ಮತ್ತೆ ಕೋಟ್ಯಾಧೀಶನಾದ ಮಲೆ ಮಹದೇಶ್ವರ; ಭಾರೀ ಮೊತ್ತದ ಕಾಣಿಕೆ ಸಂಗ್ರಹ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಚಾಮರಾಜನಗರ ಜಿಲ್ಲೆಯ  ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ ತಡರಾತ್ರಿವರೆಗೂ ಹುಂಡಿ ಏಣಿಕೆ ಕಾರ್ಯ ‌ನಡೆದೇ ಇತ್ತು. ಈಗ ದೇವಸ್ಥಾನದವರು ಅಧಿಕೃತ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಮಹದೇಶ್ವರ ಕೋಟ್ಯಧೀಶನಾಗಿದ್ದಾನೆ.

  • Share this:

    ಚಾಮರಾಜನಗರ (ಜ.29):  ರಾಜ್ಯದ ಪ್ರಖ್ಯಾತ ದೇವಾಲಯಗಳ ಪೈಕಿ ಚಾಮರಾಜ ನಗರದಲ್ಲಿರುವ ಮಲೆ ಮಹದೇಶ್ವರ ದೇವಾಲಯವೂ ಹೌದು. ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ, ತಮ್ಮಿಷ್ಟಾರ್ಥಗಳನ್ನು ಕೋರಿಕೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮಾದಪ್ಪನ ಆದಯವೂ ಹೆಚ್ಚಿದೆ.


    ಚಾಮರಾಜನಗರ ಜಿಲ್ಲೆಯ  ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ ತಡರಾತ್ರಿವರೆಗೂ ಹುಂಡಿ ಏಣಿಕೆ ಕಾರ್ಯ ‌ನಡೆದೇ ಇತ್ತು. ಈಗ ದೇವಸ್ಥಾನದವರು ಅಧಿಕೃತ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಮಹದೇಶ್ವರ ಕೋಟ್ಯಧೀಶನಾಗಿದ್ದಾನೆ. ಈ ಬಾರಿ ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ.


    ಇದನ್ನೂ ಓದಿ: ಕುಡಿಯುವ ನೀರಿನ ಘಟಕದ ಹೆಸರಲ್ಲಿ‌ ನೂರಾರು ಕೋಟಿ ಲೂಟಿ?; ಹಗರಣ ತನಿಖೆಗೆ ಶಾಸಕರಿಂದಲೇ ಆಗ್ರಹ


    ಮಲೆಮಹದೇಶ್ವರ ಬೆಟ್ಟದ ಹುಂಡಿ ನಿನ್ನೆ ತೆರೆಯಲಾಗಿದ್ದು, 1.71 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಈ ಮೂಲಕ ಈ ಬಾರಿಯೂ ಕಾಣಿಕೆ ಮೊತ್ತ ಕೋಟಿ ರೂಪಾಯಿ ಸಂಗ್ರಹವಾಗಿದೆ. ನಗದು ಜೊತೆಗೆ 72 ಗ್ರಾಂ ಚಿನ್ನ, 1.40 ಕೆ.ಜಿ.ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.39 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕಳೆದಬಾರಿಗಿಂತ ಈ ಭಾರಿ 31 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹ ಹೆಚ್ಚಾಗಿದೆ.


    (ವರದಿ: ಎಸ್​.ಎಂ. ನಂದೀಶ್​)

    Published by:Rajesh Duggumane
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು