೆಯ ಮೂಲಕ ಸರಕಾರ ನೇಮಿಸಿದ್ದು, ಈ ನೇಮಕಕ್ಕೆ ಇದೀಗ ವಿರೋಧ ಕೇಳಿ ಬರಲಾರಂಭಿಸಿದೆ. ಕ್ಷೇತ್ರದ ಮೂಲ ನಿವಾಸಿಗಳಾಗಿರುವ ಮಲೆಕುಡಿಯ ಜನಾಂಗಕ್ಕೆ ಅಭಿವೃದ್ಧಿ ಸಮಿತಿಯಲ್ಲಿ ಅವಕಾಶ ಕಲ್ಪಿಸದಿರುವುದು ಮಲೆಕುಡಿಯ ಜನಾಂಗದ ಆಕ್ರೋಶಕ್ಕೆ ಕಾರಣವಾಗಿದೆ. ಹೆಸರಾಂತ ನಾಗಕ್ಷೇತ್ರವಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದೆ ಇದ್ದಂತಹ ವ್ಯವಸ್ಥಾಪನಾ ಸಮಿತಿಯನ್ನು ವಜಾಗೊಳಿಸಿ ರಾಜ್ಯ ಸರಕಾರ ಇದೀಗ ಕ್ಷೇತ್ರಕ್ಕೆ ಅಭಿವೃದ್ಧಿ ಸಮಿತಿಯನ್ನು ರಚಿಸಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ಸ್ಥಳೀಯವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ 8 ಜನರಿಗೆ ಸದಸ್ಯರಾಗಲು ಅವಕಾಶವಿತ್ತು. ಆದರೆ ಅಭಿವೃದ್ಧಿ ಸಮಿತಿಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ 5 ಜನ ಹಾಗೂ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಚಾಮರಾಜನಗರ ಗಡಿಭಾಗದಲ್ಲಿ ಕನ್ನಡಕ್ಕಿಲ್ಲ ಮಾನ್ಯತೆ: ನಾಮಫಲಕಗಳೆಲ್ಲಾ ತಮಿಳುಮಯ

ಹಿಂದಿನಿಂದಲೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸ್ಥಳೀಯ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗಕ್ಕೆ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಾಧಿಸಲ್ಪಡುತ್ತಿರುವ ದೇವರ ವಿಗ್ರಹ ಇದೇ ಮಲೆಕುಡಿಯ ಜನಾಂಗಕ್ಕೆ ಕಾಡಿನಲ್ಲಿ ಸಿಕ್ಕಿರುವುದು ಎನ್ನುವ ಕಾರಣಕ್ಕಾಗಿ ದೇವಸ್ಥಾನದ ಎಲ್ಲಾ ವ್ಯವಸ್ಥೆಗಳಲ್ಲೂ ಮಲೆಕುಡಿಯ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿತ್ತು. ಅಲ್ಲದೆ ಕ್ಷೇತ್ರದಲ್ಲಿ ವರ್ಷಂಪ್ರತಿ ಷಷ್ಠಿ ಮಹೋತ್ಸವದಲ್ಲಿ ನಡೆಯುವ ದೇವರ ರಥೋತ್ಸವದ ರಥವನ್ನು ಇದೇ ಮಲೆಕುಡಿಯ ಜನಾಂಗವೇ ಸಿದ್ಧಪಡಿಸುತ್ತಿರುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯವೂ ಆಗಿತ್ತು. ಆದರೆ ಇದೀಗ ಸರಕಾರ ಕ್ಷೇತ್ರದ ಅಭಿವೃದ್ಧಿ ಸಮಿತಿಯಲ್ಲಿ ಅವಕಾಶ ಕಲ್ಪಿಸದಿರುವುದು ಮಲೆಕುಡಿಯ ಜನಾಂಗದಲ್ಲಿ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
Youtube Video

ಈ ಸಂಬಂಧ ಪ್ರತಿಕ್ರಿಯಿಸಿರುವ ಮಲೆಕುಡಿಯ ಸಂಘಟನೆಗಳು ಸರಕಾರ ಕೂಡಲೇ ಅಭಿವೃದ್ಧಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು. ಹಾಗೂ ಇದೀಗ ರಚಿಸಿರುವಂತಹ ಸಮಿತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದೆ. ಸರಕಾರ ಈ ಬಗ್ಗೆ ಸ್ಪಂದಿಸದೇ ಹೋದಲ್ಲಿ ಕಾನೂನು ಹಾಗೂ ಇತರ ಹೋರಾಟ ನಡೆಸಲು ತೀರ್ಮಾನಿಸಿದೆ.
Published by: Latha CG
First published: November 1, 2020, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories