ಚಾಮರಾಜನಗರ (ಮಾ.1): ರಾಜ್ಯದ ಪ್ರಖ್ಯಾತ ದೇವಾಲಯಗಳ ಪೈಕಿ ಚಾಮರಾಜ ನಗರದಲ್ಲಿರುವ ಮಲೆ ಮಹದೇಶ್ವರ ದೇವಾಲಯವೂ ಹೌದು. ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ, ತಮ್ಮಿಷ್ಟಾರ್ಥಗಳನ್ನು ಕೋರಿಕೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮಾದಪ್ಪನ ಆದಯವೂ ಹೆಚ್ಚಿದೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ ತಡರಾತ್ರಿವರೆಗೂ ಹುಂಡಿ ಏಣಿಕೆ ಕಾರ್ಯ ನಡೆದೇ ಇತ್ತು. ಈಗ ದೇವಸ್ಥಾನದವರು ಅಧಿಕೃತ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಮಹದೇಶ್ವರ ಕೋಟ್ಯಧೀಶನಾಗಿದ್ದಾನೆ. ಈ ಬಾರಿ ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಹುಂಡಿ ನಿನ್ನೆ ತೆರೆಯಲಾಗಿದ್ದು, 2 .51 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ನಗದು ಜೊತೆಗೆ ಜೊತೆಗೆ 50 ಗ್ರಾಂ ಚಿನ್ನ 2.40 ಕೆ.ಜಿ. ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಈ ಬಾರಿ ಶಿವರಾತ್ರಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿದ್ದರು. ಹೀಗಾಗಿ ಮಹದೇಶ್ವರನ ಆದಾಯ ಹೆಚ್ಚಿದೆ. ಕಳೆದ ವರ್ಷ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆದ ತಿಂಗಳು 2.13 ಕೋಟಿ ರೂಪಾಯಿ ಸಂಗ್ರಹವಾಗಿತ್ತು.
(ವರದಿ: ಎಸ್.ಎಂ. ನಂದೀಶ್)
ಇದನ್ನೂ ಓದಿ: ಬೆಳೆ ರಕ್ಷಣೆ ಹೆಸರಲ್ಲಿ ಪ್ರಾಣಿಗಳ ಮಾರಣಹೋಮ; ಚಾಮರಾಜನಗರದಲ್ಲಿ ಎರಡು ಗಂಡಾನೆ ಸಾವು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ