Male Mahadeshwara swamy Temple: ಇಂದು ರಾತ್ರಿಯಿಂದ ಮೇ. 4ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿಷೇಧ

Male Mahadeshwara swamy Temple | ಜನದಟ್ಟಣೆ ನಿಯಂತ್ರಿಸಲು ಇಂದು ರಾತ್ರಿ 9 ಗಂಟೆಯಿಂದ  ಮೇ. 4ರ ಬೆಳಿಗ್ಗೆ 6 ಗಂಟೆಯವರೆಗೆ  ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಮಲೈಮಹದೇಶ್ವರ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

  • Share this:
ಚಾಮರಾಜನಗರ (ಏ. 21) ಕರ್ನಾಟಕದಲ್ಲಿ ಕೊರೋನಾಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಜನದಟ್ಟಣೆ ನಿಯಂತ್ರಿಸಲು ಇಂದು ರಾತ್ರಿ 9 ಗಂಟೆಯಿಂದ  ಮೇ. 4ರ ಬೆಳಿಗ್ಗೆ 6 ಗಂಟೆಯವರೆಗೆ  ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಮಲೈಮಹದೇಶ್ವರ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆದರೆ, ದೇಗುಲದ ಅರ್ಚಕರು, ಪ್ರಾಧಿಕಾರದ ನೌಕರರು, ಕರ್ತವ್ಯ ನಿರತ ಪ್ರಾಧಿಕಾರದ ಅನುಮತಿ ಪಡೆದ ಅಧಿಕಾರಿ, ಸಿಬ್ಬಂದಿ ಹಾಗೂ ಗಣ್ಯರಿಗೆ  ಅವಕಾಶ ಕಲ್ಪಿಸಲಾಗಿದೆ.

ಇದಲ್ಲದೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳ ವಾಹನ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಇರುವ ತಾಳಬೆಟ್ಟದಿಂದ ಮುಂದಕ್ಕೆ ಭಕ್ತಾದಿಗಳ ವಾಹನಗಳಿಗೆ ಪ್ರವೇಶವಿಲ್ಲ, ಸ್ಥಳೀಯ ವಾಹನಗಳು ಹಾಗು ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆೆ.

ಬೆಟ್ಟದ ವಸತಿಗೃಹ, ಕಾಟೇಜು, ಡಾರ್ಮೆಟರಿಗಳಲ್ಲಿ  ಭಕ್ತರ ವಾಸ್ತವ್ಯ ನಿಷೇಧಿಸಲಾಗಿದ್ದು ಮಹದೇಶ್ವರನ ಚಿನ್ನದ ತೇರು, ಅಭಿಷೇಕ, ಪೂಜೆ ಮತ್ತಿತರ ಸೇವೆಗಳಿಗೆ ಆನ್ ಲೈನ್ ಬುಕಿಂಗ್ ಗೆ ಅವಕಾಶ ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ನಲ್ಲಿ ಬುಕ್ ಮಾಡಿದವರ ಅನುಪಸ್ಥಿತಿಯಲ್ಲಿ ಅವರ ಹೆಸರಿನಲ್ಲಿ  ಪೂಜೆ ಅಥವಾ ಸೇವೆ ನಡೆಸಲಾಗುವುದು ಎಂದು ಮಲೈ ಮಹದೇಶ್ವರ ಸ್ವಾಮಿ  ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ  ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: DK Shivakumar: ಕೊರೋನಾದಿಂದ ಜನರನ್ನು ದೇವರೇ ಕಾಪಾಡಬೇಕು; ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಲೇವಡಿ

ದೇವಾಲಯದಲ್ಲಿ ಭಕ್ತಾದಿಗಳಿಗೆ ಪ್ರವೇಶವಿಲ್ಲವಾದ್ದರಿಂದ, ದಾಸೋಹ, ಲಾಡು ಪ್ರಸಾದ, ತೀರ್ಥ, ನೈವೇದ್ಯ ಪ್ರಸಾದ ಇತ್ಯಾದಿ ಭಕ್ತಾದಿಗಳಿಗೆ ವಿತರಿಸಲ್ಪಡುವುದಿಲ್ಲ. ಚಿನ್ನದ ತೇರಿನ ಸೇವೆ ಹಾಗೂ ಇತರೇ ವಾಹನಗಳ ಸೇವೆಗಳಿಗೆ ಸಹಾ‌‌ ಸಾರ್ವಜನಿಕರಿಗೆ ಮುಕ್ತ ಸೇವೆ ಲಭ್ಯವಿರುವುದಿಲ್ಲ.‌ ಆದರೆ ಆನ್‌ಲೈನ್ ಬುಕಿಂಗ್ ಮಾಡಬಹುದು.

ಅಂಗಡಿ ವ್ಯಾಪಾರಿಗಳು ಸ್ಥಳೀಯವಾಗಿ ಬೆಳಗಿನ‌ ಹೊತ್ತಿನಲ್ಲಿ ವ್ಯಾಪಾರ ಮಾಡಲು    ಅಭ್ಯಂತರವಿರುವುದಿಲ್ಲ.ಅಭಿಷೇಕ ಮತ್ತು ಇತರೇ ಸೇವೆಗಳನ್ನು ಭಕ್ತಾದಿಗಳು (ಚಿನ್ನದ‌ತೇರು, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ವಾಹನ, ಅಭಿಷೇಕ ಇತ್ಯಾದಿ) ಆನ್‌ಲೈನ್‌ನಲ್ಲಿ ಬುಕ್ ಮಾಡಿದಲ್ಲಿ ಮಾತ್ರ (ಆನ್‌ಲೈನ್ ಮೂಲಕ ಪಾವತಿಸಿ ಕಾಯ್ದಿರಿಸಿದಲ್ಲಿ) ಅವರ ಹೆಸರಿನಲ್ಲಿ ಅವರ ಅನುಪಸ್ಥಿತಿಯಲ್ಲಿ ಪೂಜೆ/ಸೇವೆ ನೆರವೇರಿಸಲಾಗುವುದು. ಆದರೆ ಕಳಸ/ಲಾಡು ಇತ್ಯಾದಿ‌‌ ಕಳಿಸಲಾಗುವುದಿಲ್ಲ ಹಾಗೂ ಖುದ್ದು ಟಿಕೇಟು ಪಡೆಯಲೂ ಅವಕಾಶವಿರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಆನ್‌ಲೈನ್ ನಲ್ಲಿ ಈ ಸೇವೆಗಳನ್ನು‌ ಕಾಯ್ದಿರಿಸಲು  ವೆಬ್‌ಸೈಟ್ www.mmhillstemple.comಗೆ‌ ಲಾಗಿನ್ ಆಗಿ ಮಾಹಿತಿ‌ ತುಂಬಿ ಪಾವತಿಸಬಹುದು. ಯಾವುದೇ ಸಂದೇಹವಿದ್ದಲ್ಲಿ ಅಥವಾ ಸ್ಪಷ್ಠೀಕರಣ ಬೇಕಿದ್ದಲ್ಲಿ 24 x 7 ಸಹಾಯವಾಣಿ ಸಂಖ್ಯೆ 1860 425 4350 ಗೆ ಕರೆ ಮಾಡಬಹುದಾಗಿದೆ.

ಒಟ್ಟಾರೆ, ದೇಗುಲಕ್ಕೆ ಭಕ್ತರಿಗೆ ಪ್ರವೇಶ ಇಲ್ಲದಿದ್ದರೂ ಮಹದೇಶ್ವರ ನಿಗೆ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆಯಲಿವೆ.

(ವರದಿ: ಎಸ್.ಎಂ. ನಂದೀಶ್)

,
Published by:Sushma Chakre
First published: