Covid: ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ, ಚಿಕ್ಕಲ್ಲೂರು ಜಾತ್ರೆ ರದ್ದು

ಉಳಿದ ದಿನಗಳಲ್ಲಿ ಜನವರಿ 19 ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಇರಲಿದ್ದು, ಚಿನ್ನದತೇರು, ಬಸವವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಎಲ್ಲಾ ಉತ್ಸವ ರದ್ದಾಗಲಿದೆ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

  • Share this:
ಚಾಮರಾಜನಗರ (ಜ. 07):  ರಾಜ್ಯದಲ್ಲಿ  ಕೊರೋನಾ ಸೋಂಕು (Covid) ಹೆಚ್ಚಳವಾಗುತ್ತಿರುವುದನ್ನು ತಡೆಗಟ್ಟಲು  ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಈ ಹಿನ್ನಲೆ ಚಾಮರಾಜನಗರ (Chamarajanagar) ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೈ ಮಹದೇಶ್ವರ (Male mahadeshwara Temple) ಬೆಟ್ಟಕ್ಕೆ ಜ.7 ರ ಸಂಜೆ 5 ಗಂಟೆಯಿಂದ ಜ.10 ರ ಬೆಳಿಗ್ಗೆ 7 ಗಂಟೆಯವರೆಗೆ  ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೆ ಶುಕ್ರವಾರ, ಶನಿವಾರ ಭಾನುವಾರ ಭಕ್ತರ ವಾಸ್ತವ್ಯಕ್ಕೂ ನಿಷೇಧ ಹೇರಲಾಗಿದೆ.

ವಾರದ ದಿನಗಳಲ್ಲಿ ಮಾತ್ರ ದರ್ಶನಕ್ಕೆ ಅವಕಾಶ

ಉಳಿದ ದಿನಗಳಲ್ಲಿ ಜನವರಿ 19 ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಇರಲಿದ್ದು, ಚಿನ್ನದತೇರು, ಬಸವ ವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಎಲ್ಲಾ ಉತ್ಸವ ಹಾಗೂ ಸೇವೆಗಳನ್ನು  ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದ್ದು, ಲಾಡುಪ್ರಸಾದ ಸಹ ಇರುವುದಿಲ್ಲ ಎಂದು ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವಸ್ವಾಮಿ ತಿಳಿಸಿದ್ದಾರೆ.

ಸಾಂಪ್ರದಾಯಿಕ ಹಾಗೂ ದೈನಂದಿನ ಪೂಜಾ ವಿಧಿವಿಧಾನಗಳು ಎಂದಿನಂತೆ ನಡೆಯಲಿವೆ‌ ವೀಕೆಂಡ್ ನಲ್ಲಿ ಭಕ್ತರಿಗೆ ಅವಕಾಶ ಇರುವುದಿಲ್ಲ. ಉಳಿದ ದಿನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ

ಚಿಕ್ಕಲ್ಲೂರು ಜಾತ್ರೆಯು ರದ್ದು

ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿಯೂ ಪ್ರಸಿದ್ಧ ಹನೂರು ತಾಲೂಕಿನ ಪ್ರಸಿದ್ದ ಚಿಕ್ಕಲ್ಲೂರು ಜಾತ್ರೆ ನಿಷೇಧಿಸಲಾಗಿದೆ. ಈ ವರ್ಷ ಚಿಕ್ಕಲ್ಲೂರು ಸಿದ್ದಾಪ್ಪಾಜಿ ಜಾತ್ರೆ ಜ. 17 ರಿಂದ 21 ರವರೆಗೆ ನಿಗದಿಯಾಗಿತ್ತು. ಕೊರೋನಾ ಸೋಂಕು ತಡೆಗಟ್ಟಲು  ಸರ್ಕಾರ ಹೊರಡಿಸುರುವ  ಮಾರ್ಗಸೂಚಿ ಅನ್ವಯ ಜಾತ್ರೆಗೆ ನಿರ್ಬಂಧ ಹೇರಲಾಗಿದೆ.

ಜ. 17 ರಿಂದ 21 ರವರೆಗೆ ಐದು ದಿನಗಳ  ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಜಿಲ್ಲಾಡಳಿತದಿಂದ ಅನುಮತಿ ನೀಡಬೇಕು.  ಜಾತ್ರೆ ಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬಿ. ಜಿ. ಪುರದ ಮಂಟೇಸ್ಚಾಮಿ ಮಠದಿಂದ ಚಾಮರಾಜನಗರ ಜಿಲ್ಲಾಧಿಕಾರಿಗರ ಪತ್ರ ಬರೆದು ಮನವಿ ಮಾಡಲಾಗಿತ್ತು

ಇದನ್ನು ಓದಿ: ದೇವತೆಗಳು ನೆಲೆಸಿರುವ ಈ 6ಮರ ಪೂಜಿಸಿದ್ರೆ ಒಳಿತಾಗಲಿದೆಯಂತೆ

ಪ್ರತಿನಿತ್ಯದ ಸೇವೆ ಪೂಜಾ ಕೈಂಕರ್ಯಗಳನ್ನು ಮಾತ್ರ ಅವಕಾಶ

ಆದರೆ ಸರ್ಕಾರದ ಮಾರ್ಗಸೂಚಿ ಅನ್ವಯ ದೇವಸ್ಥಾನ, ಮಸೀದಿ, ಚರ್ಚ್ ಹಾಗು ಇತರೆ ಧಾರ್ಮಿಕ ಸ್ಥಳಗಳಲ್ಲಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಪ್ರತಿ ನಿತ್ಯದ ಸೇವೆ, ಪೂಜಾ ಕೈಂಕರ್ಯ ನಡೆಸಲು ಹಾಗು ಜಾತ್ರೆಗಳು,  ದೇವಸ್ಥಾನಗಳಲ್ಲಿ ನಡೆಯುವ ಹಬ್ಬ, ಮೆರವಣಿಗೆ ಮತ್ತು ಧಾರ್ಮಿಕ ಸಭೆಗಳನ್ನು ನಿಷೇಧಿಸಿ ಆದೇಶಿಸಲಾಗಿದೆ. ಆದ ಕಾರಣ ಚಿಕ್ಕಲ್ಲೂರು ಜಾತ್ರೆಯನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಜ. 17 ರಿಂದ 21 ರವರೆಗೆ ಪ್ರತಿನಿತ್ಯದ ಸೇವೆ ಪೂಜಾ ಕೈಂಕರ್ಯಗಳನ್ನು ಮಾತ್ರ ನಡೆಸಲು ಅನುಮತಿ ನೀಡಲಾಗಿದೆ ಹಾಗೂ ಜಾತ್ರೆ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಮಂಟೇಸ್ವಾಮಿ ಮಠಕ್ಕೆ ಹಿಂಬರಹ ನೀಡಿದ್ದಾರೆ.

ಇದನ್ನು ಓದಿ: ಶಿವನ ಢಮರುಗ, ತ್ರಿಶೂಲ, ನಂದಿ ಏನನ್ನು ಪ್ರತಿನಿಧಿಸುತ್ತೆ; ಇದರ ಹಿಂದಿನ ಕಥೆ ಏನು?

ಕಳೆದ ವರ್ಷವೂ ರದ್ದಾಗಿದ್ದ ಜಾತ್ರೆ

ಜನವರಿಯಲ್ಲಿ ನಡೆಯುವ 5 ದಿನಗಳ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆ ಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಇಲ್ಲಿಯೇ ಬಿಡಾರ ಹೂಡಿ ಹರಕೆ ತೀರಿಸುತ್ತಿದ್ದರು. ಸೂರ್ಯಮಂಡಲ, ಪಂಕ್ತಿಸೇವೆ ಮೊದಲಾದ ಪೂಜೆ ಪುರಸ್ಕಾರಗಳಲ್ಲಿ ಭಾಗವಹಿಸುತ್ತಿದ್ದರು. ಕಳೆದ ವರ್ಷವೂ ಸಹ ಕೋವಿಡ್-19 ಹಿನ್ನೆಲೆಯಲ್ಲಿ ಜಾತ್ರೆ ನಿಷೇಧಿಸಲಾಗಿತ್ತು. 100 ಜನರ ಮಿತಿಯಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನಡೆಸಲಿ ಜಿಲ್ಲಾಡಳಿತ ಅನುಮತಿ ನೀಡಿತ್ತು
Published by:Seema R
First published: